day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj **BML ಅವರ ಹಲವು ಹೆಜ್ಜೆ -ಒಂದು ನೆನಪು**ಬಿ, ಎಂ, ಲಕ್ಷ್ಮಣ ರಾವ್ #avintvcom – AVIN TV

लाइव कैलेंडर

November 2024
M T W T F S S
 123
45678910
11121314151617
18192021222324
252627282930  

AVIN TV

Latest Online Breaking News

**BML ಅವರ ಹಲವು ಹೆಜ್ಜೆ -ಒಂದು ನೆನಪು**ಬಿ, ಎಂ, ಲಕ್ಷ್ಮಣ ರಾವ್ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

*BML ಅವರ ಹಲವು ಹೆಜ್ಜೆ -ಒಂದು ನೆನಪು*

ಭಾವಪೂರ್ಣ ಸಂತಾಪಗಳೊಂದಿಗೆ,,,,,,,
🌹 🙏🙏🙏
ಬಿ, ಎಂ, ಲಕ್ಷ್ಮಣ ರಾವ್ ಎಂಬ ಆದರ್ಶದ ವ್ಯಕ್ತಿತ್ವವನ್ನು ಪ್ರೀತಿಯಿಂದ ಸರಳವಾಗಿ BML ಎಂಬ ಒಂದು ಆಪ್ತತೆಯೊಂದಿಗೆ ಸಂಬೋಧಿಸಿ ಕರೆದು ಪ್ರತಿ ಬಾರಿಯೂ ಮತ್ತಷ್ಟು ಹತ್ತಿರ ವಾಗುತಿದ್ದೆವು,

ಅದು 1990ರ ದಶಕ, ವಿಜ್ಞಾನ ಜನ ವಿಜ್ಞಾನ ಆಗಬೇಕು ಎಂಬ ಹಿನ್ನೆಯಲ್ಲಿ ಸಮಗ್ರ ಭಾರತದೆಲ್ಲೆಡೆ ವಿಜ್ಞಾನ ಚಳುವಳಿಯ ಬಳ್ಳಿ ಹಬ್ಬಿ ಹರಡುತ್ತಿತ್ತು,
ಕರ್ನಾಟಕದ ನೇತೃತವನ್ನು ಅಂದಿನ ಬೆಂಗಳೂರು ವಿ ವಿ ಕುಲಪತಿಗಳಾದ ಹೆಚ್, ನರಸಿಂಹಯ್ಯನವರು ವಹಿಸಿಕೊಂಡ್ಡಿದ್ದರೆ,
ಇಲ್ಲಿ ಚಿಕ್ಕಮಗಳೂರು ಜಿಲ್ಲೆಯ ನೇತೃತ್ವವನ್ನು ಸಾಮಾಜಿಕ ಹೋರಾಟಗಾರ ಸಂಗಾತಿ ಬಿ, ಕೆ, ಸುಂದ್ರೇಶ್ ತೆಗೆದುಕೊಂಡಿದ್ದರು,

ಜ್ಞಾನದ ಸಾಗರಕ್ಕೆ ವಿಜ್ಞಾನದ ತೊರೆಗಳು ಸೇರಬೇಕೆಂಬ ಹಂಬಲ ಹೊತ್ತು ಬಿ, ಕೆ, ಸುಂದ್ರೇಶ್ ಮುಖಂಡತ್ವದಲ್ಲಿ ಈ ವಿಜ್ಞಾನ ಚಳವಳಿಗೆ ದುಮಿಕಿದವರು
ಹಲವರು,
ಈ ಹಲವರಲ್ಲಿ ವೃತ್ತಿಯಲ್ಲಿ ಡಯಟ್ ಉಪನ್ಯಾಸ ರಾಗಿದ್ದ, ವಯಸ್ಸಿನಲ್ಲಿ ಗುಣದಲ್ಲಿ ಅತ್ಯಂತ ಹಿರಿಯರಾಗಿದ್ದ BML ಮತ್ತು ವಿದ್ಯಾರ್ಥಿಯಾಗಿ ಅತ್ಯಂತ ಕಿರಿಯವರಲ್ಲಿ ಕಿರಿಯವನಾಗಿದ್ದ ನಾನು ಕೊಡ ಒಬ್ಬ,

ಹೀಗೆ ನಾನು ಮತ್ತು ಲಕ್ಷ್ಮಣರಾಯರ ಎಂಬ ಈ ಹಿರಿ -ಕಿರಿಯರ ಸಂಬಂಧ ಸಂದಿಯಾಗಿದ್ದು ಸುಮಾರು ಮೂರು ದಶಕಗಳ ಹಿಂದೆ,

1990ರ ದಶಕ, ಇವತ್ತಿನ ಹಾಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ನಿರ್ಜಿವ ಯಂತ್ರಗಳೊಂದಿಗೆ ಭೇಟಿಯಾಗುವ ಕಾಲವಲ್ಲ, ಅಂದು ಮೊಬೈಲ್ ಕೂಡ ಇರಲಿಲ್ಲ, ಅದೇನಿದ್ದರೂ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ನೇರ ನೇರಾ -ಮುಖ ಮುಖಿಯಾಗುವ ಜಗತ್ತು, ಅತಂಹ ಮುಖಾ -ಮುಖಿ ಜಗತ್ತಿನಲ್ಲಿ ಜನ ವಿಜ್ಞಾನ ಚಳುವಳಿ ಕಟ್ಟುವ ನಿಟ್ಟಿನಲ್ಲಿ ಗುರು -ಶಿಷ್ಯರಂತೆ ಒಲಿದು ಒಂದಾದ ಆತ್ಮೀಯತೆ ನಮ್ಮಿಬ್ಬರದು,

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಕಳಸದ ಹತ್ತಿರದ ಊರಿನವರಾದ ಸರಳ, ಸಜ್ಜನ ಮೇರು ಗುಣ ಗಾಂಭೀರ್ಯ ಹೊಂದಿದ್ದ Bml ಅವರು,
ಅವರ ಇಲ್ಲದಿರುವಿಕೆ ಇಂದು ಅನೇಕರನ್ನು ಸಾವಿನ ಸುದ್ದಿ ಬೆಳಿಗ್ಗೆ ಕಿವಿಗೆ ಬಿದ್ದಾಗಿನಿಂದ ಕಾಡತೊಡಗಿದೆ,

ಬದುಕು ಎರೆದು ರೀತಿ ಇದೆ,
ಒಂದು :-ಬೆಂಕಿಯಂತೆ ಮೇಲ್ಮುಖವಾಗಿ ಉರಿಯುವುದು,
ಎರಡು :-ನೀರಿನಂತೆ ಕೆಳಮುಖವಾಗಿ ಹರಿಯುವುದು,

ಇವೆರಡರಲ್ಲೂ ವಿಜ್ಞಾನವಿದೆ, ಆದರೆ ದೊಡ್ಡದೊಂದು ಆದರ್ಶ ಇರುವುದು ಕೆಳಮುಖವಾಗಿ ಹರಿಯುವ ನೀರಿನಲ್ಲಿ, ಬೆಂಕಿ ಆರಿದ ನಂತರ ಯಾವ ಗುರುತನ್ನು ಬಿಟ್ಟುಹೋಗುವುದಿಲ್ಲ, ಆದರೆ ನೀರು ಹಾಗಲ್ಲ, ತಾನು ಹರಿದ ಜಾಗದಲೆಲ್ಲ ಅದರದೇ ಅದ ಒಂದು ತನುವನ್ನು ಬಿಟ್ಟು ಭೂಮಿಗೆ ಜೀವಸೆಲೆಯಾಗಿ ಸಾಗುತ್ತಾ ಸಾಗುತ್ತಾ ಮುಂದೆ ಸಾಗುತ್ತದೆ, ಹೀಗೆ Bml ಅವರು ಮಾಸಿಹೋಗದಂತ ತನು -ಮನವನ್ನು ಅವರ ಸಾವಿರಾರು ಶಿಷ್ಯರಲ್ಲಿ, ಸಹದ್ಯೋಗಿಗಳಲ್ಲಿ, ಸಮಾಜದ ಅನೇಕರಲ್ಲಿ, ವಿಶೇಷ ವಾಗಿ ಜನ ವಿಜ್ಞಾನ ಚಳುವಳಿಗಾರರಲ್ಲಿ ಬಿಟ್ಟುಹೋಗಿದ್ದರೆ,

Bml ಅವರು ಡಯಟ್ ಉಪನ್ಯಾಸಕರಾಗಿ, ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ, ಭಾರತಿ ಕಲ್ಲರ್ ಲ್ಯಾಬ್ ನ ಮಾಲೀಕರಾಗಿ, ಶಿಕ್ಷಣ ಶಿಲ್ಪ ಮಾಸ ಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾಗಿ, ಚಿಕ್ಕಮಗಳೂರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಹೀಗೆ ಹತ್ತು ಹಲವು, ಭಿನ್ನ ವಿಭಿನ್ನ ಆಯಾಮಗಳಲ್ಲಿ ಶಾಲೆಗೆ ಸೀಮಿತವಾಗದೆ ಶಾಲೆಯಿಂದ ಹೊರತಾದ ಸಮಾಜದೊಟ್ಟಿಗೂ ತಮ್ಮನ್ನು ತಾವು ಸೇವೆ ಹೆಸರಿನಲ್ಲಿ ಪರಿವರ್ತನಾಕಾರರಾಗಿ ತೊಡಗಿಸಿಕೊಂಡಿದ್ದರು,

ಇತ್ತೀಚೆಗೆ 7ತಿಂಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಸ್ಟ್ರೋಕ್ ಆಗಿತ್ತು, ಅದರಿಂದ ಅವರು ಚೇತರಿಸಿಕೊಂಡಿದ್ದರು ಸಹ ಇಂದು ಬೆಳಗ್ಗೆ ಕೋವಿಡ್ ಹೊರತಾದ ಬೇರೆ ಕಾರಣದಿಂದ ನಮ್ಮನ್ನು ಅಗಲಿದ್ದಾರೆ,

78ವರ್ಷದ Bml ಅವರು ಪತ್ನಿ ಇಂದಿರಾ ಮತ್ತು ಮೂವರು ಗಂಡು ಮಕ್ಕಳಾದ
1, ಶ್ರೀ ಹರ್ಷ
2, ಪ್ರಿಯಾ ದರ್ಶನ್
3, ರೂಪ ದರ್ಶನ್ ಸೇರಿದಂತೆ ಅಪಾರ ಸ್ನೇಹ ವಲಯವನ್ನು ಬಿಟ್ಟು ಅಗಲಿರುವುದು ಕುಟುಂಬಕ್ಕೆ ಮತ್ತು ಜನ ವಿಜ್ಞಾನ ಚಳುವಳಿಗೆ ಅತೀ ದೊಡ್ಡ ನಷ್ಟವಾಗಿದೆ,

ಇಂತಹ ಈ ಮೇರು ಪ್ರತಿಭೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕ, ಬೆಂಗಳೂರು, ಮತ್ತು ಜಿಲ್ಲಾ ಘಟಕ ಚಿಕ್ಕಮಗಳೂರು ವತಿಯಿಂದ ಭಾವಪೂರ್ಣ ಸಂತಾಪಗಳು,

ಹೋಗಿ ಬನ್ನಿ ಸಾರ್,,,
ಅಂತಿಮ ನಮನಗಳು
ಹೃದಯಪೂರ್ವಕ ವಿದಾಯಗಳು,
🌹🌹🙏🙏🙏🌹🌹
ನುಡಿ ಸಮರ್ಪಣೆ :-
ಎಲ್ಲಾ ಜನ ವಿಜ್ಞಾನ ಸಂಗಾತಿಗಳ ಪರವಾಗಿ,,,,

ಡಿ, ಎಂ, ಮಂಜುನಾಥಸ್ವಾಮಿ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

Career | job

Navachaitanya Old Age Home

About Author