ಜಿಂಕೆ ದಿಢೀರ್ ಪ್ರತ್ಯಕ್ಷ ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿಯಲ್ಲಿ ಜಿಂಕೆ ಜಿಗಿತ
1 min read
ಜಿಂಕೆ ಜಿಗಿತ….
ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾಮ ಪಂಚಾಯಿತಿ.ಬಿಳಗೊಳ ಶಿವಾಜಿ ನಗರದ ಸಮಾಜ ಸೇವಕರಾದ ಹಸೆನಾರ್ ಬಿಳಗೊಳ ಅವರ ಮನೆಗೆ ಇಂದು ಬೆಳಿಗ್ಗೆ 9.ಗಂಟೆಗೆ ದೊಡ್ಡ ದೇಹದ ಜಿಂಕೆಯೊಂದು ಬಂದಿದೆ.
ಮನೆಯ ಪಕ್ಕದಲ್ಲಿದ್ದ ತೋಟದಿಂದ ನಾಯಿ ಬಂದ ಗಾಭರಿಯಲ್ಲಿ ಹಸೆನಾರ್ ಮನೆ ಮೇಲೆ ನೆಗೆದಿದೆ
.ನಂತರ ಪಕ್ಕದ ಮನೆಯ ಗೋಕುಲ ಅಚಾರ್ಯ ಅವರ ಮನೆ ಮೇಲೆ ನೆಗೆದು ಒಳಗೆ ಬಿದ್ದಿತ್ತು.ಸಂದೀಪ್ ಎಂಬ ಟ್ರಾಕ್ಟರ್ ಡ್ರೈವರ್ ಸಹಾಯದಿಂದ ಜಿಂಕೆಯನ್ನು ಅರಣ್ಯ ಇಲಾಖೆಯವರ ನಿರ್ದೆಶನದಂತೆ ಪಕ್ಕದ ತೊಟಕ್ಕೆ ಬಿಡಲಾಯಿತು.
ಎರಡು ಮನೆಗಳು ಪುಡಿ.ಪುಡಿಯಾಗಿ 50.ಸಾವಿರಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕೂಡಲೆ ಸಂಭಂದ ಪಟ್ಟ ಇಲಾಖೆಯವರು ನಷ್ಟ ಬರಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.