ಮೆಸ್ಕಾಂ ಉಪ ಕೇಂದ್ರಕ್ಕೆ ರೈತರಿಂದ ಮುತ್ತಿಗೆ…
1 min read
ಮೆಸ್ಕಾಂ ಉಪ ಕೇಂದ್ರಕ್ಕೆ ರೈತರಿಂದ ಮುತ್ತಿಗೆ….
ಮೂಡಿಗೆರೆ; ಸರ್ಕಾರದ ಆದೇಶದಂತೆ ರೈತರ ಪಂಪ್ ಸೆಟ್ ಗಳಿಗೆ ನಿಗದಿಪಡಿಸಿದ ವಿದ್ಯುತ್ ನೀಡುವಲ್ಲಿ ವಿಫಲವಾಗಿರುವ ದಾರದಹಳ್ಳಿಯ ಮೆಸ್ಕಾಂ ಉಪಕೇಂದ್ರಕ್ಕೆ ರೈತರು ಮತ್ತು ಬೆಳೆಗಾರಾರು, ರೈತರು ಹಾಗೂ ಸಾರ್ವಜನಿಕರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಮುಂದಾಳತ್ವವಹಿಸಿದ್ದ ರಾಜ್ಯ ರೈತಸಂಘದ ಉಪಾಧ್ಯಕ್ಷ ಎಂ.ಮಂಜುನಾಥ್ ಮಾತನಾಡಿ, ಈಗಾಗಲೇ ಮಲೆನಾಡಿನಲ್ಲಿ ಬಿರು ಬೇಸಿಗೆ ಪ್ರಾರಂಭವಾಗಿದ್ದು ಬೆಳೆಗಳು ಒಣಗಿ ಹೋಗುತ್ತಿದೆ. ಬೆಳೆಯೇ ನಮ್ಮ ಉಸಿರು. ಬೆಳೆ ಬೆಳೆಯಲು ಸಮಯಕ್ಕೆ ಸರಿಯಾಗಿ ಪಂಪ್ ಸೆಟ್ ಮೂಲಕ ರೈತರು ತಮ್ಮ ಜಮೀನುಗಳಿಗೆ ನೀರು ಹಾಕಬೇಕಾಗಿದ್ದು ಅನಿವಾರ್ಯ, ಸರ್ಕಾರ ರೈತರ ನೆರವಿಗೆ ಬಂದಿದ್ದು ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಂತೆ ಸಮಯ ನಿಗದಿ ಪಡಿಸಿ ಆದೇಶ ಹೊರಡಿಸಿದ್ದರು. ದಾರದಹಳ್ಳಿ ಮೆಸ್ಕಾಂ ಉಪಕೇಂದ್ರ ಸಂಪೂರ್ಣ
ವಿಫಲವಾಗಿದೆ ನೀರಿಲ್ಲದೆ ಬೆಳೆಗಳು ಹಾಳಾಗುತ್ತಿದ್ದು ಇಲಾಖೆಯೆ ನಷ್ಟ ಪರಿಹಾರ ತುಂಬಿಕೊಡುವಂತೆ ಒತ್ತಾಯಿಸಿದರು.
ಸ್ಥಳಿಯ ಅಧಿಕಾರಿಗಳು ವಿದ್ಯುತ್ ಒದಗಿಸಲು ಉಪಕರಣಗಳ ಕೊರತೆ ಇದೆ ಎಂದು ಸಬೂಬು ಹೇಳುತ್ತಿದ್ದಾರೆ. ಅಸರ್ಮಪಕ ವಿದ್ಯುತ್‌ನಿಂದ ಮೀಟರ್ ಸುಟ್ಟು ಹೋದರೆ ರೈತರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು, ಬಡ್ಡಿ ಮತ್ತು ಅನಗತ್ಯ ತೆರಿಗೆಗಳ ಹೊರೆಯನ್ನು ರೈತರ ತಲೆಯ ಮೇಲೆ ಹೋರಿಸುತ್ತಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಡಿತ ಗೊಂಡ ವಿದ್ಯುತ್ ಅನ್ನು ಅದೇ ದಿನ ಮರು ಪೂರೈಕೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿದ್ಯುತ್ ಬಳಕೆದಾರರ ವೇದಿಕೆಯ ಅಧ್ಯಕ್ಷ ಭರತ್ ಮಡ್ಡಿಕೆರೆ, ಕೆಂಪೇಗೌಡ ಒಕ್ಕಲಿಗ ಸಂಘದ ತಾಲ್ಲೂಕು ಅಧ್ಯಕ್ಷ ಬ್ರಿಜೇಶ್‌ಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪುಟ್ಟಸ್ವಾಮೇ ಗೌಡ ಸೇರಿದ೦ತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
24 ಗಂಟೆಗಳಲ್ಲಿ ಸಮರ್ಪಕ ವಿದ್ಯುತ್ ನೀಡದೇ ಇದ್ದಲ್ಲಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಾ ದಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದರು.