ಕೊರೋನವೈರಸ್ ಸೋಂಕಿತ ವ್ಯಕ್ತಿಗಳ ಶವಸಂಸ್ಕಾರ ಮಾಡುವುದರಿಂದ ಏನೂ ಅಪಾಯವಿಲ್ಲ. ರವಿಕೃಷ್ಣಾರೆಡ್ಡಿ #avintvcom
1 min read
ಅ ವೈಜ್ನಾನಿಕ ಶವ ಸಂಸ್ಕಾರ
ಇನ್ನೊಂದು ವಾರ ಏನೂ ಮಾತನಾಡಬಾರದು ಎಂದಿದ್ದವನು ಆ ಅಂತ್ಯಸಂಸ್ಕಾರದ ವಿಡಿಯೋ ನೋಡಿ ತಾಳಲಾರದೆ ಬರೆಯುತ್ತಿದ್ದೇನೆ…
ಶವ ಉಸಿರಾಡುವುದಿಲ್ಲ; ಆದ ಕಾರಣ, ಅದರಿಂದ (ಅಂದರೆ ಶವದಿಂದ) ಯಾವುದೇ ವೈರಸ್ ಗಾಳಿಗೆ ಹರಡುವುದಿಲ್ಲ. ಕೊರೋನವೈರಸ್ ಸೋಂಕಿತ ವ್ಯಕ್ತಿಯ ಹೆಣದ ಮುಖ, ಮೂಗು, ಬಾಯಿಯನ್ನು ಬರಿಗೈಯಿಂದ ಮುಟ್ಟಿ ಅದೇ ಕೈಯನ್ನು ತಮ್ಮ ಮೂಗು ಅಥವ ಬಾಯಿಗೆ ಸೋಂಕಿಸಿಕೊಂಡರೆ ಮಾತ್ರ ಕೊರೋನವೈರಸ್ ಹರಡಬಹುದು. ಮುಖಕ್ಕೆ ಮಾಸ್ಕ್, ಕೈಗೆ ಗವಸು ಹಾಕಿಕೊಂಡು ಬೇರೆಲ್ಲಾ ಹೆಣಗಳ ಸಂಸ್ಕಾರ ಮಾಡುವಂತೆ ಗೌರವಯುತವಾಗಿ, ಮಾನವೀಯವಾಗಿ ಕೊರೋನವೈರಸ್ ಸೋಂಕಿತ ವ್ಯಕ್ತಿಗಳ ಶವಸಂಸ್ಕಾರ ಮಾಡುವುದರಿಂದ ಏನೂ ಅಪಾಯವಿಲ್ಲ. ಇದು ಜ್ಞಾನ. ವಿಜ್ಞಾನ.
ಜಗತ್ತು ಅದು ಹೇಗೆ ಇಷ್ಟು ತಿಕ್ಕಲಾಗಿದೆ? ಅಮಾನವೀಯವಾಗಿದೆ? ಅವೈಚಾರಿಕವಾಗಿದೆ? ರಕ್ತ, ಬೆವರು, ದೇಹದ್ರವಗಳನ್ನು ಹಂಚಿಕೊಂಡ ಸಂಬಂಧಿಗಳ ಹೆಣವನ್ನು ಮುಟ್ಟುವುದಿರಲಿ, ಅವರ ಮುಖವನ್ನು ನೋಡಲೂ ನಿಷಿದ್ಧ ಮಾಡಿದ ಅವಿವೇಕಿ ಲೋಫರ್‌ಗಳ ನಿಯಮಗಳನ್ನು ಈ ಸಮಾಜ ಇಷ್ಟು ಪುಕ್ಕಲುತನದಿಂದ ಒಪ್ಪಿಕೊಳ್ಳುವ ಸ್ಥಿತಿ ಮುಟ್ಟಿದ್ದಾದರೂ ಹೇಗೆ? ಈಗ ಆಗುತ್ತಿರುವ ಅಂತ್ಯಸಂಸ್ಕಾರಗಳ ರೀತಿ ಬಂಧುಗಳ ಸಾವಿಗಿಂತಲೂ ಹೆಚ್ಚು ಹಿಂಸಾತ್ಮಕ. ನಿರಂತರ ಶೋಕದಾಯಕ.
ಇದು ಇಲ್ಲಿಗೇ ಮುಗಿಯುವುದಿಲ್ಲ. ಅಯೋಗ್ಯರು, ಸುಳ್ಳರು, ಮೋಸಗಾರರು, ಪುಕ್ಕಲರು, ಮೂಢರು, ಅಧಿಕಾರಪಿಪಾಸುಗಳು, ರಾಕ್ಷಸೀಪ್ರವೃತ್ತಿಯವರು, ಸ್ವಾರ್ಥಿಗಳು, ಕಪಟಿಗಳು, ವಂಚಕರೇ ನಮ್ಮನ್ನು ಆಳುತ್ತಿದ್ದಾರೆ. ಆದಿಅಂತ್ಯಗಳಿಲ್ಲದ ನರಕದ ದಾರಿಯಲ್ಲಿ ಸಮಾಜ ತೆವಳುತ್ತಿದೆ.
– ರವಿಕೃಷ್ಣಾರೆಡ್ಡಿ
25-09-2020.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.