ಚಿಕ್ಕಮಗಳೂರು ತಾಲೂಕು ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರಿನಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿ….
1 min read
ಚಿಕ್ಕಮಗಳೂರು ತಾಲೂಕು ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರಿನಲ್ಲಿ ಕೊಳೆತು ನಾರುತ್ತಿರುವ ಕಸದ ರಾಶಿ


ಕ್ರಿಮಿ ಕೀಟಗಳು ಈ ರಾಶಿಯ ಮೇಲೆ ಕೂತಿರುವುದು ಪ್ರತಿ ಸೋಮವಾರ ಮಲ್ಲಂದೂರಿನ ಈ ಮಾರುಕಟ್ಟೆಯಲ್ಲಿ ಸಂತೆ ನಡೆಯುತ್ತಿದೆ ಈ ಸಂತೆ ಸುಂಕ ಮತ್ತು ಟೆಂಡರ್ ಪ್ರಕ್ರಿಯೆ ಪ್ರತಿ ವರ್ಷ ಗುತ್ತಿಗೆದಾರರು ಲಾಭ ಮಾಡಿಕೊಳ್ಳುತ್ತಾರೆ ವಿಪರ್ಯಾಸ ಎಂದರೆ ಎಲ್ಲೆಂದರಲ್ಲಿ ಕಸದ ರಾಶಿ ಕೊಳೆತು ನಾರುತ್ತಿರುವ ರಸ್ತೆ ಬದಿಯಲ್ಲಿ ಜನ ಓಡಾಡುವುದೇ ಕಷ್ಟಕರವಾಗಿದೆ ಇಂಥ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿ ಅನಿಸಿಕೊಂಡವರು ಮೂಕ ಪ್ರೇಕ್ಷಕರಾಗಿ ಓಡಾಡುತ್ತಿರುವುದು ಆಶ್ಚರ್ಯಕರ ಸಂಗತಿ ಹಾಗಾಗಿ ಈ ವಿಚಾರವನ್ನು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನಕ್ಕೆ ತಂದು ಬೃಹತ್ ಮಟ್ಟದ ಹೋರಾಟಕ್ಕೆ ಸಜ್ಜಾಗಲು ತೀರ್ಮಾನಿಸಿದ್ದೇವೆ ಗ್ರಾಮಸ್ಥರದ ತಾವುಗಳೆಲ್ಲರೂ ಕೈಜೋಡಿಸಿ ಮಲ್ಲಂದೂರು ಪಟ್ಟಣವನ್ನು ಸ್ವಚ್ಛಮಲ್ಲಂದೂರು ಮಾರ್ಪಡಿಸಬೇಕಾಗಿದೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಜೊತೆಗೆ ನೀವುಗಳು ಕಸ ವಿಲೇವಾರಿ ಗ್ರಾಮ ಪಂಚಾಯಿತಿಯ ವಾಹನಕ್ಕೆ ಹಾಕಿ ಸ್ವಚ್ಛತೆಯನ್ನು ಕಾಪಾಡಿ

