ರೈತ ಸಂಘದ ಮುಖಂಡ ಮಂಜುನಾಥಗೌಡ ರೈತರ ಮೇಲೆ ದೌರ್ಜನ್ಯ ಎಸಗುತ್ತಿರುವುದರ ಬಗ್ಗೆ
1 min readರೈತ ಸಂಘದ ಮುಖಂಡ ಮಂಜುನಾಥಗೌಡ ರೈತರ ಮೇಲೆ ದೌರ್ಜನ್ಯ ಎಸಗುತ್ತಿರುವುದರ ಬಗ್ಗೆ
ಮೂಡಿಗೆರೆ ತಾಲ್ಲೂಕಿನ ಕಸಬಾ ಹೋಬಳಿ ಕಡಿದಾಳು ಗ್ರಾಮದ ಸ.ನಂ-76ರಲ್ಲಿ ನಾವುಗಳು ಹೊಂದಿರುವ ಕಾಫಿ ತೋಟಕ್ಕೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ನಮ್ಮ ತೋಟದ ಬಾಜುದಾರರಾದ ಎಂ.ಮಂಜುನಾಥಗೌಡ ಇವರು ಅತಿಕ್ರಮವಾಗಿ ಪ್ರವೇಶ ಮಾಡಿ ಸುಮಾರು 60-65 ವರ್ಷಗಳ ಹಳೆಯದಾದ 300ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಕಾಫಿ ತೋಟದ ಬೇಲಿಯನ್ನು ಸಹ ಕಿತ್ತು ಹಾಕಿರುತ್ತಾರೆ. ಅಂದಾಜು ರೂ. 5 ಲಕ್ಷ ನಷ್ಟವನ್ನುಂಟುಮಾಡಿರುತ್ತಾರೆ.
ಈ ಜಾಗವು ನಮ್ಮ ಪೂರ್ವಿಕರ ಕಾಲದಿಂದಲೂ ನಮ್ಮದಾಗಿದ್ದು, ನಮ್ಮ ಹೆಸರಿನಲ್ಲಿ ಖಾತೆಯಿದ್ದು, ನಮ್ಮ ಅನುಭವದಲ್ಲಿ ಇರುತ್ತದೆ. 76 ವರ್ಷಗಳ ಹಿಂದೆಯೇ ಈ ಜಾಗದ ಪೋಡು ಕೂಡ ಆಗಿ ಗಡಿಗುರುತು ಮಾಡಿರುತ್ತಾರೆ. ಆದರೆ ಮಂಜುನಾಥ ಗೌಡ ಅವರು ರೈತ ಸಂಘದ ಹೆಸರಿನಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ನಮ್ಮ ಜಾಗದಲ್ಲಿ ಇದ್ದ ಗಿಡಗಳನ್ನು ಕಡಿದು ಹಾಕಿದ್ದಾರೆ.
ಇವರು ರೈತ ಸಂಘದ ಮುಖಂಡ ಎಂದು ಹೇಳಿಕೊಂಡು ನಿರಂತರವಾಗಿ ಸ್ಥಳೀಯ ರೈತರ ಮೇಲೆ ದಬ್ಬಾಳಿಕೆ ಮಾಡುವುದು, ಅಧಿಕಾರಿಗಳನ್ನು ಹೆದರಿಸುವುದು, ಬ್ಲಾಕ್ ಮೇಲೆ ಮಾಡುವುದು, ಧರಣಿ ಕೂತು ಅಧಿಕಾರಿಗಳನ್ನು ಹೆದರಿಸುವುದು ಮಾಡುತ್ತಿದ್ದಾರೆ. ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂದು ಹೇಳಿಕೊಳ್ಳುವ ಇವರು ರೈತರ ಪರವಾಗಿ ಯಾವುದೇ ಹೋರಾಟ ಮಾಡದೇ ತನ್ನ ವೈಯುಕ್ತಿಕ ಹಿತಾಸಕ್ತಿಗಾಗಿಯಷ್ಟೇ ರೈತ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ನಮ್ಮ ಜಮೀನಿಗೆ ಸಂಬಂಧಿಸಿದಂತೆ 76 ವರ್ಷಗಳ ಹಿಂದೆ ಆಗಿದ್ದ ಪೋಡಿಯನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರದ್ದು ಮಾಡಿಸಿದ್ದು, ಇದರ ವಿರುದ್ಧ ನಾವು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಹಾಕಿರುತ್ತೇವೆ. ಈ ಜಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿರುವಾಗ ಮಂಜುನಾಥಗೌಡ ತನ್ನ ಬಾಡಿಗೆ ಗೂಂಡಗಳನ್ನು ಕರೆತಂದು ನಮ್ಮ ತೋಟದ ಗಿಡಗಳನ್ನು ಕಡಿದು ಹಾಕಿದ್ದಾರೆ.
ಬಿಳ್ಳೂರು ಗ್ರಾಮದಲ್ಲಿ ನಾವು ನಮ್ಮ ಜಾಗದಲ್ಲಿ ಕಾನೂನುಬದ್ಧವಾಗಿ ರಸ್ತೆ ಮಾರ್ಜಿನ್ ಬಿಟ್ಟು ಕಟ್ಟಡ ಕಟ್ಟುತ್ತಿದ್ದು, ಇದಕ್ಕೆ ವೈಯುಕ್ತಿಕ ದ್ವೇಷದಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಈ ಕಟ್ಟಡದ ಬಗ್ಗೆ ಅನಾವಶ್ಯಕವಾಗಿ ದೂರು ನೀಡಿ ಬೆದರಿಸುತ್ತಿದ್ದಾರೆ.
ಇವರ ವಿರುದ್ಧ ಈಗಾಗಲೇ ಎಸ್ಪಿ ಯವರಿಗೂ ನಾವು ದೂರು ನೀಡಿರುತ್ತೇವೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿಬೇಕು ಎಂದು ಕೇಳಿಕೊಳ್ಳತ್ತೇವೆ. ನಮಗೆ ಆಗಿರುವ ಆರ್ಥಿಕ ನಷ್ಟವನ್ನು ಸದರಿ ವ್ಯಕ್ತಿಯಿಂದ ಭರಿಸಿಕೊಡಿಸಬೇಕು ಎಂದು ಮತ್ತು ತಮ್ಮ ಸ್ವಾರ್ಥಕ್ಕಾಗಿ ರೈತಸಂಘದ ಹೆಸರು ಬಳಸಿಕೊಳ್ಳುತ್ತಿರುವ ಮಂಜುನಾಥಗೌಡನಿಗೆ ಯಾವುದೇ ರೈತ ಮುಖಂಡರು ಬೆಂಬಲ ನೀಡಬಾರದು ಎಂದು ಪಿ.ಎ.ವಿಷ್ಣುಗೌಡ.ಬಿಳ್ಳೂರು ಕೇಳಿಕೊಂಡಿರುತ್ತಾರೆ.