लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
25/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಮೀಲಾದ್ ಆರ್ಟ್ ಫೆಸ್ಟ್–2026 : ನಬಿ ಮದ್ಹ್ ಗಾಯನದ ಮೂಲಕ ಪ್ರವಾದಿ ಸಂದೇಶ ಸಾರಿದ ಪುಟಾಣಿ ಮಕ್ಕಳು.”

1 min read

ಬಣಕಲ್:ದಿನಾಂಕ 24/08/2026ರ ಸೋಮವಾರ ಅಸ್ತಮಿಸಿದ ಮಂಗಳವಾರದಂದು ಚಕ್ಕಮಕ್ಕಿಯಲ್ಲಿ ನೆಬಿದಿನದ ಅಂಗವಾಗಿ ಬದ್ರಿಯಾ ಜುಮಾ ಮಸೀದಿ ಹಾಗೂ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಮತ್ತು ಎಸ್.ಕೆ.ಎಸ್.ಎಸ್.ಎಫ್,ಎಸ್.ಕೆ.ಎಸ್.ಬಿ.ವಿ.ಇದರ ವತಿಯಿಂದ ನೂರುಲ್ ಹುದಾ ವಿದ್ಯಾರ್ಥಿಗಳಿಗೆ ವುಲಿದಲ್ ಹಬೀಬ್ ಮೀಲಾದ್ ಕಾನ್ಫರೆನ್ಸ್- 2026 ಮೀಲಾದ್ ಆರ್ಟ್ ಫೆಸ್ಟ್ ಎಂಬ ಶೀರ್ಷಿಕೆ ಅಡಿಯಲ್ಲಿ ನೆಬಿ ಮದ್ಹ್ ಸಾಂಗ್,ಕಿರಾಹತ್,ಬುರ್ದಾ ಮಜ್ಲಿಸ್,ಪ್ರಭಾಷಣ ಮುಂತಾದ ಸ್ಪರ್ಧೆಗಳು ನಡೆಯಿತು.

ಈ ಕಾರ್ಯಕ್ರಮಕ್ಕೆ ಅತಿಥಿಗಳು ಹಾಗೂ ನೆರೆದಿರುವ ಜಮಾಹತ್ ಬಾಂಧವರನ್ನು ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಖಜಾಂಜಿ ಯಾಸಿರ್ ಸ್ವಾಗತಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಸಿ.ಅಯ್ಯೂಬ್ ಹಾಜಿ ಚಕ್ಕಮಕ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಇಬ್ರಾಹಿಂ ಹಾಜಿ,ನಾಸಿರ್ ಹಾಜಿ ಝೆನಿತ್,ಮಜಿದ್ ಝೆನಿತ್,ಮೊಯ್ದಿನ್,ನಝೀರ್ ಅಲ್ ಅಮೀನ್,ಎಸ್.ಮಹಮ್ಮದ್,ಆಸಿಫ್ ಬಿ.ಎ.,ಕರೀಂ,ಯಾಕೂಬ್,ಇರ್ಷಾದ್ ಸಬ್ಬೇನಹಳ್ಳಿ,ಅಸ್ಗರ್.ಸಿ.ಎ.,ಇಸಾಕ್,ಹಸನ್,
ಯಾಸಿರ್ ಮಹಬರಿ,ಸಫ್ವಾನ್ ಫೈಝಿ ಮಹಬರಿ,ಅಬ್ದುಲ್ ಫತ್ತಾಹ್ ಖಾಸಿಮಿ,ಅಬ್ದುಲ್ ರೆಹಮಾನ್ ಅನ್ಸಾರಿ,ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಕಾರ್ಯದರ್ಶಿ ಬಿ.ಎಂ.ಅಝೀಝ್,ಸಿನಾನ್ ಫೈಝಿ ಖಲಂದರಿ,ಝೈದ್ ಫೈಝಿ ಖಲಂದರಿ ಹಾಗೂ ಮುಂತಾದವರು ಹಾಜರಿದ್ದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಫತ್ತಾಹ್ ಖಾಸಿಮಿ,ಲೋಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ರಬಿವುಲ್ ಅವ್ವಲ್ ತಿಂಗಳ 12 ರಂದು ಜನಿಸಿದರು,ಇವರು ಲೋಕಕ್ಕೆ ಅನೇಕ ಸಂದೇಶಗಳನ್ನು ನೀಡಿದ್ದು,ಈಗಿನ ಯುವಜನರು ಮತ್ತು ಸರ್ವ ಮುಸ್ಲಿಂ ಸಮುದಾಯ ಪಾಲಿಸಬೇಕಿದೆ,ನೆರೆಮನೆಯ ವ್ಯಕ್ತಿ ಅನ್ಯ ಧರ್ಮದವರಾದರೂ ಸರಿ,ಅವರು ಹಸಿದಿರುವಾಗ ಅವರಿಗೆ ಕೊಡದೆ ಹೊಟ್ಟೆತುಂಬಾ ತಿಂದರೆ ನೀನು ನಿಜವಾದ ಮುಸಲ್ಮಾನನಲ್ಲ,ನಿನ್ನ ಧರ್ಮದಲ್ಲಿ ಜೀವಿಸು,ಅನ್ಯ ಧರ್ಮಗಳನ್ನು ಗೌರವಿಸು ಮತ್ತು ಪ್ರೀತಿಸು,ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡಬೇಡಿ,ಅನಾಥ ಮಕ್ಕಳನ್ನು ಪ್ರೀತಿಯಿಂದ ಕಾಣಿರಿ,ನಿಮ್ಮ ಕೈಯಿಂದಾದ ಸಹಾಯವನ್ನು ಮಾಡಿ,ದುರ್ಮಾರ್ಗಿಗಳಾಗಬೇಡಿ,ಮಾದಕ ವಸ್ತುಗಳ ದಾಸ್ಯಕ್ಕೆ ಒಳಗಾಗಬೇಡಿ,ಧರ್ಮಗಳ ಹೆಸರಲ್ಲಿ ಕಚ್ಚಾಡಬೇಡಿ ಎಂದು ಹೇಳಿರುವ ಸಂದೇಶಗಳನ್ನು ನಾವು ಪಾಲಿಸಿದರೆ ನಮ್ಮ ಭಾರತ ದೇಶ,ನಮ್ಮ ದೇಶದ ಜನರು ಎಲ್ಲರೂ ಒಟ್ಟಾಗಿ ಬಾಳುವುದರಲ್ಲಿ ಸಂದೇಹವಿಲ್ಲ ಎಂದರು.

ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳು ತಮ್ಮ ಕಂಠ ನೆಬಿ ಮದ್ಹ್ ಹಾಡುಗಳಿಂದ ಲೋಕ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆಯನ್ನು ಸಾರಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ಇದರ ಗೌರವಾಧ್ಯಕ್ಷರಾದ ಆಸೀಫ್.ಬಿ.ಎಂ,ಅಧ್ಯಕ್ಷರಾದ ಇಮ್ರಾನ್,ಉಪಾಧ್ಯಕ್ಷರಾದ ಬಿ.ಎಂ.ಹಕೀಂ ಹಾಗೂ ಸದಸ್ಯರು ಹಾಜರಿದ್ದರು.

ಕೊನೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಬಹುಮಾನ ವಿತರಣೆ ಮತ್ತು ಸೇರಿರುವ ಎಲ್ಲರಿಗೂ ಅನ್ನದಾನ ನೀಡಲಾಯಿತು.

✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed