ಕೊಪ್ಪದ ಕುಂಚೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಜಾನಪದ ಗಾಯನ ಸ್ಪರ್ಧೆ.
1 min read![](https://avintv.com/wp-content/uploads/2025/02/IMG-20250206-WA0346-1024x461.jpg)
ಕೊಪ್ಪದ ಕುಂಚೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಜಾನಪದ ಗಾಯನ ಸ್ಪರ್ಧೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಕುಂಚೂರಿನಲ್ಲಿ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ದಿ. ಕುಂಚುರು ಹರೀಶ್ ಸ್ಮರಣಾರ್ಥ ಜಿಲ್ಲಾ ಮಟ್ಟದ ಜಾನಪದ ಗೀತೆ ಸ್ಪರ್ಧೆ ಅದ್ದೂರಿಯಾಗಿ ನಡೆಯಿತು.
ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ ಕಲಾವಿದರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು.
ಈ ಒಂದು ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರೇಗೌಡ್ರು ಎಸ್ ಬಿ ಉದ್ಘಾಟಿಸಿದರು
ವೇದಿಕೆಯಲ್ಲಿ ಪ್ರದೀಪ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆಲಿ ಸದಸ್ಯರು, ರತ್ನಾಕರ, ಸುಧಾಕರ್, ನರೆಂದ್ರ ಶೆಟ್ಟಿ, ದುರ್ಗಾ ಚರಣ್, ರಾಜೇಶ್ ಶಿಸಿರೆ, ಜಯಂತಾ ಕುಂಚೂರೂ, ನಮನ, ರವಿ, ರುದ್ರಪ್ಪ ಗೌಡ,ನರ್ತನ, ಶಿವು ಕುಂಚರು , ಲೇಖನ್, ಅಭಿನವ್ ಗಿರಿ ಇದ್ದರು.
ಯುವಕ ಯುವತಿಯರಿಗೆ ಗುಂಪು ಸ್ಪರ್ಧೆ ಸಂಘಟಿಸಲಾಗಿತ್ತು. ಸ್ಪರ್ಧೆಯಲ್ಲಿ ಬಹುಮಾನ ಈ ಕೆಳಗಿನಂತೆ ನೀಡಲಾಯಿತು.ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 10000 ನಗದು, ದ್ವಿತೀಯ 6000 ಮತ್ತು ತೃತೀಯ 4000
ವಿಧ್ಯಾರ್ಥಿಗಳಿಗೆ ಪ್ರಥಮ 5000, ದ್ವಿತೀಯ 3000, ತೃತೀಯ 2000
ವಯಸ್ಕ ವಿಭಾಗದಲ್ಲಿ ಪ್ರಥಮ ಜನಮನದ ಜಾನಪದ ಕಲಾ ತಂಡ ಚಿಕ್ಕಮಗಳೂರು. ದ್ವಿತೀಯ ಮಿತ್ರ ಜಾನಪದ ಕಲಾ ಸಂಘ ಮೂಡಿಗೆರೆ ತೃತೀಯ ಚಂದಿಕೇಶ್ವರಿ ಭಜನಾ ಮಂಡಳಿ ನಾರ್ವೆ.
ವಿದ್ಯಾರ್ಥಿಗಳ ವಿಭಾಗದಲ್ಲಿ ಪ್ರಥಮ ನಚಿಕೇತ ವಿದ್ಯಾ ಮಂಡಳಿ ಕೊಪ್ಪ. ದ್ವಿತೀಯ ವೆಂಕಟೇಶ್ವರ ವಿದ್ಯಾ ಮಂಡಳಿ ಕೊಪ್ಪ.
ಸಮಾರೋಪ ಸಮಾರಂಭದಲ್ಲಿ ಉತ್ತಮ ವಾಗ್ಮಿ ವಕೀಲರು ಆದ ಶ್ರೀ ಸುಧೀರ್ ಕುಮಾರ್ ಮುರುಳ್ಳಿ ಉಪನ್ಯಾಸ ನೀಡಿದರು.