ಆಪರೇಷನ್ ಗಜ ಕಾರ್ಯಾಚರಣೆಗೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ..
1 min read
ಆಪರೇಷನ್ ಗಜ ಕಾರ್ಯಾಚರಣೆಗೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ..
ಮೂಡಿಗೆರೆ: ಬೇಲೂರು ಭಾಗದಿಂದ ಮೂಡಿಗೆರೆ ತಾಲೂಕಿನತ್ತ ಕಾಡಾನೆಗಳ ಹಿಂಡನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಆಪರೇಷನ್ ಗಜ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಕಾಂಗ್ರೆಸ್ ಕಾರ್ಯಕರ್ತರು ಮೂಡಿಗೆರೆ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸರಕಾರದ ಸಚಿವರು ಅರಣ್ಯ ಇಲಾಖೆ ಅಧಿಕಾರಿಗಳು ಶಾಸಕರಾದ ನಯನ ಮೋಟಮ್ಮ, ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ, ಶ್ರೀನಿವಾಸ್ ಇವರ ಗಮನಕ್ಕೆ ಬಾರದೆ ಭದ್ರಾ ಅಭಯಾರಣ್ಯಕ್ಕೆ ಓಡಿಸುವ ಕಾರ್ಯವನ್ನು ರಾತ್ರೋ ರಾತ್ರಿ ಮಾಡಿರುವುದರಿಂದ ಆ ಭಾಗದ ಬೆಳೆಗಾರಾರು ಸಾರ್ವಜನಿಕರು ಭಯದಲ್ಲಿ ಇರುವಂತಾಗಿದೆ. ಬೇಲೂರಿನಿಂದ ಕಾಡಾನೆಗಳನ್ನು ತತ್ಕೊಳ ಅರಣ್ಯ ಪ್ರದೇಶದತ್ತ ಅಟ್ಟುತ್ತಿರುವುದರಿಂದ ಸ್ಥಳೀಯ ರೈತರು ಮತ್ತು ಗ್ರಾಮಸ್ಥ-ರಿಗೆ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳ ಬೇಜವಬ್ದಾರಿತನಕ್ಕೆ ನಮ್ಮ ಶಾಸಕರು ರಾಜೀನಾಮೆ ನೀಡುವಂತಾಗಿದೆ ಕೂಡಲೇ ಆನೆಗಳನ್ನು ವಾಪಾಸು ಕಳಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಸಿದರು.
ಹಾಸನ ಜಿಲ್ಲೆಗೆ ಹೊಂದಿಕೊಂಡಿರುವ ಬಿಲ್ಲೆ, ನಾಗರಹೊಳೆ, ಬಂಡೀಪುರ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಒಡಿಸುವುದನ್ನು ಬಿಟ್ಟು ಮೂಡಿಗೆರೆ ತತ್ಕೊಳ ಮುಖಾಂತರ ಭದ್ರಾ ಅಭಯಾರಣ್ಯಕ್ಕೆ ಓಡಿಸುವಾಗ ಎಷ್ಟು ಗ್ರಾಮ ಹಾಗೂ ಜನಪ್ರದೇಶ ಸಿಗುತ್ತದೆ ಎಂಬುದನ್ನು ಯೋಚಿಸಬೇಕಿತ್ತು ಎಂದು ಮದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಅಲ್ಲೂರು ಬ್ಲಾಕ್ ಅಧ್ಯಕ್ಷ ಮುದಪಿರ್, ಕಳಸ ಬ್ಲಾಕ್ ಅಧ್ಯಕ್ಷ ಶ್ರೇಣಿಕ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿ.ಬಿ.ಶಂಕರ್, ರಘು ಮಗ್ಗಲಮಕ್ಕಿ, ಸಂಪತ್, ಜಗದೀಶ್, ಸುಬ್ರಹ್ಮಣ್ಯ ತ್ರಿಪುರ ಮತ್ತಿತರರಿದ್ದರು.

