लाइव कैलेंडर

September 2026
M T W T F S S
 123456
78910111213
14151617181920
21222324252627
282930  
15/09/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪರಿಸರ ಉಳಿಸುವಲ್ಲಿ ಜಾಗೃತಿ ಮೂಡಿಸುವುದು ಅಗತ್ಯ: ಟಿ. ರಾಜಶೇಖರ್….

1 min read

ಪರಿಸರ ಉಳಿಸುವಲ್ಲಿ ಜಾಗೃತಿ ಮೂಡಿಸುವುದು ಅಗತ್ಯ: ಟಿ. ರಾಜಶೇಖರ್

ಚಿಕ್ಕಮಗಳೂರು: ಪ್ರತಿಯೊಬ್ಬರಲ್ಲಿ ಪರಿಸರ ಉಳಿಸುವ ಬಗ್ಗೆ ಕಾಳಜೆ ಸ್ವಚ್ಚತೆ ಮೂಲಕ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

ಅವರು ಇಂದು ಜೆವಿಎಸ್ ಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿರ್ಮೂಲನೆ ಕುರಿತು ಮಾತನಾಡಿದರು.

ಜಿಲ್ಲೆ ಪರಿಸರದ ಮಡಿಲಾಗಿದ್ದು ದಟ್ಟ ಅರಣ್ಯ ನದಿ ಮೂಲಗಳನ್ನು ಹೊಂದಿರುವ ಪ್ರವಾಸೋದ್ಯಮಕ್ಕೆ ಪೂರಕವಾದ ವಿಶೇಷ ಜಿಲ್ಲೆಯಾಗಿದ್ದು, ಪರಿಸರ ಉಳಿದರೆ ಆರೋಗ್ಯವಂತ ಜೀವ ಸಂಕುಲಗಳು ಸಮೃದ್ಧಿ ಜೀವನಕ್ಕೆ ನಾಂದಿಯಾಗುತ್ತದೆ ಎಂದರು.

ಮನೆಗೊಂದು ಮಗು ಮಗುವಿಗೊಂದು ಮರ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಯೊಬ್ಬರು ಮನೆಗೊಂದು ಮರ ನೆಟ್ಟು ಪೋಷಿಸಿದರೆ ಒಳ್ಳೆಯ ಗಾಳಿ, ಹಣ್ಣು, ಹೂವು ಕೊಡುತ್ತದೆ ಈ ನಿಟ್ಟಿನಲ್ಲಿ ಪರಿಸರ ಕಾಪಾಡಲು ಮುಂದಾಗಬೇಕು ಎಂದು ಹೇಳಿದರು.

ಚಿಕ್ಕ ಚಾಕ್ಲೀಟ್ ಕವರ್‌ನಿಂದ ಪ್ರಾರಂಭವಾಗಿ ದೊಡ್ಡ-ದೊಡ್ಡ ಬಾಟೆಲ್, ಕೈ ಚೀಲಗಳು ಬಳಸುತ್ತಿದ್ದು ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ವಿಷಾಧಿಸಿದ ಅವರು ಇದನ್ನು ಮನೆಗಳಲ್ಲಿಯೇ ನಿಯಂತ್ರಿಸಿದಾಗ ಮಾತ್ರ ಪರಿಸರ ಉಳಿಸಲು ಸಾದ್ಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ ಮಲ್ಲೇಶ್, ಶಾಲಾ ಕಾರ್ಯದರ್ಶಿ ರತೀಶ್ ಕುಮಾರ್, ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ, ಶಾಲಾ ಮುಖ್ಯ ಶಿಕ್ಷಕ ವಿಜಿತ್, ಸಿಇಒ ಕುಳ್ಳೇಗೌಡ, ಮ್ಯಾನೇಜರ್ ತೇಜಸ್ ಮೂರ್ತಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed