ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ. ನಿರ್ದೆಶಕರಾಗಿ ರೂಬೆನ್ ಮೊಸಸ್….
1 min read
ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ.
ನಿರ್ದೆಶಕರಾಗಿ ರೂಬೆನ್ ಮೊಸಸ್
ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ಅವರನ್ನು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾಗಿ ರಾಜ್ಯ ಸರ್ಕಾರ ಮಾಡಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ರೂಬೆನ್ ಮೊಸಸ್ ಅವರು ಕಳೆದ ಮೂವತ್ತೈದು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ನಗರಸಭೆ ಸದಸ್ಯರಾಗಿ, ನಗರಸಭೆ ವಿರೋಧ ಪಕ್ಷದ ನಾಯಕರಾಗಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಕಳೆದ ಮೂರು ಅವಧಿಯಿಂದ ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದು, ಇದುವರೆಗೂ ಅವರಿಗೆ ಸರ್ಕಾರದಿಂದ ಯಾವುದೇ ನಾಮಿನಿ ಮಾಡದೆ ಇದ್ದು, ಈಗ ಅವರಿಗೆ ಮದ್ಯಪಾನ ಸಂಯಮ ಮಂಡಳಿ ನಿರ್ದೆಶಕರಾಗಿ ನೇಮಕ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ.
ರಾಜಕಾರಣದೊಂದಿಗೆ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿರುವ ಅವರು ಈಗಾಗಲೇ ಮದ್ಯಪಾನ ವ್ಯಸನಿಗಳಿಗೆ ಮದ್ಯಪಾನ ಸೇವಿಸದಂತೆ ಕೌನ್ಸಿಲಿಂಗ್ ಮಾಡಿಕೊಂಡು ಬಂದಿದ್ದು ಕೋವೀಡ್ ಸಂದರ್ಭದಲ್ಲಿ ಭಿಕ್ಷುಕರು, ನಿರಾಶ್ರಿತರು, ದಿಕ್ಕುದೆಸೆ ಇಲ್ಲದವರಿಗೆ ಅನಾಥರಿಗೆ ಮಾಡಿದ ಸೇವೆ ಮರೆಯಲಾಗದು ಎಂದು ಹೇಳಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಮಾಡುತ್ತಿರುವ ಅವರು ಸರ್ಕಾರದಿಂದ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ರೂಬೆನ್ ಮೊಸಸ್ ಇನ್ನೂ ಹೆಚ್ಚಿನ ಸಮಾಜಸೇವೆ ಸಲ್ಲಿಸಲಿ ಎಂದು ಹಾರೈಸಿದ್ದಾರೆ.

