ಟೈಲರ್ ಡೇ ಕಾರ್ಯಕ್ರಮ….
1 min read
ಟೈಲರ್ ಡೇ ಕಾರ್ಯಕ್ರಮ….
.
ಮೂಡಿಗೆರೆ ಬಿಜೆಪಿ ಕಾರ್ಯಾಲಯದ ಸಭಾಂಗಣದಲ್ಲಿ ನಗರ ಟೈಲರ್ ಸಮಿತಿಯ ವತಿಯಿಂದ ಟೈಲರ್ ಡೇ ಕಾರ್ಯಕ್ರಮವನ್ನು ಅಬಕಾರಿ ನೀರೀಕ್ಷಕರಾದ ಶೇಖರ್ ಉದ್ಘಾಟಿಸಿದರು.
ವೃತ್ತಿ ಬಾಂಧವರು,ಗಳಿಸಿದರಲ್ಲಿ ಯಾವುದೇ ವ್ಯಸನಕ್ಕೆ ಬಲಿಯಾಗದೆ ಉಳಿತಾಯ ಮಾಡಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪ್ರಯತ್ನಿಸಬೇಕೆಂದರು, ತಾಲೂಕು ಅಧ್ಯಕ್ಷರಾದ ಶಿವೇಗೌಡ ಮಾತನಾಡಿ 1997 ರಿಂದಲೂ ನೊಂದ ವೃತ್ತಿ ಬಾಂಧವರಿಗೆ ಧ್ವನಿಯಾಗಿ ಒಗ್ಗಟ್ಟಿನಿಂದ ಸಂಘಟನೆ ಕಟ್ಟಲಾಯಿತು,
ಅಧ್ಯಕ್ಷತೆ ವಹಿಸಿದ್ದ ನಗರ ಸಮಿತಿ ಅಧ್ಯಕ್ಷರಾದ ಉಮಾ ಶಂಕರ್ ಎಲ್ಲರ ಸಹಕಾರದಿಂದ ಸಮಾಜಮುಖಿ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪೂರ್ಣೇಶ್ ಪ್ರಾಸ್ತಾವಿಕ ಭಾಷಣ ಮಾಡಿದರು, ಉಪಾಧ್ಯಕ್ಷ ಷಣ್ಮುಖಾನಂದ, ಪದಾಧಿಕಾರಿಗಳಾದ ಸತೀಶ್, ಮಂಜುಳಾ, ಗಿರೀಶ್, ಬಸವರಾಜ್, ಗಿರೀಶ್, ಜಗದೀಶ್,ಮೊಹನ್,ಪ್ರಕಾಶ್, ದಿಪೀಕಾ, ಶೃತಿ,ಯೊಗೇಶ್ ,ಸುರೇಶ್,ಮಂಜು.ನರಸಿಂಮ.ಉಪಸ್ಥಿತರಿದ್ದರು.
ಟೈಲರ್ ಡೇ ಅಂಗವಾಗಿ ಹಿರಿಯ ವೃತ್ತಿ ಬಾಂಧವರಾದ ಸರಸಕ್ಕ ಮತ್ತು ದುಗ್ಗೆಗೌಡರವರಿಗೆ ಸನ್ಮಾನಿಸಲಾಯಿತು.