ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಅಂಬೇಡ್ಕರ್ ಅವರ ಭಾವ ಮೂಲಕ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.#avintvcom
1 min readಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮಹಾಪರಿನಿರ್ವಾಣ ದಿನಾಚರಣೆ ಆಚರಿಸಲಾಯಿತು.
ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಶೇಖಪ್ಪ ಮಾದರ, ಪ್ರಧಾನ ಕಾರ್ಯದರ್ಶಿ ಉಮೇಶ ಪೂಜ್ಯರ, ಕರಿಯಪ್ಪ ಚಲವಾದಿ ಹಾಗೂ ಲಕ್ಷ್ಮಣ ಪೂಜಾರ, ಮುತ್ತಪ್ಪ ಚಲವಾದಿ, ರಾಜು ಚಲವಾದಿ, ಶರಣಪ್ಪ ಚಲವಾದಿ, ಮುತ್ತು ಪೂಜಾರ ಮುಂತಾದವರು ಉಪಸ್ಥಿತರಿದ್ದರು.
ಈ ಸಂಧರ್ಬದಲ್ಲಿ ಗದಗ ಜಿಲ್ಲೆಯ ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಶರಣು ಚಲವಾದಿ ಮಾತನಾಡಿ ಮಹಾನಾಯಕ ಡಾ.ಬಿ,ಆರ್.ಅಂಬೇಡ್ಕರ್ ಅವರು ಸರ್ವಜನಾಂಗದ ಒಳಿತಿಗಾಗಿ ಸಂವಿಧಾನ ರಚಿಸಿದ್ದು ಅವರನ್ನು ದೇಶದ ಎಲ್ಲ ಜನಾಂಗದ ಜನರು ಸ್ಮರಿಸಬೇಕು , ಈ ಸಭೆಯ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತು ಮಾನ್ಯ ಮುಖ್ಯಮಂತ್ರಿ ಯವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ, ಮಹಾಪರಿನಿರ್ವಾಣ ದಿನ, ಸಂವಿಧಾನ ಸಮರ್ಪಣಾ ದಿನವನ್ನು ಮುಂಬರುವ ದಿನಗಳಲ್ಲಿ ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ನಂತರ ಹೊಳೆಆಲೂರ ಮಂಡಲ ಬಿಜೆಪಿ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಶ್ರೀ ಶೇಖಪ್ಪ ಮಾದರ ಅವರು ಮಾತನಾಡಿ ರಾಜಕೀಯ ಇತಿಹಾಸದಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ನಮ್ಮ ಬಿಜೆಪಿ ಪಕ್ಷದಲ್ಲಿ ಮಾತ್ರ ಎಂದು ಹೆಮ್ಮೆಯಿಂದ ಹೇಳಿದರು.


