ದೊಡ್ಮನೆಗೆ ಎಂಟ್ರಿ ಕೊಟ್ಟ ಹನುಮಂತ,
1 min readಗೆದ್ದ 50 ಲಕ್ಷವೂ ಹನುಮಂತು ಕೈ ಸೇರಲ್ಲ.. ಸರ್ಕಾರಕ್ಕೆ ಕಟ್ಟಬೇಕಿರುವ ಟ್ಯಾಕ್ಸ್ ಎಷ್ಟು?
ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ‘ಬಿಗ್ ಬಾಸ್’ ರಿಯಾಲಿಟಿ ಶೋನ 11ನೇ ಆವೃತ್ತಿ ಅದ್ದೂರಿಯಾಗಿ ಅಂತ್ಯಗೊಂಡಿದ್ದು, ಹಳ್ಳಿ ಹೈದ ಹನುಮಂತ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ಹನುಮಂತ, ಸುಮಾರು 5 ಕೋಟಿ (5,23,89,318) ವೋಟ್ಸ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಹನುಮಂತು ಗೆದ್ದ ಬಳಿಕ ವೋಟ್ ಹಾಕಿದ ವೀಕ್ಷಕರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.
ಕಪ್ ಗೆದ್ದು ಇತಿಹಾಸ ಬರೆದ ಹನುಮಂತು ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಕೂಡ ಸಿಕ್ಕಿದೆ. ದೊಡ್ಮನೆಯ ‘ಬಿಗ್ ಬಾಸ್’ ಆಗಿ ಹೊರಹೊಮ್ಮಿದ ಹನುಮಂತುಗೆ 50 ಲಕ್ಷ ರೂಪಾಯಿಯಲ್ಲಿ ಕೈ ಸೇರುವ ಹಣವೆಷ್ಟು? ಎಂಬ ಮಾಹಿತಿ ಇಲ್ಲಿದೆ.
50 ಲಕ್ಷ ರೂಪಾಯಿಯಲ್ಲಿ ಸರ್ಕಾರಕ್ಕೆ ಶೇ.30 ರಷ್ಟು ಮೊತ್ತ ತೆರಿಗೆ ರೂಪದಲ್ಲಿ ಕಡಿತವಾಗಲಿದೆ. ಹನುಮಂತು ಕೈಗೆ 50 ಲಕ್ಷ ರೂಪಾಯಿಯಲ್ಲಿ 35 ಲಕ್ಷ ರೂಪಾಯಿ ಮಾತ್ರ ಸಿಗಲಿದೆ. ಮೊದಲ
ರನ್ನರ್ಅಪ್ ಆಗಿರುವ ತ್ರಿವಿಕ್ರಮ್ ಅವರಿಗೆ ಒಟ್ಟು 15 ಲಕ್ಷ ರೂ ಸಿಕ್ಕಿದ್ದು, ಇದರಲ್ಲೂ ತೆರಿಗೆ ಕಟ್ ಆಗಿ ಅವರಿಗೆ 10,50,000 ಮಾತ್ರ ಸಿಗಲಿದೆ. ಎರಡನೇ ರನ್ನರ್ಅಪ್ ರಜತ್ ಅವರಿಗೆ ಸಿಕ್ಕಿರುವ 10 ಲಕ್ಷ ರೂಪಾಯಿಯಲ್ಲಿ 7 ಲಕ್ಷ ಮಾತ್ರ ಅವರ ಕೈ ಸೇರಲಿದೆ.