ಗಾಂಜ ವಶ
1 min read
ಗಾಂಜ ವಶ.
ಶ್ರೀ ಮತಿ ರೂಪ ಎಂ
ಅಬಕಾರಿ ಉಪ ಆಯುಕ್ತರು ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ಇವರ ಮಾರ್ಗದರ್ಶನದಲ್ಲಿ ಶ್ರೀ ಸಂತೋಷ್ ಕುಮಾರ್ ಕೆ ಜಿ ಅಬಕಾರಿ ಅಧೀಕ್ಷಕರು ಇವರ ನಿರ್ದೇಶನದ ಮೇರೆಗೆ, ಶ್ರೀ ಎಂ ಆರ್ ಶೇಖರ್ ಉಪ ಅಧೀಕ್ಷಕರು ಮೂಡಿಗೆರೆ ಇವರ ನೇತೃತ್ವದಲ್ಲಿ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯ ಬಿಜುವಳ್ಳಿ ಗ್ರಾಮದ ಹಳಸೆ ತಿರುವಿನಲ್ಲಿ ವಜೀರ್ ಅಹ್ಮದ್ ಅಲಿಯಾಸ್ ಶೇಕ್ ಅಬ್ದುಲ್ಲ ಬಿನ್ ಲೇಟ್ ಅಲಿಜಾನ್ 27 ವರ್ಷ, ಜೆಎಂ ರಸ್ತೆ ಮೂಡಿಗೆರೆ ಎಂಬುವವನು ತನ್ನ ವ್ಯಾಗನಾರ್ ಕಾರ್ ಸಂಖ್ಯೆಕೆಎ19 ಎನ್ 5049ರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿ ಅದರ ತೂಕ ಸುಮಾರು1.975 ಕೆಜಿ ಇದ್ದು ಸದರಿ ಆರೋಪಿಯನ್ನು ಎನ್ ಡಿ ಪಿ ಎಸ್ ಕಾಯ್ದೆ ಅಡಿ ಬಂಧಿಸಿ ಪ್ರಕರಣವನ್ನು ದಾಖಲಿಸಿ ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಇಲ್ಲಿಗೆ ಹಾಜರುಪಡಿಸಿ ನ್ಯಾಯಾಂಗಕ್ಕೆ ಬಂಧನಕ್ಕೆ ಒಪ್ಪಿಸಲಾಗಿದೆ. ಈ ದಾಳಿ ಕಾರ್ಯದಲ್ಲಿ, ಶ್ರೀ ಲೋಕೇಶ್ ಸಿ ಅಬಕಾರಿ ನಿರೀಕ್ಷಕರು, ಸಿಬ್ಬಂದಿಗಳಾದ ರಮೇಶ್
ತುಳಜಣ್ಣನವರ್, ಶಂಕರ ಗುರವ ,ಮತ್ತು ವಾಹನ ಚಾಲಕರಾದ ಪ್ರವೀಣ್ ಇವರು ಭಾಗಿಯಾಗಿರುತ್ತಾರೆ. ಪ್ರಕರಣವನ್ನು ಅಬಕಾರಿ ನಿರೀಕ್ಷಕರಾದ ಲೋಕೇಶ ಸಿ ಮೂಡಿಗೆರ ಉಪ ವಿಭಾಗ ಇವರು ಪ್ರಕರಣ ದಾಖಲಿಸಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.