ಪರಿಸರ ನಾಶ ಮಾಡಿದರ ಪರಿಣಾಮ ಇಡೀ ಜೀವ ಸಂಕುಲ, ಪ್ರಕೃತಿ ಮೇಲೆ ಎಂತಹ ಪರಿಣಾಮ ಬೀರಿದೆಯೆಂದರೆ ಭೂಮಂಡಲವೇ ನಲಗಿ ಹೋದರೆ, ವಾಯುಮಂಡಲ ಅಲ್ಲೋಲ ಕಲ್ಲೋಲ ವಾಗಿದೆ….
1 min read
ಪ್ರತಿಯೊಂದು ಜೀವಿಯು ತನ್ನ ಬದುಕಿಗಾಗಿ ಸಂಘರ್ಷ ನಡೆಸಲೇಬೇಕು. ಮಾನವ ತನ್ನ ದುರಾಸೆ ಬದುಕಿಗಾಗಿ, ಪರಿಸರ ನಾಶ ಮಾಡಿದರ ಪರಿಣಾಮ ಇಡೀ ಜೀವ ಸಂಕುಲ, ಪ್ರಕೃತಿ ಮೇಲೆ ಎಂತಹ ಪರಿಣಾಮ ಬೀರಿದೆಯೆಂದರೆ ಭೂಮಂಡಲವೇ ನಲಗಿ ಹೋದರೆ, ವಾಯುಮಂಡಲ ಅಲ್ಲೋಲ ಕಲ್ಲೋಲ ವಾಗಿದೆ. ಆದ್ದರಿಂದ ಪ್ರಕೃತಿಯು ಮಾನವ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆಯಾಗುತ್ತದೆ. ಪ್ರಪಂಚದಲ್ಲೇ ಇಂಥ ಬದಲಾವಣೆಯಾದರೆ,ಇದರಿಂದ ಕರ್ನಾಟಕ ಹೊರತಾಗಿಲ್ಲ. “1991ರಲ್ಲಿ ಜಾರಿ ಬಂದ ಹೊಸ ಆರ್ಥಿಕ ನೀತಿ ” ಅಭಿವೃದ್ಧಿ ಹೆಸರಿನಲ್ಲಿ ಮಲೆನಾಡಿನ ಕೆಲವು ಪ್ರದೇಶದಲ್ಲಿ ವಿದೇಶದಿಂದ ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಕಿ ಹಲವಾರು ಕಾರ್ಪೊರೇಟ್ ಕಂಪನಿಗಳು, ಬಾರಿ ಶ್ರೀಮಂತರು ಅನೇಕ ಉದ್ದಿಮೆಗಳನು ಪ್ರಾರಂಭಿಸಿವೆ. ಬಹುತೇಕ ಹಳ್ಳಿಗಳು ಈಗ ಬದಲಾವಣೆ ಆಗಿರುವುದರಿಂದ ಕೆಲವೊಂದು ಕುಗ್ರಾಮಗಳಲ್ಲಿ ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು,ವಿದ್ಯುತ್ ಶಕ್ತಿ ಉತ್ಪಾದನೆ, ಗಣಿಗಾರಿಕೆ, ಕೈಗಾರಿಕೆಗಳು,ಕೃಷಿ ಉತ್ಪನ್ನಗಳ ಕಾರ್ಖಾನೆಗಳು ಸ್ಥಾಪನೆಗಾಗಿ ಪರಿಸರವನ್ನೇ (ಕಾಡು) ನಾಶ ಮಾಡಿ, ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸಿದರೆ. ಕಾಲ ಬದಲಾದಂತೆ ವಿದೇಶಿ ವಸ್ತುಗಳು ಭಾರತದ ತುಂಬಾ ಹರಡಿರುವುದರಿಂದ ನಮ್ಮ ಬದುಕು ಪ್ರಾರಂಭವಾಗುವುದೇ ವಿದೇಶಿ ವಸ್ತುಗಳಿಂದ. ಮೋಜು ಮಸ್ತಿ ವಿದ್ದೇಶ ವ್ಯಾಮೋಹ ಭಾರತದ ಯುವ ಸಮೂಹವನ್ನು ಹೆಚ್ಚು ಹೆಚ್ಚು ಆಕರ್ಷಕವಾದ ಪರಿಣಾಮ, ಇಡೀ ದೇಶದ ಚಿತ್ರಣವೇ ಬದಲಾಯಿತು.
ಹೊಸ ಆರ್ಥಿಕ ನೀತಿ ಜಾರಿಗೆ ಬಂದ ನಂತರ ಭಾರತದ ಕಾಫಿ ಮಂಡಳಿ ಉಸ್ತುವಾರಿ ನೋಡುತ್ತಿದ್ದ ಕಾಫಿ ಉದ್ಯಮ ಮುಕ್ತ ಮಾರುಕಟ್ಟೆಯಾಗಿ ಮಾರ್ಪಾಡಾಯಿತು. ಅಲ್ಲಿಂದ ಮಲೆನಾಡಿನ ಪರಿಸರಕ್ಕೆ ಬಹುದೊಡ್ಡ ಕಂಠಕವಾಯಿತು. ಬಹುತೇಕ ಕಾಡುಗಳು ಕಾಫಿ ತೋಟಗಳಾದವು. ಕಂದಾಯ ಭೂಮಿ ಉಳಿಯಲಿಲ್ಲ. ಅರಣ್ಯ ಭೂಮಿ ಕೂಡ ಬಹುತೇಕ ಉತ್ತುವರಿಯದವು. 10 ಎಕರೆ ಕಾಫಿ ತೋಟ 100 ಎಕರೆಯಾದರೆ 100 ಎಕರೆ 300 ಎಕರೆಗಳಾದವು. ಹೀಗೆ ಮಲೆನಾಡಿನಲ್ಲಿ ದೊಡ್ಡ ದೊಡ್ಡ ಕಂಪನಿಗಳು ಕಾಫಿ ತೋಟವನ್ನು ವಿಸ್ತರಿಸಿದವು. ನಿಶಬ್ದವಾಗಿರಬೇಕಾದ ಕಾಡುಗಳು ರೆಸಾರ್ಟ್, ಹೋಂಸ್ಟೆ ಮೋಜು, ಮಸ್ತಿ, ಬೆಳಕು, ಶಬ್ದಗಳು ರಾರಾಜಿಸಿದವು.
ತನ್ನ ನೆಲೆ ನಾಶವಾದ ಮೇಲೆ ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬದುಕಿಗಾಗಿಪ್ರಯಾಣ ಬೆಳೆಸಿದವು. ಅಂತ ಪ್ರಾಣಿಗಳಲ್ಲಿ ದೈತ್ಯ ಜೀವಿ ಆನೆ ಕೂಡ. ಎಷ್ಟು ಪ್ರಾಣಿಗಳು, ಪಕ್ಷಿಗಳು ಜೀವ ಜಂತುಗಳು ನಾಶವಾದವು.
ಎತ್ತಿನಹೊಳೆ ಎಂಬ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ ಅಣೆಕಟ್ಟು ಕಾಮಗಾರಿ ಪ್ರಾರಂಭವಾದ ಮೇಲೆ ಜೊತೆಗೆ ಮಲೆನಾಡಿನ ಕೆಲವೊಂದು ಪ್ರದೇಶದಲ್ಲಿ ಗಣಿಗಾರಿಕೆ ಪ್ರಾರಂಭಿಸಿದ ಮೇಲೆ ಆನೆಗಳಿಗೆ ತಮ್ಮ ಮೂಲ ನೆಲೆಯೇ ಮರೆತಂತಾಯಿತು. ಮಲೆನಾಡಿನ ಕಾಫಿ ತೋಟಗಳಲ್ಲಿ ನಿರ್ಭೀತವಾಗಿ ಸಂಚರಿಸಲು ಆರಂಭಿಸಿದವು. ಆನೆಗಳು ಯಾವ ಪ್ರದೇಶಕ್ಕೂ ಹೋದರೂ ಕೂಡ ಬಾರಿ ಗಾತ್ರದ ಪಟಾಕಿ ಸಿಡಿಸಿ, ಕೆಲವೊಂದು ಕಡೆ ಗೊಂಡಿನ ದಾಳಿ ನಡೆಸಿ ಗಾಯಗೊಳಿಸುವುದು, ಅದರ ಕುಟುಂಬವನ್ನು ಚಿದ್ರಗೊಳಿಸುವುದರಿಂದ ಮಾನವನ ಮೇಲೆ ದಾಳಿ ನಡೆಸುತ್ತದೆ.
ಕಳೆದ 10 ವರ್ಷಗಳಿಂದ ಕರ್ನಾಟಕದ ಅತ್ಯಂತ 332 ಆನೆಯ ದಾಳಿಯಿಂದ ಮೃತಪಟ್ಟರೆ, ಇತರೆ ಪ್ರಾಣಿಗಳ ದಾಳಿಯಿಂದ 174 ಮಂದಿ ಮತಪಟ್ಟಿದಾ ರೆಂದು ಒಂದು ಸಮೀಕ್ಷೆ ಹೇಳುತ್ತದೆ. ಆದರೆ ಬಹಳ ಮುಖ್ಯವಾಗಿ ಮೃತಪಟ್ಟವರೆಲ್ಲ ಕಾರ್ಮಿಕರು ಮತ್ತು ಬಡ ರೈತರು. ಈ ಪರಿಸರವನ್ನು ಲಾಭದ ದೃಷ್ಟಿಯಿಂದ ನಾಶ ಮಾಡಿದವರು ಯಾರು.. ? ಜೀವತೆತ್ತವರು ಯಾರು..? ಒಂದು ಕಡೆ ಜೀವ ಹಾನಿ ಮತ್ತೊಂದು ಕಡೆ ಪ್ರಾಣಿಗಳ ಉಳಿವಿಗಾಗಿ ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕೆಂಬುವುದು ಯಕ್ಷಪ್ರಶ್ನೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಆನೆ ಹಾನಿಕಾರಡಾರ್ ನಿರ್ಮಿಸಿ , ಆನೆಗಳು ಸ್ಥಳಾಂತರಿಸುವುದು ಸೂಕ್ತ ಪರಿಹಾರ. ರಾಜಕಾರಣಿಗಳು ಮತ್ತು ಅಧಿಕಾರಿಗಳು ಜನ ಸತ್ತಾಗ ಎಚ್ಚೆತ್ತುಕೊಳ್ಳುವುದನ್ನು ನಿಲ್ಲಿಸಬೇಕು. ಕಳೆದ ವಾರ ಬೇಲೂರು ತಾಲೂಕಿನಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ನಂತರ, ಚಿಕ್ಕಮಗಳೂರು ಕ್ಷೇತ್ರದ ಮೂವರು ಶಾಸಕರು ರಾಜೀನಾಮೆ ನಾಟಕ ಶುರು ಮಾಡಿದ್ದಾರೆ. ಅದರಲ್ಲೂ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ನವರು ರಾಜೀನಾಮೆ ಸಲ್ಲಿಸಿದ್ದಾರೆ ವರದಿಯಾಗಿದೆ. ರಾಜಿನಾಮೆಯನ್ನು ಅಂಗೀಕರಿಸುವುದಿಲ್ಲವೆಂದು ಗೊತ್ತಿದ್ದು ಈ ಕ್ಷೇತ್ರದ ಜನರಿಗೆ ಮಂಕುಬೂದಿ ಎರಚುತ್ತಿದ್ದಾರೆ. ಮಲೆನಾಡಿನಲ್ಲಿ ಕೇವಲ ಆನೆ ದಾಳಿ ಜೊತೆಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳಿಂದ ತತ್ತರಿಸಿದ್ದಾರೆ. ಅವುಗಳೆಂದರೆ, ನಿಮ್ಮದೇ ಸರ್ಕಾರ ಅಗತ್ಯ ಬೆಲೆಗಳ ವಸ್ತು ಗಗನಕ್ಕೇರಿಸಿದಾಗ, ಬಸ್ಸು ದರ ಏರಿಕೆ ಮಾಡಿದಾಗ, ಮಲೆನಾಡಿನ ಭೂಮಿ ಒತ್ತುವ ಅತಿಯಾದಾಗ, ದಲಿತರ ಮೇಲೆ ಹಲ್ಲೆ ನಡೆದಾಗ, ಕಾರ್ಮಿಕರ ಕನಿಷ್ಠ ವೇತನ ವಂಚಿಸುತ್ತಿರುವಾಗ, ಮೇ 22ರ ಪರಿಷ್ಕೃತ ವೇತನ ಜಾರಿಗೆ, ಕಾರ್ಮಿಕರು ನಿವೇಶನಕ್ಕಾಗಿ ಹೋರಾಡುತ್ತಿರುವಾಗ, ಬಹುತೇಕ ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳು ತಲೆಯೆತ್ತಿರುವಾಗ, ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿ ವೇತನ ನೀಡದಿದ್ದಾಗ, ನಿರುದ್ಯೋಗ ಯುವಕರಿಗಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಯಾವುದಾದರೂ ಒಂದು ಉದ್ಯಮದತ್ತ ಆರಂಭಿಸುವುದಕ್ಕಾಗಿ, ಬಡತನ ನಿವಾರಣೆಗಾಗಿ, ನಿಮ್ಮದೇ ಸರ್ಕಾರದ ವಿರುದ್ಧ ಇಷ್ಟೊಂದು ಆಕ್ರೋಶ ಭರಿತವಾಗಿ ರಾಜೀನಾಮೆ ಸಲ್ಲಿಸಿ ಹೋರಾಟಕ್ಕೆ ಮುಂದಾದರೆ ನಿಮ್ಮೊಂದಿಗೆ ಹೋರಾಟಗಾರರು, ಪ್ರಗತಿಪರರು,ಚಿಂತಕರು,ವಿಚಾರವಾದಿಗಳು,ವಿದ್ಯಾರ್ಥಿಗಳು, ಮಹಿಳೆಯರು, ನಿಮ್ಮನ್ನು ಬೆಂಬಲಿಸಿ ನಿಮ್ಮೊಂದಿಗೆ ಕೈಜೋಡಿಸಿ ಹೋರಾಟಕ್ಕೆ ಮುಂದಾಗುವರೆಂಬ ನಂಬಿಕೆ ನಮ್ಮದು, ಕಣ್ಣೊರೆಸುವ ತಂತ್ರವನ್ನು ಬಿಟ್ಟು, ಈ ಕ್ಷೇತ್ರದ ಜನತೆ ಮಾತ್ರವಲ್ಲ ಯಾವುದೇ ಪ್ರಾಣಿಗಳಿಗೂ ಕೂಡ ಹಾನಿಯಾಗದಂತೆ ವೈಜ್ಞಾನಿಕವಾಗಿ ತಜ್ಞರ ಸಲಹೆ ಪಡೆದು ಇದಕ್ಕೊಂದು ಶಾಶ್ವತ ಪರಿಹಾರ ರೂಪಿಸಿ, ಕಾರ್ಮಿಕರ ಮತ್ತು ಬಡ ರೈತರ ಜೀವದ ಜೊತೆ ಚೆಲ್ಲಾಟವಾಡುವುದನ್ನು ಸರ್ಕಾರ ಬಿಡಬೇಕು. ಇಲ್ಲದಿದ್ದರೆ ಮುಂದೊಂದು ದಿನ ಆನೆಗಳು ಕಾಡನ್ನು ಬಿಟ್ಟು ನಾಡಿಗೆ ಬಂದು ಯಾವ ರೀತಿ ದಾಳಿ ಮಾಡುತ್ತದೋ, ಅದೇ ರೀತಿ ಈ ನೊಂದ ಜನಗಳು ನಿಮ್ಮ ಮನೆಯ ಮೇಲೆ ದಾಳಿ ಮಾಡಿದರೆ ಆಶ್ಚರ್ಯ ಪಡುವ ದಿನಗಳಿಲ್ಲ….
ಕೃಷ್ಣಪ್ಪ. ಕೆ.ಕೆ
ರಾಜ್ಯ ಕಾರ್ಯದರ್ಶಿ

ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (TUCI)

