day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹೆಣ್ಣಿನ ಮಹತ್ವ ದೇವರು ಹೆಣ್ಣನ್ನು ಸೃಷ್ಟಿಸಿದ್ದು ಹೀಗೆ#avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಹೆಣ್ಣಿನ ಮಹತ್ವ ದೇವರು ಹೆಣ್ಣನ್ನು ಸೃಷ್ಟಿಸಿದ್ದು ಹೀಗೆ#avintvcom

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಹೆಣ್ಣಿನ ಮಹತ್ವ

ದೇವರು ಹೆಣ್ಣನ್ನು ಸೃಷ್ಟಿಸಿದ್ದು ಹೀಗೆ
ದೇವದೇವನು ಹೆಣ್ಣನ್ನು ಸೃಷ್ಟಿ ಮಾಡಿದಾಗ ಆರು ದಿನ ಸರಿ ರಾತ್ರಿಯವರೆಗೂ ಸತತ ಕೆಲಸ ಮಾಡುತ್ತಿದ್ದ…

ಆಗೊಬ್ಬ ದೇವತೆ ಬಂದು ಕೇಳಿದಳು, ” ದೇವದೇವಾ, ಏಕೆ ಇವಳಿಗಾಗಿ ಅಷ್ಟೊಂದು ಸಮಯ ವ್ಯಯಿಸುತ್ತಿರುವೆ?”

ದೇವದೇವ ಉತ್ತರಿಸಿದ, “ಇವಳನ್ನು ಸೃಷ್ಟಿಸಲು ನಾನು ಏನೇನು ಅಂಶಗಳನ್ನು ಒಳಗೊಳಿಸಬೇಕು ಎಂದು ನೋಡಿದೆಯಾ,, ಇವಳು ಎಲ್ಲ ತರಹದ ಪಾಕಗಳನ್ನೂ ಬಲ್ಲವಳಾಗಬೇಕು,, ಹತ್ತಾರು ಮಕ್ಕಳನ್ನು ಒಂದೇ ಸಮಯದಲ್ಲಿ ಅಪ್ಪಿ ಸಮಾಧಾನ ಗೊಳಿಸಲು ಸಮರ್ಥಳಾಗಿರಬೇಕು,, ಅವು ಬಿದ್ದು ಗಾಯಗೊಂಡ ಮೊಣಕಾಲಿನ ಗಾಯದಿಂದ ಹಿಡಿದು ಬೆಳೆದು ಘಾಸಿಗೊಂಡ ಹೃದಯದವರಾದಾಗಲೂ ಒಮ್ಮೆ ಆಲಿಂಗಿಸಿಕೊಂಡು ಅವರಿಗೆ ಸಾಂತ್ವನ ನೀಡಬೇಕು,,, ಇವೆಲ್ಲವನ್ನೂ ಅವಳು ಕೇವಲ ಎರಡು ಕೈಗಳಿಂದ ಮಾಡಬೇಕು,,, ಅಷ್ಟೇ ಅಲ್ಲ.
ಅವಳಿಗೆ ಅನಾರೋಗ್ಯ ಉಂಟಾದರೂ ಅವಳೇ ಮದ್ದು ಮಾಡಿಕೊಂಡು ಗಂಟೆಗಳ ಲೆಕ್ಕ ಇಡದೆ ಕೆಲಸ ಮಾಡ ಬಲ್ಲವಳಾಗಬೇಕು,,, ”

ದೇವತೆಗೆ ಅಚ್ಚರಿಯೂ ಸಂತಸವೂ ಆಯಿತು ” ಏನೂ! ಈಕೆಗೆ ಕೇವಲ ಎರಡೇ ಕೈಗಳಾ? ಅಸಾಧ್ಯ”ಎಂದಳು. ಮತ್ತು ಇದೇನಾ ನಿನ್ನ ತಯಾರಿಕೆಯ ಅತ್ಯುತ್ತಮ ಮಾದರಿ ಎಂದು ಹತ್ತಿರ ಬಂದು ಆ ಹೆಣ್ಣನ್ನು ಮುಟ್ಟಿದಳು.
“ಓ ದೇವದೇವಾ … ಇವಳನ್ನು ಬಹಳ ಮೃದುವಾಗಿ ಮಾಡಿದ್ದೀ” ಎಂದು ಉದ್ಘಾರ ತೆಗೆದಳು.

ದೇವದೇವ ಹೇಳಿದ “ಹೌದು ಇವಳು ಮೃದು,,,, ಆದರೆ ಬಹಳ ಶಕ್ತಿವಂತಳು,,,ಅವಳು ಏನೇನೆಲ್ಲ ತಡೆದುಕೊಳ್ಳಬಲ್ಲಳು, ಎಷ್ಟೆಷ್ಟು ಕ್ರಮಿಸಬಲ್ಲಳು ಎಂದು ನೀನು ಊಹಿಸಲೂ ಆರೆ”

ದೇವತೆ ಕೇಳಿದಳು “ಇವಳು ಆಲೋಚನೆ ಮಾಡಬಲ್ಲಳಾ? ”

ದೇವದೇವ ನಗುತ್ತ ಹೇಳಿದ “ಆಲೋಚನೆ ಮಾಡುವುದಷ್ಟೇ ಅಲ್ಲ… ತರ್ಕಬದ್ಧವಾಗಿ, ಸಕಾರಣವಾಗಿ ಆಲೋಚಿಸುವಳು,, ಸಕಾರಣ ಮಾತಾಡಬಲ್ಲಳು,,, ಮತ್ತು ಸಂಪೂರ್ಣ ಒಳಹೊರಗ ತಿಳಿಯಬಲ್ಲಳು”

ದೇವತೆ ಹತ್ತಿರ ಬಂದು ಅವಳ ಕೆನ್ನೆಗಳನ್ನು ಮುಟ್ಟಿ ಮೆಲ್ಲಗೆ ಕಿರುಚಿದಳು ” ದೇವದೇವಾ, ಈ ನಿನ್ನ ಸೃಷ್ಟಿ ಕರಗಿ ಸೋರುತ್ತಿದೆ,, ಇವಳ ಮೇಲೆ ತುಂಬಾ ಹೊರೆ ಹೊರೆಸಿರುವೆ ನೀನು,,, ಭಾರ ತಡೆಯದೆ ಇವಳು ಕರಗಿ ಸೋರುತ್ತಿದ್ದಾಳೆ”

“ಅದು ಸೋರುವಿಕೆ ಅಲ್ಲ. ಕಣ್ಣೀರು ” ದೇವತೆಯ ಮಾತನ್ನು ತಿದ್ದಿದ ದೇವದೇವ.

“ಈ ಕಣ್ಣೀರು ಯಾಕೆ? ”

“ಕಣ್ಣೀರು ಅವಳ ಅಭಿವ್ಯಕ್ತಿ,, ದುಃಖ, ಅನುಮಾನ, ಪ್ರೇಮ, ಒಂಟಿತನ, ನೋವು, ಕಷ್ಟಗಳು,ಹೆಮ್ಮೆ ಎಲ್ಲದಕ್ಕೂ”

ದೇವತೆ ಬಹಳ ಆನಂದದಿಂದ ಹೇಳಿದಳು “ದೇವದೇವಾ… ನೀನು ಎಲ್ಲವನ್ನೂ ಆಲೋಚಿಸಿರುವೆ ,, ಈ ಹೆಣ್ಣು ಒಂದು ಅದ್ಭುತ ಸೃಷ್ಟಿ”

ದೇವದೇವ ಉಲ್ಲಾಸದಿಂದ ನಗುತ್ತಾ ಹೇಳಿದ “ಹೌದು,, ಅವಳ ಶಕ್ತಿಗೆ ಗಂಡು ಅಚ್ಚರಿಗೊಳ್ಳುತ್ತಾನೆ,,, ಕಷ್ಟಗಳ ಹೊರೆಗಳನ್ನು ಅವಳು ತಡೆದುಕೊಳ್ಳಬಲ್ಲಳು,,, ಪ್ರತಿ ವಿಷಯದ ಮೇಲೂ ಅವಳದೇ ಆದ ಸ್ವಅಭಿಪ್ರಾಯ ಹೊಂದಿರಬಲ್ಲಳು,,, ಸಂತಸದ ಮತ್ತು ಪ್ರೀತಿಯ ಚಿಲುಮೆ ಅವಳು,,,, ಚೀರಬೇಕು ಎನ್ನಿಸಿದಾಗಲೂ ಮುಗುಳ್ನಗಬಲ್ಲಳು ಇವಳು,, ಅಳಬೇಕೆನ್ನಿಸಿದಾಗ ಹಾಡಬಲ್ಲಳು,,,ಸಂತಸವಾದಾಗ ಅಳಬಲ್ಲಳು,,, ತನಗೆ ಹೆದರಿಕೆ ಆದಾಗ ನಗಬಲ್ಲಳು,,, ತಾನು ನಂಬಿದ್ದರ ಪರವಾಗಿ ಹೋರಾಡಬಲ್ಲಳು,,,ಬೇಷರತ್ತಿನ ಪ್ರೀತಿ ಅವಳದು,,, ಸನಿಹದವರು ಸತ್ತರೆ ಅವಳ ಮನ ಒಡೆಯುತ್ತದೆ,,,
.
ಕಥೆ ಇನ್ನೂ ಮುಂದೇವರೆಯುವದು..
.
.
ವೆಂಕಿ ಸುಗ್ಗಾಳ್

Career | job

Navachaitanya Old Age Home

About Author