ಭಾರತದ ಕಾಲ್ನಡಿಗೆ ಪರಂಪರೆಗೆ ತನ್ನದೇ ಆದ ಚಾರಿತ್ರಿಕ ಇತಿಹಾಸವಿದೆ*.
1 min readಚಿಕ್ಕಮಗಳೂರು೨೬: *ಭಾರತದ ಕಾಲ್ನಡಿಗೆ ಪರಂಪರೆಗೆ ತನ್ನದೇ ಆದ ಚಾರಿತ್ರಿಕ ಇತಿಹಾಸವಿದೆ*.
ಇಂದಿನಿಂದ ಐದು ದಿನಗಳ ಕಾಲ ಕರ್ನಾಟಕ ರಾಜ್ಯದ ಎರಡು ಕಡೆಯಿಂದ ಏಕಕಾಲಕ್ಕೆ ಆರಂಭವಾಗಲಿದೆ ಜನಜಾಗೃತಿಗಾಗಿ ಐತಿಹಾಸಿಕ ಪಾದಯಾತ್ರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಮತ್ತು ವಿವಿಧ ಸಂಘಟನೆಯ ಸಹಯೋಗದಲ್ಲಿ ರಾಜ್ಯದ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಿಂದ, ವಿಚಾರವಾದಿ, ಗಾಂಧಿವಾದಿ, ವೈಚಾರಿಕ ಚಿಂತನೆಯ ಹರಿಕಾರ ಪದ್ಮಭೂಷಣ ಡಾ. ಹೆಚ್ ನರಸಿಂಹಯ್ಯನವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರ ಜನ್ಮಸ್ಥಳ ಗೌರಿಬಿದನೂರು ತಾಲೂಕು, ಹೊಸೂರಿನವರೆಗೆ *ನಮ್ಮ ನಡಿಗೆ ವಿಜ್ಞಾನದ ಕಡೆಗೆ* ಎಂಬ ಘೋಷವಾಕ್ಯದಡಿ ವೈಚಾರಿಕವಾದ ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾಲ್ನಡಿಗೆ ಜಾಥ ಬೆಂಗಳೂರಿನಿಂದ ಹೊಸೂರಿನವರಿಗೆ ಸುಮಾರು 100 ಕಿಲೋಮೀಟರ್ ದೂರ ಪಯಣಿಸಲಿದ್ದು, ಜಾಥದ ಉದ್ದಕ್ಕೂ ಕೆಲವು ನಿಗದಿತ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮ, ಪುಸ್ತಕ ಮಾರಾಟ, ಬೀದಿನಾಟಕ ಪ್ರದರ್ಶನ, ಪವಾಡ ಬಯಲು ಕಾರ್ಯಕ್ರಮ, ವೈಚಾರಿಕ ಮತ್ತು ವಿಜ್ಞಾನ ಗೀತೆಗಳ ಗಾಯನ, ವಿವಿಧ ರೀತಿಯ ವಿಜ್ಞಾನ ಘೋಷಣೆಗಳೊಂದಿಗೆ ಜಾಗೃತಿ ಮೂಡಿಸುವ ಮೂಲಕ, ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಜನಸಾಮಾನ್ಯರಡೆಗೆ ವಿಜ್ಞಾನದ ಮಹತ್ವವನ್ನು, ವೈಚಾರಿಕತೆಯ ಸಾರವನ್ನು ಸಾದರಪಡಿಸುತ್ತಾ ಈ ಜಾಥವು ಬೆಂಗಳೂರಿನಿಂದ ಹೊಸೂರಿನವರಿಗೆ
ಪಯಣಿಸುತ್ತದೆ.
ಜಾಥದ ನೇತೃತ್ವವನ್ನು ಹಿರಿಯ ರಾಜಕಾರಣಿ ಮತ್ತು ಸಾಹಿತಿ ಡಾ.ಹೆಚ್. ಹನುಮಂತಯ್ಯ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಹಾಗೂ ಕೆ ಜೆ ವಿ ಎಸ್ ರಾಜ್ಯಾಧ್ಯಕ್ಷರು ಆದ ಡಾ. ಸಿ. ಆರ್. ಚಂದ್ರಶೇಖರ್ , ಜ್ಞಾನಭಿಕ್ಷಾ ಪಾದಯಾತ್ರಿ ಹೆಚ್. ಕೆ.ವಿವೇಕಾನಂದ ರಾಜ್ಯ ಕಾರ್ಯದರ್ಶಿ ಈ ಬಸವರಾಜ್. ಉಪಾಧ್ಯಕ್ಷರಾದ ಡಾ. ರಾಜ ನಾಯಕ್ , ಖಜಾಂಚಿ ಮಹದೇವಪ್ಪ ಹಾಗೂ ಇತರೆ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊಸುರಿನವರಿಗೆ ಈ ಕಾಲ್ನಡಿಗೆ ಜಾಥ ಹೊಸ ದಾಖಲೆಯನ್ನು ಬರೆಯಲು ಹೊರಟಿದೆ, ಹೊಸೂರಿನಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪಾಲ್ಗೊಳ್ಳುತ್ತಾರೆ.
ಮತ್ತು ಸಾಣೇಹಳ್ಳಿ ಮಠದ ಪೂಜ್ಯರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮತ್ತು ಪಾಂಡುಮಟ್ಟಿ ವಿರಕ್ತ ಮಠದ ಡಾ. ಶ್ರೀ ಗುರುಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ , ವಿವಿಧ ಪ್ರಗತಿಪರ ಸಂಘಟನೆಗಳ ವೈಚಾರಿಕ ಚಿಂತಕರು, ಲೇಖಕರು ಸಾಹಿತಿಗಳು ಹೋರಾಟಗಾರರನ್ನು ಒಳಗೊಂಡಂತೆ ಸಾಂಸ್ಕೃತಿಕ ಕ್ಷೇತ್ರ ಸಾಣೆಹಳ್ಳಿಯಿಂದ ಐತಿಹಾಸಿಕ ಸ್ಥಳ ಸಂತೆಬೆನ್ನೂರಿನವರೆಗೆ , ಸಾವಿರಾರು ಸಂಖ್ಯೆಯಲ್ಲಿ *ನಮ್ಮ ನಡಿಗೆ ಸರ್ವೋದಯ ಕಡೆಗೆ* ಎಂಬ ಘೋಷವಾಕ್ಯದಡಿ ಸುಮಾರು 75 ಕಿ.ಮೀ ದೂರ ಪರಿಸರ, ಶಿಕ್ಷಣ, ಆರೋಗ್ಯ, ಧರ್ಮ, ರಾಜಕಾರಣ ಈ ಐದು ಅಂಶಗಳನ್ನು ಒಳಗೊಂಡಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಈ ನಾಡಿನ ಮಹಾನೀಯರಾದ ಬಸವಣ್ಣ, ಗೌತಮ ಬುದ್ಧ, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರಕವಿ ಕುವೆಂಪು ಅವರನ್ನು ಒಳಗೊಂಡಂತೆ ಸಿರಿಗೆರೆ ಮಠದ ಹಿರಿಯ ಶ್ರೀಗಳ ಭಾವಚಿತ್ರವು ಸೇರಿದಂತೆ ಸ್ತಬ್ಧ ಚಿತ್ರದೊಂದಿಗೆ ಸಾಣೆಹಳ್ಳಿಯಿಂದ ಸಂತೆಬೆನ್ನೂರಿನವರಿಗೆ ಪಾದಯಾತ್ರೆ ಸಾಗಲಿದೆ.
ಪಾದಯಾತ್ರೆ ಯುದ್ಧಕ್ಕೂ ಬೀದಿ ನಾಟಕ, ವೈಚಾರಿಕ ಗೀತೆ, ವಚನಗಳ ಗಾಯನ ಹಾಗೂ ವಿಷಯ ಸಾಧಕರಿಂದ ದಿನದಲ್ಲಿ ಎರಡು ಕಡೆ ಎರಡು ಸ್ಥಳದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಪಾದಯಾತ್ರೆಯಲ್ಲಿ ಖ್ಯಾತ ಪರಿಸರ ಚಿಂತಕ ನಾಗೇಶ್ ಹೆಗಡೆ. ಹಿರಿಯ ರಾಜಕಾರಣಿ ಮುಖ್ಯಸ್ಥ ಮಹಿಮಾ ಪಟೇಲ್. ಸಾವಯುವ ಕೃಷಿಕ ಚಂದ್ರಶೇಖರ್ ನಾರಣಾಪುರ. ಲೇಖಕಿ ಚಿಂತಕೆ ಕೆ ಎಸ್ ವಿಮಲಾ, ಸಾಹಿತಿ ವಿಮರ್ಶಕ ಎಸ್ ಟಿ ಸಿದ್ದರಾಮಯ್ಯ, ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಕುಂದರಾಜ್, ಚಿತ್ರನಟಿ ಪೂಜಾ ಗಾಂಧಿ ಸೇರಿದಂತೆ ರಾಜ್ಯದ ಪ್ರಮುಖ ಚಿಂತಕರು ಬರಹಗಾರರು ಮಾತುಗಾರರು ಈ ಪಾದಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ.
ದುರಾಸೆ ಮತ್ತು ಕೊಳ್ಳುಬಾಕು ಸಂಸ್ಕೃತಿಯು ಮಾನವನ ಅಹಂಕಾರವನ್ನು ಹೆಚ್ಚಿಸಿ ಅವನತಿಯ ದಾರಿಯತ್ತ ಕರೆದೊಯ್ಯುತ್ತಿದೆ. ಮತ್ತೊಂದೆಡೆ ಮನುಷ್ಯ ಈ ಭೂಮಿಯಿಂದ ಬಾಹ್ಯಾಕಾಶದವರೆಗೆ ವಿಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಿದ್ದರು ಕೂಡ, ವೈಚಾರಿಕತೆಯನ್ನು ಮೈಮೇಲೆ ಧರಿಸಿಕೊಂಡು ಹೋಗಬೇಕಾದ ಈ ಮನುಷ್ಯ ಜೀವಿ , ಕಂದಾಚಾರ ಮೌಡ್ಯ ವನ್ನು ಹೊತ್ತುಕೊಂಡು ಇಂದಿಗೂ ಒಂದು ರೀತಿ ವಿಕಾರವಾಗಿ ಮನುಷ್ಯ ಜನಾಂಗ ಸಾಗುತ್ತಿದೆ.
ಇಂತಹ ಕೊಳ್ಳುವಾಕ ಸಂಸ್ಕೃತಿಯಿಂದ ಹೊರಬರದೆ ಹೋದರೆ ಅದು ಪರಿಸರ ಕೃಷಿ ಆರೋಗ್ಯ ಶಿಕ್ಷಣ ರಾಜಕಾರಣದ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರುತ್ತದೆ.
ವೈಚಾರಿಕತೆ ವೈಜ್ಞಾನಿಕ ಅಧ್ಯಯನ ನಮ್ಮದಾಗಿಸಿಕೊಳ್ಳದಿದ್ದರೆ ಅದು ಅಭಿವೃದ್ಧಿ ಭಾರತದ ಮೇಲೆ, ಪ್ರಗತಿಯ ಭಾರತದ ಮೇಲೆ ಅತ್ಯಂತ ದೊಡ್ಡ ತೊಡಕಾಗಿ ದೇಶದ ಯಾವುದೇ ಅಭಿವೃದ್ಧಿಗೆ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಕಂಟಕವಾಗುತ್ತದೆ.
ಈ ನಿಟ್ಟಿನಲ್ಲಿ ರಾಜ್ಯದ ಎರಡು ಕಡೆಯಿಂದ ಜನಜಾಗೃತಿಗಾಗಿ ಕಾಲ್ನಡಿಗೆ ಜಾಥ ನಾಳೆಯಿಂದ ಆರಂಭವಾಗಲಿದೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥವು ಐದು ದಿನಗಳ ಕಾಲ ಅಂದರೆ 27 ಜನವರಿ 2025 ರಿಂದ ಆರಂಭವಾಗಿ 31 ಜನವರಿ 2025ಕ್ಕೆ ಮುಕ್ತಾಯವಾದರೆ,
ಇನ್ನೂ ಸಾಣೆಹಳ್ಳಿಯಿಂದ ಸಂತೆಬೆನ್ನೂರಿಗೆ ಹೊರಟಿರುವ ಪಾದಯಾತ್ರೆಯೂ ಇದೇ ಜನವರಿ 27ರಿಂದ 30ನೇ ತಾರೀಖಿನವರೆಗೆ ನಾಲ್ಕು ದಿನಗಳ ಕಾಲ ನಡೆದು ಹೋಗಲಿದೆ.
ಈ ಮೇಲ್ಕಂಡ ಎರಡು ಪಾದಯಾತ್ರೆಗಳಲ್ಲಿ ಭಾಗವಹಿಸುವ ಆಸಕ್ತರು ಜಾತ್ರಾದ ಸಂಚಾಲಕರಾದ ಈ. ಬಸವರಾಜ್ 944895766.
ಡಿ.ಎಂ.ಮಂಜುನಾಥಸ್ವಾಮಿ 9019697655 ಮತ್ತು ಶಿವನಕೆರೆ ಬಸವಲಿಂಗಪ್ಪ 9663177254 ಇವರನ್ನು ಸಂಪರ್ಕಿಸಲು ಜಾಥಾ ದ ಸಂಘಟಕರು ತಿಳಿಸಿದ್ದಾರೆ.
••••••••••••••••••••••••••••••
D. M. Manjunathaswamy