ಫೆಬ್ರವರಿ 13 ಅಂದರೆ ಇಂದು ವಿಶ್ವ ರೇಡಿಯೋ ದಿನ…
1 min read![](https://avintv.com/wp-content/uploads/2025/02/IMG-20250213-WA0048-1024x1024.jpg)
ಫೆಬ್ರವರಿ 13 ಅಂದರೆ ಇಂದು ವಿಶ್ವ ರೇಡಿಯೋ ದಿನ.
ಆಕಾಶದ ಅರಗಿಣಿಯಂತಿರುವ ಕರ್ನಾಟಕದ ಈ ಆಕಾಶವಾಣಿಗೆ 90 ವರ್ಷ ತುಂಬುತ್ತಿದೆ. ಇನ್ನು ಭಾರತದ ಆಕಾಶವಾಣಿಯು ಇನ್ನೆರಡು ವರ್ಷದಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತದೆ.
ಜಗತ್ತಿನೆಲ್ಲಡೆ ವ್ಯಾಪಿಸಿರುವ ಎಲ್ಲ ಭೂ ಪ್ರದೇಶಗಳತ್ತ ತನ್ನ ಬಾನುಲಿಯನ್ನು ಬಿತ್ತುತ್ತಿರುವ ಏಕೈಕ ಮಾಧ್ಯಮ ರೇಡಿಯೋ ಮಾಧ್ಯಮ.
ದಣಿದಾಗ ದುಡಿದಾಗ ಆಯಾಸಗೊಂಡಾಗ, ಪ್ರೇಯಸಿ ಕೈ ಕೊಟ್ಟಾಗ, ಪ್ರಿಯಕರ ದೂರವಾಗಿ ಬದುಕು ಭಾರವಾದಾಗ ನಮ್ಮೊಳಗೊಂದು ಚೈತನ್ಯವನ್ನು ಮೂಡಿಸಿ, ಉತ್ಸಾಹವನ್ನು ತುಂಬಿ, ಮೈ ಪುಲಕಗೊಳಿಸಿ ಹುರಿದುಂಬಿಸಿ ಎದ್ದು ಕೈ ಹಿಡಿದು ನಡೆಸುವ ಶಕ್ತಿ ಇರುವುದು ಈ ಆಕಾಶವಾಣಿಗೆ.
ಕಾಳಿಂಗರಾಯರಂತಹ ಕಂಠ ಸಿರಿಯಲ್ಲಿ ತೇಲಿ ಬರುವ *ಅಳುವ ಕಡಲೊಳು ತೇಲಿ ಬರುತ್ತಿದೆ ನಗೆಯ ಹಾಯಿ ದೋಣಿ* ಎಂಬ ಇಂತಹ ಒಂದು ಹಳೆಯ ಹಾಡು ಸಾಕು ನಮ್ಮ ಚೈತನ್ಯವನ್ನು ಜಾಗೃತಿಗೊಳಿಸಲು.
ಆಧುನಿಕ ಕಾಲದ ಇಂದಿನ ಡಿಜಿಟಲ್ ಯುಗದಲ್ಲೂ ತನ್ನೊಳಗಿರುವ ಸಾರ ಸತ್ವವನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿರುವ ಈ ರೇಡಿಯೋ ಮಾಧ್ಯಮವನ್ನು ತಲೆಮಾರುಗಳಿಂದ ತಲೆಮಾರಿಗೆ, ಜನಾಂಗದಿಂದ ಜನಾಂಗಕ್ಕೆ ಎಚ್ಚರ ತಪ್ಪದೇ ರಾಜಿಯಾಗದೆ ಹೊಸತನದೊಂದಿಗೆ ಈ ನೆಲದ ಸಿರಿಸಂಪದವನ್ನು ಕಟ್ಟಿ ಕೊಡಲಿ.
*ರೇಡಿಯೋ ದಿನದ ಶುಭಾಶಯಗಳು*.
••••••••••••••••••••••••••••••••••
D. M. Manjunathaswamy