day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಸಂಚಲನ ಮೂಡಿಸಿದ ಕಡೂರಿನ ಕನ್ನಡದ ಕುವರ ಸಂಚಾರಿಗೆ,,ಭಾವಪೂರ್ಣ ವಿದಾಯಗಳು, #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

ಸಂಚಲನ ಮೂಡಿಸಿದ ಕಡೂರಿನ ಕನ್ನಡದ ಕುವರ ಸಂಚಾರಿಗೆ,,ಭಾವಪೂರ್ಣ ವಿದಾಯಗಳು, #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಸಂಚಲನ ಮೂಡಿಸಿದ ಕಡೂರಿನ ಕನ್ನಡದ ಕುವರ ಸಂಚಾರಿಗೆ,,,,,
ಭಾವಪೂರ್ಣ ವಿದಾಯಗಳು,
🌹🌹🙏🙏🙏🌹🌹
————————————-
ಕನ್ನಡ ಸಾಹಿತ್ಯ ಪರಿಷತ್ತು,
ಶರಣ ಸಾಹಿತ್ಯ ಪರಿಷತ್ತು,
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ ಚಿಕ್ಕಮಗಳೂರು ವತಿಯಿಂದ,,,
==================
ರಂಗಭೂಮಿಗಾಗಿಯೇ ರಂಗಾಪುರದಿಂದ ಜನ್ಮವೇತ್ತಿ ಬಂದಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ರಂಗಾಪುರದ ಈ ಕನ್ನಡದ ರಂಗ ಪ್ರತಿಭೆ ರಾತ್ರಿ ಹೊತ್ತು ಅರಳುವ ಭ್ರಹ್ಮ ಕಮಲದಂತೆ ಒಂದು ಸೂಜಿಗವಾಗಿ ಅರಳಿ ಅಷ್ಟೆ ಬೇಗ ಮುದುಡಿಹೋಗಿದ್ದು ನಾಳೆಗೆ ಇತಿಹಾಸವಾಗುತಿದೆ ,

ಎಷ್ಟು ದಿವಸ ಬದುಕಿದ ಅನ್ನುವದಕಿಂತ ಹೇಗೆ ಬದುಕಿದ ಎಂಬ ಒಂದು ನಾಡ್ನುಡಿ ಇದೆ, ಅದರಂತೆ ಈ ಗೆಳೆಯ ಬದುಕನ್ನು, ಬದುಕಿದ ರೀತಿಯನ್ನು ಮನಗಾಣಬೇಕಾಗಿದೆ,

ಓದಿದ್ದು ಇಂಜಿನಿಯರಿಂಗ್ ತಂತ್ರಜ್ಞಾನ, ಆಗಿದ್ದು ಅದೇ ಕ್ಷೇತ್ರದಲ್ಲಿ ಉಪನ್ಯಾಸಕ, ಆದರೆ ಅವ್ವ, ಅಪ್ಪನಿಂದ ರಕ್ತಗತವಾಗಿ ಬಂದಿದ್ದ ಹಾಡು, ಕುಣಿತ ನಾಟಕದ ರಂಗಭೂಮಿಯ ಗೀಳು ಈ ಗೆಳೆಯನನ್ನು ಅಲ್ಲಿರಲು ಬಿಡದೆ ಸಂಚಾರಿ ಎಂಬ ಹೆಸರಿನ ರಂಗ ತಂಡ ಕಟ್ಟಿಕೊಂಡು ನಾಟಕದ ನಟನಾಗಿ, ನಿರ್ದೇಶಕನಾಗಿ ಊರೂರು ಅಲೆಯುತಿದ್ದ
ಬಿ, ವಿಜಯಕುಮಾರ್ ಎಂಬ ಈ ಕಲಾ ಪಟು ಮುಂದೆ ಸಂಚಾರಿ ವಿಜಯ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2011 ರಲ್ಲಿ, ಅದು ರೈತ ಪಾತ್ರಧಾರಿಯಾಗಿ “ಹರಿವು”ಎಂಬ ಸಿನಿಮಾದ ಮೂಲಕ ,

ಸಿನಿಮಾ ಲೋಕ ಆಳಿದ್ದು ಕೇವಲ ಒಂದೇ ಒಂದು ದಶಕ ಅಷ್ಟೆ, 2011ರಿಂದ 2021ರ ವರೆಗೆ, ಈ ಒಂದು ದಶಕದ ಅವಧಿಯಲ್ಲಿ “ನಾನು ಅವನಲ್ಲ ಅವಳು “ಎಂಬ ಚಿತ್ರದಲ್ಲಿ ಮಂಗಳಮುಖಿ ಪಾತ್ರದ ಮನೋಜ್ಞ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಕನ್ನಡಿಗರಿಗೆ ತಂದು ಕೊಟ್ಟಿದ್ದು ಅದು ಕನ್ನಡಿಗರಾದ ನಮಗೆಲ್ಲ ಒಂದು ದೊಡ್ಡ ಹೆಮ್ಮೆ,

ಒಟ್ಟು ನಟಿಸಿದ ಸಿನಿಮಾ ಹತ್ತಿರ ಹತ್ತಿರ 20ಅಷ್ಟೆ, ಆದರೆ ಈ ಪರಿ, ಈ ಪಾಠಿ , ಈ ಭರಾಟೆಯಲ್ಲಿ ಕನ್ನಡದ ನೆಲವನ್ನು, ಕನ್ನಡಿಗರ ಹೃದಯವನ್ನು ಬಡಿದಿದ್ದಾನೆ ಎನ್ನುವುದಕ್ಕೆ ನೆನ್ನೆ ದಿನ ಸಾಕ್ಷಿಯಾಗಿಬಿಟ್ಟಿತು,

ನಮ್ಮ ಈ ಹೆಮ್ಮೆಯ ಸಂಚಾರಿ,,,, ನಾಟಕ, ಸಿನಿಮಾ, ಹಾಡು ಪಾಡಿಗೆ ಮಾತ್ರ ಸೀಮಿತವಾದ ಜೀವವಲ್ಲ,

ಇಡಿ ಸಮ್ರಮವನ್ನು ಕಿತ್ತುಕೊಂಡ ಕೊರೊನದ ಕಾಲದಲ್ಲಿ ಸಂಕಷ್ಟದಲ್ಲಿದ್ದವರಿಗೆ ಈ ಸಂಚಾರಿ ತನ್ನ ಸಂಚಾರದ ಮೂಲಕ ಸೇವೆ ಗೈದಿದ್ದು ಅನುಪಮ,

ಅದು, ಹಸಿದವರಿಗೆ ಅನ್ನ ಕೊಟ್ಟ, ಉಸಿರು ತಂಡದ ಮೂಲಕ ಗಾಳಿ ಕೊಟ್ಟ, (ಆಕ್ಸಿಜನ್ )ಜೊತೆಗೆ, ಅ ಗೆಳೆಯ ಕೊಡ ಎಣಿಸಿರಲಿಲ್ಲ, ನಾವ್ಯಾರು ಸಹ ಭಾವಿಸಿರಲಿಲ್ಲ, ಸತ್ತರು ಸಾಯದಂತ ಕಠೋರ ಸ್ಥಿತಿಗೆ ಹೋಗಿ ಜೀವ ಇನ್ನೂ ಇದ್ದಾಗಲೆ ತನ್ನ ದೇಹದ ಬಹುಬಾಗ ಅಂಗಾಂಗಗಳನ್ನು ದಾನಮಾಡಿ ಧಾನಶೂರ ಕರ್ಣನ ತ್ಯಾಗದ ಪ್ರತಿನಿಧಿಯಾಗಿ, ಕಳೆಬರ ಮಣ್ಣಲ್ಲಿ ಮಣ್ಣಾದರು ಕೊಡ, ಆತನ ಅಂಗಾಂಗಗಳನ್ನು ಮಣ್ಣಾಗಲು ಬಿಡದೆ ಮರು ಜೀವ ಕೊಟ್ಟು ಹೋದದ್ದು ಅ ಸಂಚಾರಿಯ ಆದರ್ಶ ಬದುಕಿಗೊಂದು ಜೀವಂತ ಸಾಕ್ಷಿ,

ಮುಂದೊಂದು ದಿನ ನಿನ್ನ ಅಂಗಾಂಗಗಳನ್ನು ಧರಿಸಿ ಬರುವವರು ದಾರಿ ಮದ್ಯೆ ಎದುರಾದರೆ ತಲೆಬಾಗಿ ಕಾಲಿಡಿದು ನಮಿಸಿ ಮತ್ತೊಮ್ಮೆ ನಿನ್ನ ಮೈತಬ್ಬಿ ಮಾತಾನಾಡಿಸುವೆ,,,ಓ ನನ್ನ ಸಂಚಾರಿ,

ನಿನ್ನ ಸಂಚಾರ ಸಂಪೂರ್ಣ ಇನ್ನೂ ಮುಗಿದಿಲ್ಲ, ಅದಕ್ಕೆ ನೀನಿನ್ನು ಅವಕಾಶ ಕೊಟ್ಟಿಲ್ಲ, ನೀ ಹೋದ ಮರುದಿನವೇ ನೀ ಕೊಟ್ಟ ನಿನ್ನದೇ ಅಂಗಾಗಗಳು ಮತ್ತೊಮ್ಮೆ ಪಯಣ ಹೊರಡುತ್ತವೆ, ಅದು ಮಹಾಸಂಚಾರದ ಹೆಸರಿನಲ್ಲಿ,,,,,

ಓ ಕನ್ನಡದ ಕಡೂರಿನ ಹೃದಯ, ಸದ್ಯಕ್ಕೀಗ ನೀ ಹೋಗಿ ಬಾ ಗೆಳೆಯ,
ನಿನಗಿದೋ ನಮ್ಮೆಲ್ಲರ ಅಂತಿಮ ವಿದಾಯ,
🌹🌹🙏🙏🙏🌹🌹
————————————-
ನುಡಿ ಸಮರ್ಪಣೆ :-

ಡಿ, ಎಂ, ಮಂಜುನಾಥಸ್ವಾಮಿ, ದಿಣ್ಣೆಕೆರೆ,

*ಪಂಚನಹಳ್ಳಿಯಿಂದ ರಾಷ್ಟ್ರ ಪ್ರಶಸ್ತಿಯವರೆಗೆ ಸಂಚಾರಿ ಪ್ರಯಾಣ*

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ, ಸಾಹಿತ್ಯ ಪರಿಷತ್ ಹೋಬಳಿ ಘಟಕ ಬಣಕಲ್, ತಾಲ್ಲೂಕು ಜಾನಪದ ಪರಿಷತ್ ಮೂಡಿಗೆರೆ ಮತ್ತು ಪತ್ರಕರ್ತರ ಬಳಗದ ವತಿಯಿಂದ ಆಕಸ್ಮಿಕ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಚಲನಚಿತ್ರದ ದೈತ್ಯ ಪ್ರತಿಭೆ ರಾಷ್ಟ್ರಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್ ರವರಿಗೆ ಸ್ಫೂರ್ತಿ ಮಿತ್ರ ಮಂಡಳಿ ಗ್ರಂಥಾಲಯದಲ್ಲಿ ನುಡಿ ನಮನ ಮತ್ತು ಪುಷ್ಪಾರ್ಚನೆಯೊಂದಿಗೆ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ರವರು ಮಾತನಾಡಿ ತನ್ನ ಅಮೋಘ ನಟನೆಯಿಂದ ಕನ್ನಡ ಚಲನ ಚಿತ್ರೋಧ್ಯಮವನ್ನು ರಾಷ್ಟ್ರ ಮಟ್ಟದ ಗೌರವಕ್ಕೆ ಪಾತ್ರವಾಗುವಂತೆ ಮಾಡಿದ ದೈತ್ಯ ಪ್ರತಿಭೆ ಖ್ಯಾತ ಚಲನಚಿತ್ರ ನಟ ಪಂಚನಹಳ್ಳಿಯ ಸಂಚಾರಿ ವಿಜಯ್.
ನಮ್ಮ ಚಿಕ್ಕಮಗಳೂರು ಜಿಲ್ಲೆಯ ಪಕ್ಕದ ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಚಿಕ್ಕಗ್ರಾಮದಿಂದ ತನ್ನ ಕಲಾ ಬದುಕಿನ ಪಯಣವನ್ನು ರಾಷ್ಟ್ರ ಮಟ್ಟದವರೆಗೂ ಮುಂದುವರಿಸಿ ರಾಷ್ಟ್ರ ಪ್ರಶಸ್ತಿಯನ್ನು ‘ನಾನು ಅವನ್ನಲ್ಲ ಅವಳು’ಎಂಬ ಚಲನ ಚಿತ್ರದಲ್ಲಿ ಮಂಗಳಮುಖಿಯ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿ ತೃತೀಯ ಲಿಂಗಿಗಳ ನೋವನ್ನು ಸಮಾಜಕ್ಕೆ ತಿಳಿಸಿದ ಸಮಾಜ ಮುಖಿ ಮಾನವೀಯ ಹೃದಯ ಇನ್ನಿಲ್ಲದಿರುವುದು ಕಲಾಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ತಾಲ್ಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್ ಮಾತನಾಡಿ ಸಂಚಾರಿ ವಿಜಯ್ ಕೇವಲ ಒಬ್ಬ ನಟನಾಗಿ ಮಾತ್ರವೇ ಇರದೆ,ಸಹಾಯ ಜೀವಿ ಪರಿಸರ ಪ್ರೇಮಿಯಾಗಿದ್ದರು.
ಸಾಮಾಜಿಕ ಕಳಕಳಿಯುಳ್ಳ ನಟನಾಗಿದ್ದ ವಿಜಯ್ ಸುಮಾರು 22ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಿಲ್ಲಿಂಗ್ ವೀರಪ್ಪನ್, ಕೃಷ್ಣ ತುಳಸಿ,ಪಾದರಸ,ಜೆoಟಲ್ ಮ್ಯಾನ್,ಫಿರಂಗಿಪುರ, ಆಕ್ಟ್-1978 ಸಿನಿಮಾಗಳಲ್ಲಿ ನಟನೆಮಾಡಿದ್ದಾರೆ.
ಸಂಚಾರಿ ವಿಜಯ್ ನಟನೆಯ ‘ನಾನು ಅವನ್ನಲ್ಲ ಅವಳು’ಎಂಬ ಚಿತ್ರದ ಮಂಗಳಮುಖಿಯ
ಪರಿಪೂರ್ಣ ಪಾತ್ರಕ್ಕೆ 28ವರ್ಷಗಳ ಬಳಿಕ ಕನ್ನಡ ಸಿನಿಮಾರಂಗಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟ ಸಂಚಾರಿ ವಿಜಯ್ ರವರ ಸಂಚಾರಕ್ಕೆ ವಿಧಿ ಪೂರ್ಣವಿರಾಮವಿಟ್ಟಿತೆಂದು ದುಃಖಿತರಾದರು.

ಯುವ ಸಾಹಿತಿ ಹೆಸಗಲ್ ವೆಂಕಟೇಶ್ ಮಾತನಾಡಿ ಕೊರೋನ ಸಂಕಷ್ಟದ ಕಾಲದಲ್ಲಿ ಬಡವರಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲು “ಉಸಿರು ಸಹಾಯ ಹಸ್ತ”ವೆಂಬ ತಂಡವನ್ನು ಕಟ್ಟಿಕೊಂಡು ಸೇವೆಗೆ ಮುಂದಾದ ಸಂಚಾರಿ ವಿಜಯ್ ರವರ ಅಕಾಲಿಕ ಸಾವು ಸಿನಿಮಾ ಲೋಕಕ್ಕೆ ಬಹುದೊಡ್ಡ ನಷ್ಟ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಂದೀಶ್ ಬಂಕೇನಹಳ್ಳಿ, ಶಿಕ್ಷಕರಾದ ಭಕ್ತೇಶ್,ಪತ್ರಿಕಾ ವರದಿಗಾರರಾದ ಅನಿಲ್ ಮೊಂತೆರೊ, ತನು ಕೊಟ್ಟಿಗೆಹಾರ,ಸಂತೋಷ್ ಅತ್ತಿಗೆರೆ, ಸ್ಥಳೀಯರಾದ ಪ್ರದೀಪ್ ರಾಜ್ ಶ್ರೀಮತಿ ಯಶೋಧ, ಪೂರ್ಣೇಶ್ ಉಪಸ್ಥಿತರಿದ್ದರು.

ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.

http://nisargacare.com/navachaithanya-old-age-home/

Career | job

About Author