ಪರಿಸರ ಸಂರಕ್ಷಣಾ ಜಾತಾ ಕಾರ್ಯಕ್ರಮ.
1 min read
ಪರಿಸರ ಸಂರಕ್ಷಣಾ ಜಾತಾ ಕಾರ್ಯಕ್ರಮ.
ಕಪುಚಿನ್ ಕೃಷಿಕ್ ಸೇವಾ ಕೇಂದ್ರ ರೀ ವಿಮುಕ್ತಿ ಬಣಕಲ್ ತರುವೇ ಗ್ರಾಮ ಪಂಚಾಯಿತಿ ಹಾಗೂ (ಸುಗ್ರಾಮ) ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿ
ಗಳ ಒಕ್ಕೂಟ ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ತರುವೆಯಲ್ಲಿ ಶಿವರಾತ್ರಿ ಪ್ರಯುಕ್ತ ಧರ್ಮಸ್ಥಳಕ್ಕೆ ತೆರಳುವ ಪಾದಯಾತ್ರೆಗಳಿಗೆ ಎರಡು ದಿನಗಳ ಕಾಲ ಪರಿಸರ ಸಂರಕ್ಷಣಾ ಜಾತಾ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮವನ್ನು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಎಂಬ ಬಿತ್ತಿ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ತರುವೇ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲ ಗೋಪಾಲ್ ರವರು ನೀಡಿದರು ಕಾರ್ಯಕ್ರಮ ಸಂಪೂರ್ಣ ವಿಭಿನ್ನತೆಯಿಂದ ಕೂಡಿದ್ದು ಪ್ರತಿಯೊಬ್ಬ ಪಾದ ಚಾರಿಗಳು ತಾವು ಮನೆಗೆ ತಲುಪಿದ ನಂತರ ತಮ್ಮ ಜಮೀನು ಅಥವಾ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಹಣ್ಣಿನ ಮತ್ತು ಪ್ರಕೃತಿಗೆ ಪೂರಕವಾದ ಗಿಡವನ್ನು ನೆಡುವುದರ ಮೂಲಕ ಪ್ರಕೃತಿ ಸಂರಕ್ಷಣೆ ಮಾಡುವಂತೆ ಅರಿವು ಮೂಡಿಸಲಾಯಿತು.
ತಾವು ಗಿಡ ನೆಡುವ ಫೋಟೋವನ್ನು ವಾಟ್ಸಪ್ ನೊಂದಿಗೆ ಹಂಚಿಕೊಂಡಲ್ಲಿ ಮತ್ತೊಬ್ಬ ರಿಗೆ ಗಿಡ ನೀಡಲು ಪ್ರೇರಣೆಯಾಗುತ್ತದೆ ಎಂದು ಅರಿವು ಮೂಡಿಸಲಾಯಿತು ಅಂತೆಯೇ ಕಾರ್ಯಕ್ರಮಕ್ಕೆ ವಿಶೇಷವಾಗಿ ಚಿಕ್ಕಮಗಳೂರು ಉಡುಪಿ ಸಂಸದರಾದ ಶ್ರೀಯುತ ಕೋಟ ಶ್ರೀನಿವಾಸ್ ಪೂಜಾರಿ ರವರು ಪರಿಸರ ಸಂರಕ್ಷಣಾ ಜಾತ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಪರಿಸರ ಸಂರಕ್ಷಣೆಗೆ ಹಣ್ಣಿನ ಗಿಡ ನೆಡುವುದರ ಮೂಲಕ ಪ್ರಕೃತಿ ಪ್ರೇಮ ಮೆರೆದರು. ಅಂತೆಯೇ ಅರಿವು ಕಾರ್ಯಕ್ರಮದಲ್ಲಿ ಸುಗ್ರಾಮ ಸಂಯೋಜಕರಾದ ನವೀನ್ ಆನೆದಿಬ್ಬ ಮಾತನಾಡಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುತ್ತ ಗಿಡ ನೆಟ್ಟರೆ ಮರವಾದ ನಂತರ ಸಿಗುವ ಪ್ರಯೋಜನಗಳು ಮತ್ತು ಅವುಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಪ್ರಕೃತಿಯಿಂದ ಮಾನವ ಹಲವಾರು ಪ್ರಯೋಜನ ಪಡೆಯುತ್ತಾನೆ ಆದರೆ ಮಾನವನಿಂದ ಪ್ರಕೃತಿಗೆ ಕೊಡುಗೆ ಏನು ಎಂಬುದನ್ನು ನಾವು ವಿಮರ್ಶೆ ಮಾಡಿಕೊಂಡು ನಾವೆಲ್ಲರೂ ಪರಿಸರಕ್ಕೆ ಮತ್ತು ಪ್ರಕೃತಿಗೆ ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು. ಕಪುಚಿನ್ ಕೃಷಿಕ ಸೇವ ಕೇಂದ್ರದ ನಿರ್ದೇಶಕರಾದ ಫಾ” ಎಡ್ವಿನ್ ಡಿಸೋಜರವರು ಪ್ರಕೃತಿ ಸಂರಕ್ಷಣೆ ಸ್ವಚ್ಛತೆಯ ಮಾರ್ಗ ಸೂಚನೆಗಳ ಬಗ್ಗೆ ಅರಿವು ಮೂಡಿಸಿದರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಆಹಾರವನ್ನು ವ್ಯರ್ಥ ಮಾಡದೆ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ಸ್ವೀಕರಿಸಿ ಎಸೆಯಬಾರದು ಹಾಗೂ ಬಳಸಿದ ಬಟ್ಟೆ ಹಾಗೂ ವಸ್ತುಗಳನ್ನು ಎಲ್ಲೆಂದರಲ್ಲಿ ಕಸದ ಬುಟ್ಟಿಗಳಲ್ಲಿ ಹಾಕುವಂತೆ ಮನವಿ ಮಾಡಿದರು ಪಾದಯಾತ್ರೆಗಳಿಗೆ ಕುಡಿಯಲು ತಂಪು ಪಾನೀಯವನ್ನು ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟ ಬಣಕಲ್ ವತಿಯಿಂದ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತರುವೇ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸ್ವರೂಪ ಸದಸ್ಯರಾದ ಸ್ಮಿತಾ. ರಘು ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗೀತಾ ಕೆ ಆರ್ ಪಲ್ಗುಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೋಮಲ ಹಳೆ ಮುಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸೋನಿಯ ವಿಮುಕ್ತಿ ಸಂಸ್ಥೆಯ ಕಾರ್ಯಕರ್ತರದ ವಿಂದ್ಯಾ ಸ್ವಯಂಸೇವಕರಾದ ಪ್ರಶಾಂತಿ ಶಶಿಕಲಾ ಪವಿತ್ರ ಅಣ್ಣಪ್ಪ ಹಳ್ಳಿಕೇರೆ, ಮಾಧವ್ ಮತ್ತು ಸಂದೀಪ್ ತರುವೆ ಪರೀಕ್ಷಿತ್ ಜಾವಳಿ ಗಜೇಂದ್ರ ಕೊಟ್ಟಿಗೆಹಾರ ವಿಮುಕ್ತಿ ಸ್ವಸಹಾಯ ಸಂಘದ ಸದಸ್ಯರು ಮತ್ತು ಇತರರು ಇದ್ದರು.