ಕಾಡುಕೋಣ ದಾಳಿ : ಕೃಷಿಕ ಸಾವು
1 min readಕಾಡುಕೋಣ ದಾಳಿ : ಕೃಷಿಕ ಸಾವು
ಕಾಡುಕೋಣ ದಾಳಿಯಿಂದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಕಾಡುಕೋಣ ದಾಳಿ ಮಾಡಿದ್ದು,ರಘುಪತಿ (73) ಸಾವನ್ನಪ್ಪಿರುವ ಕೃಷಿಕ.
ಕಳಸ ತಾಲೂಕಿನ ಹಳುವಳ್ಳಿ ಸಮೀಪದ ಲಲಿತಾದ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ,
ಫೋನ್ ರಿಸೀವ್ ಮಾಡದಿದ್ದಾಗ ತೋಟಕ್ಕೆ ಹುಡುಕಿಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಧ್ಯಾಹ್ನ ಮನೆಯಿಂದ ಕಾಫಿ ತೋಟಕ್ಕೆ ತೆರಳಿದ್ದರು.ತೋಟದ ಸುತ್ತ 6 ಅಡಿ ಬೇಲಿ ಮಾಡಿದ್ದರೂ ಅದನ್ನ ದಾಟಿ ಬಂದಿರುವ ಕಾಡುಕೋಣ
ಈ ಭಾಗದಲ್ಲಿ ನಿರಂತರ ಕಾಡುಕೋಣ ಹಾವಳಿಂದ ಬೆಳೆಗಾರರು, ಸ್ಥಳೀಯರು ಕಂಗಲಾಗಿದ್ದಾರೆ.
ಕೆಲವೊಮ್ಮೆ ರಸ್ತೆಗಳಲ್ಲಿಯೂ ಅಡ್ಡಲಾಗಿ ಕಾಡು ಕೋಣಗಳು ನಿಂತಿರುತ್ತವೆ.