ವಿದ್ಯುತ್ ಕಣ್ಣ ಮುಚ್ಚಾಲೆ… *ಶಾಸಕರೆ ವಿದ್ಯುತ್ ಕಣ್ಣ ಮುಚ್ಚಾಲೆ ಕಡೆ ಗಮನ ಹರಿಸಿ
1 min read
ವಿದ್ಯುತ್ ಕಣ್ಣ ಮುಚ್ಚಾಲೆ…
*ಶಾಸಕರೆ ವಿದ್ಯುತ್ ಕಣ್ಣ ಮುಚ್ಚಾಲೆ ಕಡೆ ಗಮನ ಹರಿಸಿ*
ಬಿಜೆಪಿ ಸೋಷಿಯಲ್ ಮೀಡಿಯಾ ಪ್ರಮುಖ್
ಸುನಿಲ್ ಮಣ್ಣಿಕೆರೆ ಆಕ್ರೋಶ….
ಮೂಡಿಗೆರೆ : ಮೂಡಿಗೆರೆ ಉಪ ವಿಭಾಗದಿಂದ ಪ್ರಸಾರವಾಗುವ ವಿದ್ಯುತ್ ಗೋಣಿಬಿಡು ಭಾಗದಲ್ಲಿ ದಿನದಲ್ಲಿ ಸರಿಯಾಗಿ ಒಂದು ಗಂಟೆಯೂ ಸರಬರಾಜು ಅಗುತ್ತಿಲ್ಲ ಕಾಫಿ ಗಿಡಗಳು ಅಧಿಕ ಉಷ್ಣಾಂಶದಿಂದ ಒಣಗಿ ಹೋಗುತ್ತಿದ್ದು ವಿದ್ಯುತ್ ಕಣ್ಣ ಮುಚ್ಚಾಲೆ ಇದೆ ರೀತಿ ಮುಂದುವರೆದಲ್ಲಿ ರೈತರು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಸಲಾಗುವುದು ಎಂದು ಬಿಜೆಪಿ ಸೋಶಿಯಲ್ ಮೀಡಿಯಾ ತಾಲೋಕು ಸಂಚಾಲಕ ಸುನಿಲ್ ಮಣ್ಣಿಕೆರೆ ಎಚ್ಚರಿಕೆ ನೀಡಿದ್ದಾರೆ.
ಗೋಣಿಬಿಡು ಭಾಗದ ಮಣ್ಣಿಕೆರೆ, ಜನ್ನಾಪುರ, ಕಿರುಗುಂದ, ಜೀ ಹೊಸಳ್ಳಿ ಬಾಗಗಳಲ್ಲಿ ನಿರಂತರ ವಿದ್ಯುತ್ ಕೈಕೋಡುತ್ತಿದ್ದು ಹೇಳಿ ಕೇಳಿ ಮಲೆನಾಡಿನಲ್ಲಿ ಕಾಫಿಗೆ ಬಂಗಾರದ ಬೆಲೆ. ಕಾಫಿ ತೋಟಗಳಿಗೆ ಮಾರ್ಚ್ ತಿಂಗಳೊಳಗೆ ನೀರು ಹೊಡೆದು ಹೂ ಮಾಡಿಕೊಳ್ಳಬೇಕು ಆದರೆ ಮೂಡಿಗೆರೆ ಉಪ ವಿಭಾಗದಿಂದ ಸರಬರಾಜ್ ಆಗುವ ವಿದ್ಯುತ್ ಪದೆ ಪದೆ ಸ್ಥಗಿತಗೊಳ್ಳುತ್ತಿದ್ದು ಇತ್ತ ಪವರ್ ಕಟ್ ಕೂಡ ಆಗುತ್ತಿದ್ದು ಅಧಿಕಾರಿಗಳ ಗಮನಕ್ಕೆ ತಂದರು ಕ್ಯಾರೆ ಅನ್ನುತ್ತಿಲ್ಲ.
ವಿದ್ಯುತ್ ವ್ಯತೆಯಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬಾರಾಜಿನಲ್ಲಿ ತೊಂದರೆಯಾಗುತ್ತಿದೆ ಮೆಸ್ಕಾಂ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಇಲ್ಲವಾದಲ್ಲಿ ಗೋಣಿಬಿಡು ಸುತ್ತ ಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನೆಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
*ಶಾಸಕರೆ ವಿದ್ಯುತ್ ಕಣ್ಣ ಮುಚ್ಚಾಲೆ ಕಡೆ ಗಮನ ಹರಿಸಿ*
ಗೋಣಿಬಿಡು ಭಾಗದಲ್ಲಿ ನಿರಂತರವಾಗಿ ವಿದ್ಯುತ್ ಸ್ಥಗಿತ ಗೋಳ್ಳುತ್ತಿದ್ದು ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದು ಇದೆ ರೀತಿ ವಿದ್ಯುತ್ ಕೈ ಕೊಟ್ಟರೆ ರೈತರು ಬ್ಯಾಂಕ್ ಹಾಗೂ ಇತರೆ ಹಣಕಾಸು ಲೇವ ದೇವಿ ಸಂಸ್ಥೆಗಳಿಂದ ಸಾಲ-ಸೂಲಾ ಮಾಡಿ ಕಾಫಿ ತೋಟಗಳಿಗೆ ಬಂಡವಾಳ ಹೂಡಿದ್ದು ಇ ತಿಂಗಳಲ್ಲಿ ಗಿಡಕ್ಕೆ ನೀರು ಹಾಯಿಸಿದಲ್ಲಿ ಮಾತ್ರ ಮುಂದಿನ ವರ್ಷದ ಬೆಳೆ ನಮ್ಮ ಕೈ ಸೇರುವದು ಬೆಳೆ ಬಂದರೆ ಅಷ್ಟೇ ತೆಗೆದುಕೊಂಡ ಸಾಲ ತೀರಿಸಲು ಸಾದ್ಯವಾಗುವದು, ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಉದ್ದಿಮೆದಾರರಿಗೆ, ವರ್ಕ್ ಪ್ರಮ್ ಹೋಂ ಉದ್ಯೋಗಿಗಳಿಗೆ, ನೆಮ್ಮದಿ ಕೇಂದ್ರ, ನಾಡ ಕಚೇರಿಗಳಿಗೆ ವಿದ್ಯುತ್ ಅನಿವಾರ್ಯವಾಗಿದ್ದು ಮೆಸ್ಕಾಂ ಅಧಿಕಾರಿಗಳಿಗೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಖಡಕ್ ಎಚ್ಚರಿಕೆ ಕೋಟ್ಟು ವಿದ್ಯುತ್ ಪೂರೈಕೆಯಲ್ಲಿ ವ್ಯತೆಯಾಗದಂತೆ ಕ್ರಮ ಕೈ ಗೊಳ್ಳಬೇಕು.ಇಲ್ಲವಾದಲ್ಲಿ ರೈತರು ಬೃಹತ್ ಪ್ರತಿಭಟನೆ ಹಾದಿ ಹಿಡಿಯ ಬೇಕಾದಿತು.
ವರದಿ
ಸಿ. ಎಲ್. ಪೂರ್ಣೇಶ್ ಚಕ್ಕುಡಿಗೆ