लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
24/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬದ್ರಿಯ್ಯಿನ್ ಕೇಂದ್ರ ಜುಮ್ಮಾ ಮಸೀದಿ ಹಾಗೂ ಅಲ್ ಇಹಸಾನ್ ಯೂತ್ ಅಸೋಸಿಯೇಷನ್ ವತಿಯಿಂದ ಮಿಲಾದ್ ಸಂಗಮ ಹಾಗೂ ಬೃಹತ್ ರಕ್ತದಾನ ಶಿಬಿರ*..

1 min read

*ಬದ್ರಿಯ್ಯಿನ್ ಕೇಂದ್ರ ಜುಮ್ಮಾ ಮಸೀದಿ ಹಾಗೂ ಅಲ್
ಇಹಸಾನ್ ಯೂತ್ ಅಸೋಸಿಯೇಷನ್ ವತಿಯಿಂದ ಮಿಲಾದ್ ಸಂಗಮ ಹಾಗೂ ಬೃಹತ್ ರಕ್ತದಾನ ಶಿಬಿರ*

ಮೂಡಿಗೆರೆ:ಬದ್ರಿಯ್ಯಿನ್ ಕೇಂದ್ರ ಜುಮ್ಮಾ ಮಸೀದಿ ಹಾಗೂ ಅಲ್
ಇಹಸಾನ್ ಯೂತ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ಮಿಲಾದ್ ಸಂಗಮ ಕಾರ್ಯಕ್ರಮವನ್ನು ಜಮ್ಮಾ ಮಸೀದಿಯಲ್ಲಿ ಭಕ್ತಿ ಬಾವದೊಂದಿಗೆ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಕೆ.ಜೆ.ಎಂ ಅಧ್ಯಕ್ಷ ಎ. ಎಂ.ಶರೀಫ್ ಹಾಜಿ ಅವರು ಮುಹಮ್ಮದ್‌ ಪೈಗಂಬರರ ಬೋಧನೆ ಇಸ್ಲಾಂಗೆ ಸೀಮಿತವಲ್ಲ, ಇಡೀ ಮಾನವಕುಲಕ್ಕೆ ದಾರಿದೀಪ
ಇಸ್ಲಾಂನ ಪರಮೋಚ್ಚ ಧರ್ಮಗುರು ಪ್ರವಾದಿ ಮುಹಮ್ಮದರ ಜನ್ಮದಿನವನ್ನು ಈದ್‌ ಮಿಲಾದ್‌ ಎಂದು ಆಚರಿಸಲಾಗುತ್ತದೆ. 6ನೇ ಶತಮಾನದಲ್ಲಿಯೇ ಉಚ್ಚ-ನೀಚ ಮನೋಭಾವದ ವಿರುದ್ಧ ಸಮರ ಸಾರಿದ್ದವರು ಪ್ರವಾದಿ ಮುಹಮ್ಮದ್‌.ಅರೇಬಿಯಾದ ಮರುಭೂಮಿಯಲ್ಲಿ ಆಧ್ಯಾತ್ಮಿಕ ಪ್ರವಾಹವನ್ನು ಹರಿಸಿ, ಧಾರ್ಮಿಕ ಬೀಜವನ್ನು ಬಿತ್ತಿ, ಉಚ್ಚ ಸಂಸ್ಕೃತಿಯ ಬೆಳಕನ್ನು ಪಡೆದು ಇಡೀ ಜಗತ್ತಿಗೆ ಹಂಚಿದ ಪುಣ್ಯಜೀವಿ ಮುಹಮ್ಮದರು.

‘ಲಾ ಇಲಾಹ ಇಲ್ಲಲ್ಲಾಹ್‌’ ಮಂತ್ರಜ್ಯೋತಿಯಿಂದ ಇಡೀ ವಿಶ್ವವನ್ನೇ ಬೆಳಗಿದ ಮಹಾತ್ಮರವರು. ಇತಿಹಾಸವನ್ನು ನಿರ್ಮಿಸಿದ ಈ ಭವ್ಯ ಮಾನವ ಈ ನೆಲದ ಮೇಲೆ ಹರಿದಾಡದಿದ್ದರೆ ಜಗತ್ತು ಅಜ್ಞಾನಾಂಧಕಾರದಲ್ಲಿರುತ್ತಿತ್ತು ಎಂದರು

ಇದೆ ವೇಳೆ ಸಂಘಟನೆ ಆಯೋಜಿಸಿದ್ದ ಬೃಹತ್ ರಕ್ತ ದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೂಡಿಗೆರೆ ಠಾಣಾಧಿಕಾರಿ ಹರ್ಷವರ್ಧನ್ ಇಂತಹ ಸಹಸ್ರಾರು ದಾರ್ಶನಿಕರು ಪ್ರವಾದಿ ಮುಹಮ್ಮದ್‌ರ ಮಹಾನ್‌ ವ್ಯಕ್ತಿತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರ ಜೀವನ ತೆರೆದ ಗ್ರಂಥ. ದೇಶ, ಭಾಷೆ, ವರ್ಗ, ವರ್ಣ, ಲಿಂಗ, ಜಾತಿ, ಮತ ಧರ್ಮಭೇದವಿಲ್ಲದೆ ಪ್ರತಿಯೊಬ್ಬ ಮಾನವನೂ ಆ ವ್ಯಕ್ತಿತ್ವದಿಂದ ಮಾರ್ಗದರ್ಶನ ಪಡೆಯಬಹುದು, ಆ ಮಾರ್ಗದರ್ಶನದಿಂದ ಒಂದು ಯಶಸ್ವಿ ಜೀವನವನ್ನು ನಡೆಸಬಹುದು. ಇಂತಹ ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಯುವ ಸಮೂಹ ಬದುಕಿನಲ್ಲಿ ರೂಡಿಸಿಕೊಂಡು ಬದುಕಬೇಕು ಎಂದರು

ರಕ್ತದಾನವು ಅತ್ಯಂತ ಶ್ರೇಷ್ಠ ಹಾಗೂ ಮಾನವೀಯತೆಯ ಕಾರ್ಯವಾಗಿದೆ. ಇದು ಮತ್ತೊಬ್ಬರ ಜೀವವನ್ನು ಉಳಿಸುತ್ತದೆ. ವಿಜ್ಞಾನವು ಎಷ್ಟೇ ಬೆಳೆದಿದ್ದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲವಾದ್ದರಿಂದ, ರಕ್ತದಾನದ ಮೂಲಕ ಮಾತ್ರ ರಕ್ತದ ಕೊರತೆಯನ್ನು ನೀಗಿಸಲು ಸಾಧ್ಯ.ರಕ್ತದಾನದದಿಂದ ಅಪಘಾತಕ್ಕೊಳಗಾದವರು, ಶಸ್ತ್ರಚಿಕಿತ್ಸೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ ತುರ್ತಾಗಿ ಜೀವ ಉಳಿಸಲು ಸಾಧ್ಯ ಎಂದರು.

ರಕ್ತದಾನ ಶಿಬಿರದಲ್ಲಿ ಯುನಿಟ್ ಸಂಗ್ರಹವಾಗಿದ್ದು, ಅರಳಗುಪ್ಪೆ ಮಲ್ಲೇಗೌಡ ಆಸ್ಪತ್ರೆ ಸಿಬ್ಬಂದಿಗಳು ರಕ್ತ ಸಂಗ್ರಹಿಸಿದರು

ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನ ಹಾಗೂ ಮಕ್ಕಳ ಪರಿಪಾಲನೆ ವಿಷಯವಾಗಿ ಮದರ್ರಿಸ್ ಎಂ. ಜೆ. ಎಂ,ಕಕ್ಕುಂಜೆಯ ಬಹು!ಅಬುಬಕ್ಕರ್ ಸಿದ್ದಿಕ್ ಜಲಾಲಿ ಅವರು ತಿಳಿಸಿದರು ಹಾಗೂ ಕಾನೂನು ಅರಿವು ಕುರಿತಾಗಿ ಮೂಡಿಗೆರೆ ವೃತ್ತ ನಿರೀಕ್ಷಿಕ ರಾಜಶೇಖರ್ ಅವರು ಸಾರ್ವಜನಿಕರಿಗೆ ತಿಳಿಸಿದರುಇದೇ ವೇಳೆ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಬಿ.ಕೆ ಜೆ.ಎಂ ಅಧ್ಯಕ್ಷ ಎ. ಎಂ.ಶರೀಫ್ ಹಾಜಿ ಉಪಾಧ್ಯಕ್ಷ ಇಬ್ರಾಹಿಂ ಯೂತ್ ಅಸೋಸಿಯೇಷನ್ ಅಧ್ಯಕ್ಷ ಅಶ್ರಫ್,ವೈದ್ಯರಾದ ಡಾ. ಭರತ್, ಸಮಾಜ ಸೇವಕರಾದ ಫಿಶ್ ಮೋಣು,ಸೇರಿದಂತೆ ಜಮ್ಮಾ ಮಸೀದಿ ಹಾಗೂ ಯೂತ್ ಅಸೋಸಿಯೇಷನ್ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು

About Author

Leave a Reply

Your email address will not be published. Required fields are marked *

You may have missed