ಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಅಜಿತ್ ರಂಜನ್ ಕಾಂಗ್ರೆಸ್ ತೆಕ್ಕೆಗೆ ?
1 min readಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಅಜಿತ್ ರಂಜನ್ ಕಾಂಗ್ರೆಸ್ ತೆಕ್ಕೆಗೆ ?
ಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಅಜಿತ್ ರಂಜನ್ ಕಾಂಗ್ರೆಸ್ ಗೆ ಜಾತ್ಯತೀತ ಜನತಾದಳದ ಜಿಲ್ಲಾ ಅಧ್ಯಕ್ಷ ಅಜಿತ್ ರಂಜನ್ ಕಾಂಗ್ರೆಸ್ ಗೆ
ಚಿಕ್ಕಮಗಳೂರು ಜಿಲ್ಲಾ ಜಾತ್ಯತೀತ ಜನತಾದಳ ಅಧ್ಯಕ್ಷ ಅಜಿತ್ ರಂಜನ್ ಕುಮಾರ್ ಬಹುತೇಕ ಕಾಂಗ್ರೆಸ್ ಸೇರುವುದು ಖಚಿತ.
ಮೂಡಿಗೆರೆ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಪತ್ನಿ ಗೀತಾರನ್ನು ಕೂರಿಸಲು ಕಾಂಗ್ರೆಸ್ ನವರ ಬೆಂಬಲ ಪಡೆದು ಐದು ತಿಂಗಳ ಹಿಂದೆ ತೀರ್ಮಾನವಾಗಿತ್ತು.
ಗೀತಾ ರಾಜೀನಾಮೆ ನೀಡಿ ಇಂದು ಪಟ್ಟಣ ಪಂಚಾಯತಿ ಸದಸ್ಯರ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸುವುದಕ್ಕಿಂತ ಎಲ್ಲರಿಗೂ ತಿಳಿದ ವಿಚಾರ.
ರಂಜನ್ ಬಿಜೆಪಿಯಲ್ಲಿ ಗುರ್ತಿಸಿಕೊಂಡು ನಂತರ ಜಾ,ದಳ ಸೇರ್ಪಡೆಯಾಗಿ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಸ್ಪರ್ಧಿಸಿ ನಂತರ ಜಿಲ್ಲಾ ಜಾ,ದಳದ ಜಿಲ್ಲಾ ಅಧ್ಯಕ್ಷರಾಗಿದ್ದು ಈಗ ಕಾಂಗ್ರೆಸ್ ನವರು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.
ಮೂಡಿಗೆರೆ ಕಾಂಗ್ರೆಸಿನಲ್ಲಿ ಶಾಸಕಿ ನಯನ ಮೋಟಮ್ಮ ಸುಪ್ರೀಂ.ಹೀಗಾಗಿ ನಯನ ತೀರ್ಮಾನ ಮಾಡಿದ್ದು ಬಹುತೇಕ ಖಚಿತವಾಗಿ ಕಾಂಗ್ರೆಸ್ ಸೇರುವುದು ಗ್ಯಾರಂಟಿ.
ಈ ಬಗ್ಗೆ ವಾಹಿನಿಯೊಂದಿಗೆ ಅಜಿತ್ ರಂಜನ್ ಕುಮಾರ್ ರವರನ್ನು ಮೊಬೈಲ್ ಮೂಲಕ ಸಂಪರ್ಕ ಮಾಡಿದಾಗ ಸದ್ಯದಲ್ಲಿ ಪತ್ರಿಕಾ ಗೋಷ್ಠಿ ಕರೆದು ತಿಳಿಸುವುದಾಗಿ ಹೇಳಿದ್ದಲ್ಲದೆ ಇಲ್ಲಿದ್ದು ಏನು ಮಾಡುವುದು ಎಂದು ಹೇಳಿದ್ದಾರೆ.
ಜಾ,ದಳದ ಪ್ರಮುಖ ವಿಕೆಟ್ ಪತನವಾಗುವುದು ಖಚಿತ. ಅಜಿತ್ ರಂಜನ್ ಕುಮಾರ್ ಕಾಂಗ್ರೆಸ್ ಸೇರುವುದು ಫಿಕ್ಸ್ ಆಗಿದೆ.