ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ.ಕಸಬಾ ಹೋಬಳಿ ಘಟಕದ ವತಿಯಿಂದ ಕನ್ನಡ ಕಲರವ.
1 min readಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ.ಕಸಬಾ ಹೋಬಳಿ ಘಟಕದ ವತಿಯಿಂದ ಕನ್ನಡ ಕಲರವ.
ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಮತ್ತು
ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ.ಸಂಯುಕ್ತಾಶ್ರಯದಲ್ಲಿ ಲೋಕವಳ್ಳಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಕಲರವ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಸಾಪ ತಾಲೂಕು ಅಧ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡರು ನೆರವೇರಿಸಿದರು . ಸರ್ಕಾರವು ಸರ್ಕಾರಿ ಶಾಲೆಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಿ ಎಲ್ಲಾ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕು.ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ಮತ್ತೆ ಮುನ್ನಡೆಸಲು ಯೋಜನೆ ರೂಪಿಸಬೇಕು.ಸರ್ಕಾರಿ ಶಾಲೆಯ ಇಂದಿನ ಶಿಕ್ಷಣವೂ ಖಾಸಗಿ ಶಾಲೆಗಳಿಗಿಂತಲೂ ಗುಣಮಟ್ಟ ಹೊಂದಿದೆ ಮತ್ತು ಕನ್ನಡ ಭಾಷಾ ಶಿಕ್ಷಣವು ಬದುಕನ್ನು ರೂಪಿಸಬಲ್ಲದು ಎಂದು ಅಭಿಪ್ರಾಯ ಪಟ್ಟರು. ನಂತರ ಮಾತನಾಡಿದ ಲೋಕವಳ್ಳಿ ಗ್ರಾಮದ ಮುಖಂಡರಾದ ಲೋಕವಳ್ಳಿ ರಮೇಶ್ ರವರು ಸರ್ಕಾರಿ ಶಾಲೆಗಳಲ್ಲೂ ಉತ್ತಮ ಶಿಕ್ಷಣ ದೊರೆಯುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು.
ಮೂಡಿಗೆರೆಯಲ್ಲಿ ಉತ್ತಮ ಹಾಡುಗಾರರಾಗಿ ಗುರ್ತಿಸಿಕೊಂಡಿರುವ ಗಾಯಕ ಬಕ್ಕಿ ಮಂಜುರವರು ಹಾಡಿನ ಮೂಲಕ ಮಕ್ಕಳನ್ನು ರಂಜಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ರವಿ ಕುನ್ನಳ್ಳಿರವರು ಎಲ್ಲ ಭಾಷೆಯನ್ನು ಕಲಿಯಿರಿ ಆದರೆ ಕನ್ನಡ ಭಾಷೆಗೆ ಆದ್ಯತೆ ನೀಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ಕಸಾಪವು ಅತಿಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕನ್ನಡದ ಬಗ್ಗೆ ಹೆಚ್ಚಿನ ಜ್ಞಾನ ಸಂಗ್ರಹ, ಪಠ್ಯೇತರ ಚಟುವಟಿಕೆಯನ್ನು ಏರ್ಪಡಿಸಲಾಗಿದೆ ಎಂದರು.ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಅಧ್ಯಕ್ಷರಾದ ಎಂ ಎಸ್ ನಾಗರಾಜ್ ಮಕ್ಕಳಿಗೆ ಒಗಟು ಬಿಡಿಸುವುದು/ ಗಾದೆ ಹೇಳುವುದು/ ರಸಪ್ರಶ್ನೆ/ಕನ್ನಡ ಶುದ್ಧ ಕೈ ಬರಹ/ವಿವಿಧ ಆಟೋಟಗಳನ್ನು ಆಡಿಸಿ ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಲೋಕವಳ್ಳಿ ರಮೇಶ್, ಬಕ್ಕಿ ಮಂಜು, ನವೀನ್ ಆನೆದಿಬ್ಬ, ವಿ.ಪಿ. ನಾರಾಯಣ್, ಜಗದೀಶ್, ಮುಖ್ಯೋಪಾಧ್ಯಾಯರಾದ ನವೀನ್ ಬಿ. ಆರ್, ಶಿಕ್ಷಕರಾದ ರೇಣುಕಾ, ಮಂಜುಳಾ, ಗೀತಾ, ಇವರು ಉಪಸ್ಥಿತರಿದ್ದರು.