ಜಿಲ್ಲಾ ಯುವಜನ ಮೇಳ..ಮೂಡಿಗೆರೆಯಲ್ಲಿ…
1 min read
ಜಿಲ್ಲಾ ಯುವಜನ ಮೇಳ….
ಜಿಲ್ಲಾ ಮಟ್ಟದ ಯುವಜನ ಮೇಳ ಮಾರ್ಚ್ 16
ಜಿಲ್ಲೆಯ ಸುಮಾರು 300ಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಲಿದ್ದು , ಎಲ್ಲ ಕಲಾವಿದರಿಗೂ ಊಟದ ವ್ಯವಸ್ಥೆ,ಸ್ಪರ್ಧೆಯಲ್ಲಿ ಗೆದ್ದ ತಂಡಗಳಿಗೆ ಪ್ರಥಮ ದ್ವಿತೀಯ ಬಹುಮಾನ ನೀಡಿ ಪ್ರಶಸ್ತಿ,ಜೊತೆಗೆ ನಗದು ಬಹುಮಾನ ಕೂಡ ನೀಡಲಾಗುತ್ತದೆ, ಜಿಲ್ಲೆಯ ಜನಪ್ರತಿ ನಿಧಿಗಳು ಸೇರಿದಂತೆ ಹಲವಾರು ಸಮಾಜದ ಗಣ್ಯರು ಉದ್ಘಾಟನೆಯಲ್ಲಿ ಭಾಗವಹಿಸಲಿದ್ದು, ಜಿಲ್ಲೆಯ ಜನಪದ ಕಲಾ ಸೇವಕರಿಗೆ ಗೌರವ ಪುರಸ್ಕಾರ ನೀಡುವ ಕಾರ್ಯಕ್ರಮ ಇರುತ್ತದೆ ಎಂದು ಬಕ್ಕಿ ಮಂಜುನಾಥ್ ಹೇಳಿದರು.
ಜಿಲ್ಲೆಯಲ್ಲಿ ಸದಾ ಸಕ್ರಿಯವಾಗಿ ಇರುವ ಕಲಾ ಸಂಘ ಅಂದರೆ ಮಿತ್ರ ಜಾನಪದ ಕಲಾ ಸಂಘ ಹಾಗಾಗಿ ಕಲೆಗಳನ್ನು ಉತ್ತೇಜಿಸುವ ಈ ಕಾರ್ಯಕ್ರಮ ಈ ಹಿಂದೆ ಸರ್ಕಾರ ಮಾಡುತಿತ್ತು.
ಆದರೆ ಕಳೆದ 6ವರ್ಷಗಳಿಂದ ಈ ಕಾರ್ಯಕ್ರಮ ಕೈ ಬಿಡಲಾಗಿದೆ ದಯಮಾಡಿ ಸರ್ಕಾರ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮತ್ತೆ ಈ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು ಎಂದು ಚಂದ್ರಶೇಖರ್ ಕೆ ಸಿ ಹೇಳಿದರು.
ಮಿತ್ರ ಜಾನಪದ ಕಲಾ ಸಂಘ ಇದರ ಕಾರ್ಯದರ್ಶಿ ಬಕ್ಕಿ ಮಂಜುನಾಥ,ಚಂದ್ರಶೇಖರ್, ಸುನೀಲ್, ಶಶಿ ಇದ್ದರು