ಹನಿ ಹನಿ ನೀರು ಅಮೂಲ್ಯ ಸಂಪತ್ತು.
1 min read
ಹನಿ ಹನಿ ನೀರು ಅಮೂಲ್ಯ ಸಂಪತ್ತು.
ವಿ .ಎಂ. ಪಿ. ಎಂ. ಟ್ರಸ್ಟ್ (ರಿ) ಮೂಡಿಗೆರೆ ಇವರ ಆಶ್ರಯದಲ್ಲಿ ಪಟ್ಟಣ ಪಂಚಾಯಿತಿ ಮೂಡಿಗೆರೆಯಲ್ಲಿ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ವತಿಯಿಂದ ಸಾರ್ವಜನಿಕರಿಗೆ ವಿಶ್ವ ಜಲ ದಿನದ ಮಹತ್ವ ಮತ್ತು ನೀರಿನ ಸಂರಕ್ಷಣೆ ಕಾನೂನೂ ಅರಿವು ನೀಡುವ ಕುರಿತಂತೆ ಕರ ಪತ್ರ ಬಿಡುಗಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಡಿ.ಕೆ. ಲಕ್ಷ್ಮಣ್ ಗೌಡ ರವರು ಬಿಡುಗಡೆ ಮಾಡಿದರು. ನೀರು ಅತಿ ಅಮೂಲ್ಯವಾದ ಜೀವದ್ರವ ಪ್ರಕೃತಿದತ್ತ ವಾದವಾಗಿ ಬಂದ ಕೊಡುಗೆ ಇದರ ಸಂರಕ್ಷಣೆ ಮತ್ತು ಮಿತವಾಗಿ ಬಳಕೆ ಮಾಡುವ ಮೂಲಕ ಜಾಗೃತಿ ಮೂಡಿಸಲು ವಿಶ್ವ ಜಲ ದಿನವನ್ನು ಆಚರಣೆ ಮಾಡಲಾಗುತ್ತಿದೆ .
ನೀರನ್ನು ಪೋಲು ಆಗದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನೋದ್ ಬಿದರಹಳ್ಳಿ ಮಾತನಾಡಿ ಸಾರ್ವಜನಿಕವಾಗಿ ಹಾದಿ ಬೀದಿಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರಿನ ಬಗ್ಗೆ ಸಾರ್ವಜನಿಕರು ಗಮನ ಹರಿಸುವುದು ಮತ್ತು ಅಗತ್ಯಕ್ಕೆ ತಕ್ಕಷ್ಟು ಮಾತ್ರ ನೀರನ್ನು ಬಳಸಿ ವ್ಯರ್ಥವಾಗದಂತೆ ತಡೆಯುವುದು ಪ್ರತಿಯೊಬ್ಬ ಸಾರ್ವಜನಿಕರ ಕರ್ತವ್ಯ ಎಂದರು.
ವಿ ಎಂ ಪಿಎಂ ಟ್ರಸ್ಟ್ ಅಧ್ಯಕ್ಷರಾದ ವಿಪಿ ನಾರಾಯಣ್ ಮಾತನಾಡಿ ದಿನಾಂಕ 21-03.2025 ರಂದು ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ವಿಎಂ ಪಿಎಂ ಟ್ರಸ್ಟ್ ವತಿಯಿಂದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಕಾನೂನು ಅರಿವು ಮತ್ತು ವಿಶ್ವ ಜಲ ಸಂರಕ್ಷಣ ಕುರಿತಂತೆ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿಯನ್ನು ಪಡೆಯುವಂತೆ ವಿನಂತಿಸಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯ ಅಧ್ಯಕ್ಷರಾದ ಎಂ.ಎಸ್. ನಾಗರಾಜು ಸುಗ್ರಾಮ ಸಂಯೋಜಕರಾದ ನವೀನ್ ಆನೆದಿಬ್ಬ. ಕಸಾಪ ಜಿಲ್ಲಾ ಸಂಚಾಲಕರಾದ ಶಾಂತ್ ಕುಮಾರ್ .
ಕಾಫಿನಾಡು ಸಮಾಜ ಸೇವಾ ಸಂಘ ಅಧ್ಯಕ್ಷರಾದ ಹಸೇನರ್ ಬಿಳಗುಳ. ಸಹಾಯಕ ಅಧಿಕಾರಿ ಕಾಂತ್ ರಾಜ್. ವಿಜಯಲಕ್ಷ್ಮೀ ..M.B.ಕಾರ್ತಿಕ್. H.V. ಮಹೇಶ್ ಪಿ.ಕೆ. ಲೋಕೇಶ್ ಇತರರು ಇದ್ದರು