लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
25/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ ತಾಲೂಕಿನ ಸಂಸೆ ಶಾಲೆಯಲ್ಲಿ ಕಳಸ ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಫರ್ಧೆ ಗಳ ಕಾರ್ಯಕ್ರಮ ನಡೆಯಿತು….

1 min read

ಕಳಸದ ಸಂಸೆಯಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ.
ಕಳಸ ತಾಲೂಕಿನ ಸಂಸೆ ಶಾಲೆಯಲ್ಲಿ ಕಳಸ ವಲಯ ಮಟ್ಟದ ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಫರ್ಧೆ ಗಳ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿ ಆರ್ ಪಿ ಗಿರೀಶ್ ಮಕ್ಕಳಲ್ಲಿನ ನೈಜ ಪ್ರತಿಭೆ ಗೆಲ್ಲಬೇಕು ಆ ಮುಖೇನ ನಮ್ಮ ತಾಲೂಕಿಗೆ ಜಿಲ್ಲೆಗೆ ಹೆಸರು ತರುವ ನಿಟ್ಟಿನಲ್ಲಿ ಮಕ್ಕಳು ಪ್ರಯತ್ನಿಸಬೇಕು ಅದಕ್ಕೆ ತಕ್ಕಂತೆ ತೀರ್ಪುಗಾರರು ನಿಜವಾದ ತೀರ್ಪು ಕೊಡಬೇಕು ಎಂದರು.
ಶೌರ್ಯ ವಿಪತ್ತು ಅಧ್ಯಕ್ಷ ಮಹೇಶ್ ಮಾತನಾಡಿ ಇದೊಂದು ಅಧ್ಬುತ ವೇದಿಕೆ ಈ ವೇದಿಕೆಯನ್ನು ಮಕ್ಕಳು ಉತ್ತಮವಾಗಿ ಬಳಸಿಕೊಳ್ಳಬೇಕು , ಗೆಲುವು ಮುಖ್ಯ ಆಗೋದಿಲ್ಲ ಭಾಗವಹಿಸುವುದೇ ಮುಖ್ಯ ದೈರ್ಯವಾಗಿ ನಿಮ್ಮ ಕಲೆಯನ್ನು ಪ್ರದರ್ಶನ ಮಾಡಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮ ಪ್ರಸಾದ್ ಜೈನ್ ವಹಿಸಿದ್ದರು .
ಈ ಕಾರ್ಯಕ್ರಮದಲ್ಲಿ ಎಲಾನ್ , ಉದಯ್, ಶ್ರೀನಿವಾಸ್, ಸುಧಿ, ಗೋವಿಂದಪ್ಪ,ಪದ್ಮಲತ, ಭರತ್, ಅಬೂಬಕರ್, ಪ್ರಕಾಶ್ ಎಂ ಎಂ, ಜಾಬಿರ್, ಶೋಭಾ, ಚಿನ್ನಯ್ಯ ವೀರೇಂದ್ರ , ರಶೀದ ಬಾನು, ಪಾರ್ವತಿ ಮುಂತಾದವರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed