ಇನ್ನೊಂದು ವಾರದಲ್ಲಿ ನಕ್ಸಲ್ ಹೋರಾಟಗಾರ ರವೀಂದ್ರ ಶರಣಾಗತಿ
1 min readಇನ್ನೊಂದು ವಾರದಲ್ಲಿ ನಕ್ಸಲ್ ಹೋರಾಟಗಾರ ರವೀಂದ್ರ ಶರಣಾಗತಿ
ಚಿಕ್ಕಮಗಳೂರು : ಕಾಡಿನಲ್ಲಿ ಉಳಿದಿರುವ ಇನ್ನೋರ್ವ ನಕ್ಸಲ್ ಹೋರಾಟಗಾರ ರವೀಂದ್ರ ಸದ್ಯದಲ್ಲಿಯೇ ಶರಣಾಗುವ ಸಾಧ್ಯತೆಗಳಿವೆ.
ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನು ರವೀಂದ್ರ ಸಂಪರ್ಕ ಮಾಡಿದ್ದು,ಇನ್ನೊಂದು ವಾರದೊಳಗೆ ಶರಣಾಗತಿ ಆಗಲಿದ್ದಾನೆ ಎನ್ನಲಾಗಿದೆ.
ಜನವರಿ 8 ರಂದು 6 ಜನ ನಕ್ಸಲರು ಶರಣಾಗತಿಯಾಗಿದ್ದರು.ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ರವೀಂದ್ರ ಕಾಡಿನಲ್ಲಿ ಉಳಿದುಕೊಳ್ಳುವ ಮೂಲಕ ಊಹಾಪೋಹಗಳಿಗೆ ದಾರಿ ಮಾಡಿದ್ದ.
ಶರಣಾದ ನಕ್ಸಲರು ಆಯುಧಗಳನ್ನು ರವೀಂದ್ರನ ಕೈಯಲ್ಲಿ ಕೊಟ್ಟು ಬಂದಿದ್ದರು ಎನ್ನುವ ವದಂತಿಯೂ ಇದೆ.
ರವೀಂದ್ರ ಶರಣಾಗತಿಯಾದರೆ, ಮಲೆನಾಡ ಜಿಲ್ಲೆಗಳಲ್ಲಿ ನಕ್ಸಲ್ ಹೋರಾಟ ಬಹುತೇಕ ಅಂತ್ಯ ಕಂಡಂತೆ ಎಂದು ವಿಶ್ಲೇಷಿಸಲಾಗುತ್ತಿದೆ.