ಸರ್ಕಾರದ ವಿರುದ್ಧ ಸಿಡಿದೆದ್ದ ಗ್ರಾಮ ಲೆಕ್ಕಾಧಿಕಾರಿಗಳು
1 min read
ಸರ್ಕಾರದ ವಿರುದ್ಧ ಸಿಡಿದೆದ್ದ ಗ್ರಾಮ ಲೆಕ್ಕಾಧಿಕಾರಿಗಳು
ಮೂಡಿಗೆರೆ ತಾಲೂಕು ತಾಲೂಕು ಕಚೇರಿ ಎದುರು ಗ್ರಾಮ ಲೆಕ್ಕಾಧಿಕಾರಿಗಳು ಮುಷ್ಕರ ಕೂತಿರುವುದು ಸರ್ಕಾರದ ವೈಫಲ್ಯಕ್ಕೆ ಕೈಗನ್ನಡಿಯಾಗಿತ್ತು.
ನೌಕರರ ಬೇಡಿಕೆ ಏನಂದರೆ ಕನಿಷ್ಠಪಕ್ಷ ಮೂಲಭೂತ ಸೌಕರ್ಯವನ್ನು ನೀಡಿ ಮಹಿಳಾ ಸಿಬ್ಬಂದಿಗಳಿಗೆ ಗ್ರಾಮಗಳಿಗೆ ತೆರಳಿದಾಗ ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಇದರ ಬಗ್ಗೆ ಮುಷ್ಕರ ಮಾಡಿದ್ದೆವು ಏನು ಪ್ರಯೋಜನವಾಗಿಲ್ಲ ಈಗಲಾದರೂ ನಮ್ಮ ಬಗ್ಗೆ ಕಾಳಜಿ ತೋರಲಿ ಎಂದು ನಮ್ಮ ಒತ್ತಾಯ.
ಮಹಿಳಾ ಸಿಬ್ಬಂದಿಗಳು ಮಾತನಾಡುತ್ತಾ ಸಮಯದ ಮಿತಿ ಇಲ್ಲದೆ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ ನಮಗೂ ಸಂಸಾರವಿದೆ. ನಮಗೇನಾದರೂ ತೊಂದರೆಯಾದಲ್ಲಿ ಯಾರು ಹೊಣೆಗಾರರು. ಎಲ್ಲಾ ಕೆಲಸ ಕಾರ್ಯಗಳು ನಮ್ಮ ಮೇಲೆ ಹೇರಿ ಒತ್ತಡ ನೀಡುತ್ತಿದ್ದಾರೆ. ದಯಮಾಡಿ ಇವರ ಬಗ್ಗೆ ಗಮನಹರಿಸಬೇಕೆಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡರು.