ಐವತ್ತ ಎಂಟು ಆನೆ ಕೆಡ್ಡ ತೋಡಿ ಸೆರೆ ಹಿಡಿಯೋಕೆ ಆಗಲ್ಲ ಅಂದಮೇಲೆ ಕರ್ನಾಟಕದ ಏಳು ಕೋಟಿ ಜನಗಳಿಗೆ ಕೆಡ್ಡ ತೋಡುತ್ತಾರೆ ಅಂದರೆ ಅರ್ಥ……
1 min read
ಮಾನವೀಯತೆ ಮರೆತ ಜನಗಳು ಎಂದು ಹೇಳಬೇಕೆ ಅಥವಾ ರಾಜಕೀಯದಾಟ ಎಂದು ಹೇಳಬೇಕೆ ಅಥವಾ ಬೇರೆ ಪದ ಉಪಯೋಗಿಸಬೇಕೆ ಅನೆಗಳಿಗು ಕಾಡು ಪ್ರಾಣಿಗಳಿಗು ಬದುಕುವ ಹಕ್ಕು ಇಲ್ಲವೆ ಅವುಗಳ ಜಾಗಕ್ಕೆ ಜನಗಳು ಹೋಗಿ ರೆಸಾರ್ಟ್ ಹೋಂ ಸ್ಟೇ ಅಂತ ಮಾಡಿ ಅವುಗಳಿಗೆ ತೊಂದರೆ ಕೊಟ್ಟು ಓಡಿಸಿ ನಮ್ಮ ಜಾಗಕ್ಕೆ ಬಂದು ಅನೆ ಕಾಡು ಪ್ರಾಣಿಗಳು ಬಂದು ತೊಂದರೆ ಕೊಡುತ್ತಾವೆ ಅಂತ ಬೊಬ್ಬೆ ಹೊಡೆದರೆ? ಅರಣ್ಯ ಇಲಾಖೆ ಹಾಗು ರಾಜಕೀಯ ದುರುದ್ದೆಶದಿಂದ ತಾಲೂಕು ಜಿಲ್ಲಾ ವ್ಯಾಪ್ತಿಯಾ ಸಮರಕ್ಕೆ ತುತ್ತಾಗುತ್ತಿರುವ ತೋಟದ ಮಾಲಿಕರಿಗೆ ಉತ್ತರ ಕೊಡುವುದು ಯಾರು? ಬೇಲೂರಿಂದ ಆನೆ ಮೂಡಿಗೆರೆ ಬಂದಾಗಿದೆ ಈಗ ವಾಪಸ್ ಬೇಲೂರಿಗೆ ಕಳಿಸುತ್ತಿರ ಮದ್ಯ ಎಷ್ಟು ಮನೆ ಹಾಳಾಯಿತು ಪರಿಹಾರ? ಮುಂದೆ ಹೇಳಿ ಸ್ವಾಮಿ ಆನೆಗೆ ಈಗಾಗಲೆ 20 ಪೈಯರ್ ಗುಂಡು ಹಾರಿಸಿದ್ದು ಆಗಿದ್ದಾಗಿದೆ ರೊಚ್ಚಿಗೆದ್ದಾಗಿದೆ ಊರ ಒಳಗಡೆ ಬಿಟ್ಟ ತಪ್ಪು ಯಾರದ್ದು ಅರಣ್ಯ ಇಲಾಖೆಯದ್ದು ಎಂದು ಪ್ರಶ್ನೆ ಕೇಳುತ್ತಿಲ್ಲ ಬದಲಾಗಿ ಬೇಲೂರಿನವರು ಮೂಡಿಗೆರೆಗೆ ಅಟ್ಟೊದು ಮೂಡಿಗೆರೆ ಅವರು ವಿರೋಧಿಸಿ ಬೇಲೂರಿಗೆ ಅಟ್ಟೊದು ಇದೆ ಜೀವನ ರಾಜಕೀಯ ಬೇಳೆಕಾಳು ಹೊರತಾಗಿ ಯಾವ ಪರ್ಯಾಯ ಯೋಜನೆ ಮಾಡಿದ್ದಿರಿ. 58 ಆನೆಗಳು ಒಟ್ಟಿಗೆ ಸಿಕ್ಕಿದ್ದಾವೆ ಎಲ್ಲವನು ಸೆರೆ ಹಿಡಿಯುವ ಹಾಗು ಸ್ಥಳಾಂತರ ಮಾಡುವ ಕಾರ್ಯ ಇಲ್ಲವೆ ಇದಕ್ಕೆ ಪರಿಹಾರ ಹೇಳಿ. ಇದಕ್ಕೆ ಒಂದು ಸಣ್ಣ ನಿದರ್ಶನ ಹೇಳಬಲ್ಲೆ ನನ್ನ ಮನೆ ತೋಟಕ್ಕೆ ನನ್ನ ಒಂದು ಹಸು ಒಂದು ದೊಡ್ಡ ಹೋರಿ(2ವರ್ಷ) ಮೂರು ಕರುಗಳು ಜೊತೆಗೆ ಹತ್ತು ಬೇರೆ ದನಗಳು ಬಂದಿದ್ದವು ನಾನು ನೋಡಿ ನೋಡದಂತೆ ಸುಮ್ಮನಾದೆ ಅವುಗಳಪಾಡಿಗೆ ಹುಲ್ಲು ಹಳ ತಿಂದು ಹೋದು ನನಗೆ ಯಾವ ಹಾನಿ ಆಗಲಿಲ್ಲ ಅದೆ ದನಗಳು ನೆನ್ನೆ ತೋಟಕ್ಕೆ ಬಂದಾಗ ನನ್ನಮ್ಮ ಕೂಗಿ ಕಿರಿಚಾಡಿ ಬೊಬ್ಬೆ ಹೊಡೆದು ಓಡಿಸಿದ ಕಾರಣ ಏಳೆಂಟು ಕಾಫಿ ಗಿಡಗಳ ಕೊನೆಗಳು ಮುರಿದು ಪುಡಿ ಆಯಿತು. ಹಾಗೆಯೇ ಆನೆ ಸಂಚರಿಸುವ ದಾರಿ ಕಟ್ಟಿದ್ದು ಯಾರು? ಉತ್ತರ ಗೊತ್ತಿಲ್ಲ! ಅಲ್ವ ಈಗ ಆ ಕಡೆ ಐ.ಬಿ.ಎಕ್ಸ್ ಈ ಕಡೆ ಬರದಂತೆ ತಡೆದರೆ ಅವುಗಳು ಹೋಗುವುದು ಎಲ್ಲಿಗೆ ? ಸಮಂಜಸವಾಗಿ ಉತ್ತರಿಸಿ. ಮತ್ತೆ ವಾಪಸ್ ಬೇಲೂರು ಹರೀಶ್ ತೋಟವೆ ಒಂದು ಉತ್ತರ ಹಾಗಿದ್ದಮೇಲೆ ಪ್ರತಿ ವರ್ಷ ಹರೀಶ್ ಹಾಗು ಹಾನಿಗೊಳಗಾಗುವ ತೋಟಕ್ಕೆ 20ರಿಂದ30 ಲಕ್ಷದಂತೆ ಪರಿಹಾರ ನೀಡಿ ಇದು ಸರ್ಕಾರಕ್ಕೆ ನನ್ನ ಮನವಿ ಅದು ಬಿಟ್ಟು ರಾಜಿನಾಮೆ ನಾಟಕ ಬೇಡ ಸಂಪೂರ್ಣ 58 ಆನೆ ಸ್ಥಾಳಂತರಿಸುವ ಉದ್ದೇಶ ನಿಮಗಿದ್ದರೆ ಅಷ್ಟು ಆನೆಗೆ ಕೆಡ್ಡ ತೋಡಿ ಸೆರೆ ಹಿಡಿದು ಸ್ಥಳಾಂತರ ಮಾಡಿ. ಆ ಮನೋಬಲ ಶಕ್ತಿ ನಿಮ್ಮಲ್ಲಿ ಇಲ್ಲ ಎಂದರೆ ಆ ಸಾಮರ್ಥ್ಯ ನಮ್ಮ ಅಪ್ಪಟ ಮಲೆನಾಡು ಮೂಡಿಗೆರೆ ಜನಗಳಿಗಿದೆ ಮಾಡುತ್ತಿವಿ ನಾವು ನೀವು ಹೇಳಿ ನೋಡನ ಅಯ್ತು ಏನಾದರು ಮಾಡಿ ಅಂತ
ಈಗಲು ಅರ್ಥ ಮಾಡಿಕೊಳ್ಳಿ ಇಲ್ಲಿ ಆನೆಗೆ ಕೆಡ್ಡ ತೋಡುವ ಬದಲು ಜನಸಾಮಾನ್ಯರ ಕೆಡ್ಡ ತೋಡುತ್ತಿರುವುದು ಕಣ್ಣ ಮುಂದೆ ಕಾಣುತ್ತಿದೆ ಈ ಗ್ರೂಪ್ ಅಲ್ಲಿ ಒಬ್ಬ ಸತ್ಯ ಮಾತಡೋದಿದ್ದರೆ ಒಂದೇ ಗುಂಪು ಐವತ್ತೆಂಟು ಆನೆ ಒಂದೇ ಸರಿ ಸೆರೆ ಹಿಡಿಯೋ ತಾಕತ್ತು ಇದೆ ಅತವ ಇಲ್ಲ ಅಂತ ಹೇಳಿ ಐವತ್ತ ಎಂಟು ಆನೆ ಕೆಡ್ಡ ತೋಡಿ ಸೆರೆ ಹಿಡಿಯೋಕೆ ಆಗಲ್ಲ ಅಂದಮೇಲೆ ಕರ್ನಾಟಕದ ಏಳು ಕೋಟಿ ಜನಗಳಿಗೆ ಕೆಡ್ಡ ತೋಡುತ್ತಾರೆ ಅಂದರೆ ಅರ್ಥ ನೀವು ಮಾಡಿಕೊಳ್ಳಿ…





ವರದಿ..
ವಿನಯ..ಮಗ್ಗಲಮಕ್ಕಿ..

