ಭಾರತವನ್ನು ಬಲಿಷ್ಠ ಭಾರತವನ್ನಾಗಿ ಮಾಡಬೇಕಾಗಿದೆ: ಪಿ.ಪರಮೇಶ್*
1 min readಭಾರತವನ್ನು ಬಲಿಷ್ಠ ಭಾರತವನ್ನಾಗಿ ಮಾಡಬೇಕಾಗಿದೆ: ಪಿ.ಪರಮೇಶ್*
ಚಿಕ್ಕಮಗಳೂರು ೨೬: *ಸಂವಿಧಾನದ ಮಾರ್ಗದ ಮೂಲಕವೇ ಬಹುಜನರು ತಮ್ಮ ಬಿಡುಗಡೆಯನ್ನು ಕಂಡುಕೊಂಡು, ಬಹುತ್ವ ಭಾರತವನ್ನು ಬಲಿಷ್ಠ ಭಾರತವನ್ನಾಗಿ ಮಾಡಬೇಕಾಗಿದೆ: ಪಿ.ಪರಮೇಶ್*
ಇಂದು 76ನೇ ಗಣತಂತ್ರ ದಿವಸ,
ಈ ದೇಶದ ಬಹುಸಂಖ್ಯಾತರಾಗಿರುವ 85% ಬಹುಜನರು ಕಳೆದ 75 ವರ್ಷಗಳಲ್ಲಿ ಏನಾದರೂ ಐಎಎಸ್ ಐಪಿಎಸ್ ಹುದ್ದೆಯಿಂದ ಹಿಡಿದು ರಾಷ್ಟ್ರಪತಿ ಹುದ್ದೆಯ ಗದ್ದಿಗೆಯ ಮೇಲೆ ಕುಳಿತಿದ್ದಾರೆ ಎಂದರೆ , ಅದಕ್ಕೆ ಮೂಲ ಕಾರಣ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಆಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷ ಹಾಗೂ ವಕೀಲರಾದ ಪಿ.ಪರಮೇಶ್ ಅಭಿಪ್ರಾಯ ಪಟ್ಟರು.
ಗೌತಮ ಬುದ್ಧ ಕೋಪರೇಟಿವ್ ಸಹಕಾರ ಸಂಘ ಮತ್ತು ಪರಿಶಿಷ್ಟ ಜಾತಿ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಇಂದು ನಗರದ ತೆಗೂರು ಸಮೀಪ ಇರುವ ಬುದ್ಧ ವಿಹಾರದಲ್ಲಿ ಪಾಲ್ಗೊಂಡು, ನಂತರ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಅಜಾದ್ ಪಾರ್ಕ್ ವೃತದಲ್ಲಿ 76ನೇ ಗಣರಾಜ್ಯೋತ್ಸವದ ಪ್ರಯುಕ್ತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಸಂವಿಧಾನದ ಕೈಪಿಡಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸೂಚಿಸಿ ಸಿಹಿ ವಿತರಣೆ ಮಾಡಿದರು.
ಕೇವಲ ಬೀದಿ ಹೋರಾಟಗಳಿಂದ ಮಾತ್ರ ಬಹುಜನರ ಬಿಡುಗಡೆ ಸಾಧ್ಯವಿಲ್ಲ, ಬಹುಜನರು ನಿಜವಾಗಿ ಬಿಡುಗಡೆ ಆಗಬೇಕಾದರೆ ಈ ದೇಶದ ಕಾನೂನನ್ನು ರೂಪಿಸುವಂತಹ ಲೋಕಸಭೆ ಮತ್ತು ವಿಧಾನಸಭೆಗಳ ಒಳಗೆ ಜನಪ್ರತಿನಿಧಿಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋಗಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಮೀಸಲಾತಿಯ ಪರಿಣಾಮ 75 ವರ್ಷಗಳಲ್ಲಿ ಒಂದಷ್ಟು ಸುಧಾರಣೆ ಆಗಿದೆ. ಆದರೆ, ಸಾಧಿಸಬೇಕಾದ ಗುರಿ ಇನ್ನೂ ತಲುಪಿಲ್ಲ, ಸಂವಿಧಾನ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ, ಇಲ್ಲಿನ ನೆಲ ಜಲ ಪ್ರಾಣಿ ಪಕ್ಷಿ ಗಿಡ ಮರಗಳ ಸಂರಕ್ಷಣೆಗೂ ಸಂವಿಧಾನ ಕಾರಣವಾಗಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ವಿ ದ ಪೀಪಲ್ ಆಫ್ ಇಂಡಿಯಾ ಎಂಬ ಮುಖ್ಯ ಅಂಶವನ್ನು ದಾಖಲಿಸಿದ್ದಾರೆ, ಈ ಮಹತ್ವಪೂರ್ಣ ಸಾಲಿನ ಅರ್ಥ ವ್ಯಾಪ್ತಿ ವಿಶಾಲವಾಗಿದೆ, ಆಸ್ತಿಕರು ಮತ್ತು ನಾಸ್ತಿಕರು ಈ ಎರಡು ಜನರಿಗೂ ಸಂವಿಧಾನದಲ್ಲಿ ಸಮಾನ ಹಕ್ಕು ಮತ್ತು ಅವಕಾಶವಿದೆ. ಆದರೆ ಬದಲಾದ ದಿನಮಾನಗಳಲ್ಲಿ ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನವನ್ನು ಬದಲಾವಣೆ ಮಾಡುವಂತಹ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ಈ ದೇಶದಲ್ಲಿರುವ 85% ಬಹು ಜನರು ಅರ್ಥ ಮಾಡಿಕೊಂಡು ಜಾಗೃತಿಯಾಗಬೇಕಾಗಿದೆ ಎಂದು ವಕೀಲರಾದ ಪಿ.ಪರಮೇಶ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಮುಖಂಡರಾದ ವಸಂತ್ ಕುಮಾರ್, ವಕೀಲರಾದ ದೊಡ್ಡಯ್ಯ ಮಾತನಾಡಿದರು.
ಸಮಾರಂಭದಲ್ಲಿ ಬಹುಜನ ಸಮಾಜ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಪಿ. ವೇಲಾಯುಧನ್. ಗೌತಮ ಬುದ್ಧ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ಎಂ. ಆರ್.ಗಂಗಾಧರ್. ಪರಿಶಿಷ್ಟ ಜಾತಿ ಕ್ಷಮಾಭಿವೃದ್ಧಿ ಸಂಘದ ಅಧ್ಯಕ್ಷ ಜವರಯ್ಯ ಮಾಗಡಿ , ಪದಾಧಿಕಾರಿಗಳಾದ ಹರಿಯಯ್ಯ. ನಗರಸಭೆ ಮಾಜಿ ಅಧ್ಯಕ್ಷ ಶಾಂತಕುಮಾರ್. ದಲಿತ ಮುಖಂಡರಾದ ಜಿ. ಬಸವರಾಜ್. ಮರ್ಲೆ ಅಣ್ಣಯ್ಯ .ಪತ್ರಕರ್ತ ಎನ್ ರಾಜು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಶ್ ಕ್ಯಾತನೀಡು. ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಎಚ್ಎಮ್ ರೇಣುಕಾರಾಧ್ಯ. ರಘು,ವೀರಭದ್ರಯ್ಯ, ಇಂದ್ರಮ್ಮ ಮತ್ತು ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
••••••••••••••••••••••••••••••