ಉಪ ಮುಖ್ಯ ಮಂತ್ರಿಗಳಿಗೆ ಉಪ್ಪಳ್ಳಿ ಕೆ.ಭರತ್.ಮನವಿ
1 min readಉಪ ಮುಖ್ಯ ಮಂತ್ರಿಗಳಿಗೆ ಉಪ್ಪಳ್ಳಿ ಕೆ.ಭರತ್.ಮನವಿ.
ಐ.ಡಿ ಪೀಠ(ಇನಾಂ ದತ್ತಾತ್ರೇಯ ಬಾಬಾ ಬುಡನ್‌ಗಿರಿ) ನೊಂದಾವಣೆಯನ್ನು ತಡೆಹಿಡಿದಿರುವುದನ್ನು
ತೆರವುಗೊಳಿಸುವ ಬಗ್ಗೆ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಜಿಲ್ಲೆಯ ಅತೀ ಎತ್ತರದ ಸ್ಥಳವಾಗಿರುವ ಐ.ಡಿ ಪೀಠದ ವ್ಯಾಪ್ತಿಗೆ ಸಾವಿರಾರು ಎಕರೆ ಕಾಫಿ ತೋಟ ಮತ್ತು ಕೃಷಿ ಭೂಮಿಗಳನ್ನು ಹೊಂದಿದ್ದು ಆದರೆ ಈ ಭೂಮಿಗಳನ್ನು ಕೊಳ್ಳುವವರು ಬಂದರೂ ಕೂಡ ಮಾರಾಟ ಮಾಡಲು ವಾಗದಂತೆ ಅಥವಾ ಬ್ಯಾಂಕ್ ಸೊಸೈಟಿ ಇನ್ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಜಮೀನಿನ ದಾಖಲಾತಿಗಳನ್ನು ಅಡಮಾನವಿಟ್ಟು ಸಾಲ ಕೇಳಿದರೆ ದೊರಕುವುದಿಲ್ಲ. ಕಳೆದ 13-14 ವರ್ಷಗಳಿಂದ ಇಲ್ಲಿನ ಕಾಫಿತೋಟದ ಮಾಲಿಕರು ಮತ್ತು ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರುಗಳ ಗೋಳು ಕೇಳುವವರು ಇಲ್ಲ ಬಗೆಹರಿಸುವವರು ಮುಂದೆ ಬರುತ್ತಿಲ್ಲ. ಏಕೆಂದರೆ 2009ರಲ್ಲಿ ಅಂದಿನ ಸ್ಥಳಿಯ ಶಾಸಕ ಸಿ ಟಿ ರವಿಯವರು ಈ ವ್ಯಾಪ್ತಿಯಲ್ಲಿ ಜಮೀನು ಮತ್ತು ಕಾಫಿತೋಟಗಳೆಲ್ಲ ಇನಾಂ ಭೂಮಿಯೆಂದು ಅಂದಿನ ಅವರ ಸರ್ಕಾರದಲ್ಲಿ ಯಾವುದೇ ರೀತಿಯಾದ ವ್ಯಾಪಾರ ವಹಿವಾಟು ಮಾಡಿದರೂ ಕೂಡ ನೋಂದಾವಣೆ ಆಗದಂತೆ ತಡೆ ಹಿಡಿದಿರುತ್ತಾರೆ ಬಿ ಜೆ ಪಿ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಎರಡು ಬಾರಿ ಅಧಿಕಾರಕ್ಕೆ ಬಂದಿದ್ದರೂ ಕೂಡ ಈ ವ್ಯಾಪ್ತಿಯಲ್ಲಿ ಇನಾಂ ಭೂಮಿ ಇದೆಯೇ, ಇನಾಂ ಕೊಟ್ಟವರು ಯಾರು ಅಥವಾ ಅವರ ಹಿನ್ನಲೆ ಏನು ಅಥವಾ ಇನಾಂ ಭೂಮಿಯನ್ನು ಪತ್ತೆ ಹಚ್ಚಲು ಯಾವುದಾದರು ಸಮಿತಿಯನ್ನು ರಚಿಸಿದ್ದಾರೆಯೇ ಇದಯಾವುದನ್ನು ಇಲ್ಲಿಯವರೆಗೆ ಮಾಡಿರುವುದಿಲ್ಲ. ಭೂಮಿಯನ್ನು ಸಾವಿರಾರು ಜನಗಳು ತಮ್ಮ ಮಕ್ಕಳ ವಿಧ್ಯಾಭ್ಯಾಸ ಮದುವೆ ಅಥವಾ ಮನೆ ಕಟ್ಟುವುದು ಇನ್ಯಾವುದೇ ರೀತಿಯಾದ ವ್ಯವಹಾರ ವಹಿವಾಟುಗಳನ್ನು ನಡೆಸಲು ಆಗದೇ ತಮ್ಮ ಅಳಲನ್ನು ಯಾರಲ್ಲಿ ತೋಡಿಕೊರ್ಳಳುವುದು ಎಂಬುವುದು ತಿಳಿಯದೇ ದಿಕ್ಕು ತೋಚದಂತೆ ತ್ರಿಶಂಕೂ ಸ್ಥಿತಿಯಲ್ಲಿ ಇಲ್ಲಿನ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ. ಆದ ಕಾರಣ ಈ ಕೂಡಲೆ ಐ.ಡಿ ಪಿಠ ವ್ಯಾಪ್ತಿಗೆ ಇರುವ ಅಡಚಣೆಗಳನ್ನು ಅದು ಸರ್ಕಾರ ಅಥವಾ ನ್ಯಾಯಾಲಯದಲ್ಲಿ ಇದ್ದರೂ ಕೂಡ ಅದನ್ನು ಸರ್ಕಾರ ಸೂಕ್ಷತೆಯಿಂದ ಪರಿಗಣನೆಗೆ ತೆಗೆದುಕೊಂಡು ಬಗೆಹರಿಸಲು ಮುಂದಾಗಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.ಎಂದು ಉಪ್ಪಳ್ಳಿ ಕೆ.ಭರತ್ ರವರು ಉಪ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಉಪ್ಪಳ್ಳಿ.ಕೆ.ಭರತ್.
ರಾಜ್ಯ ಅಧ್ಯಕ್ಷರು,
ಕೆ.ಪಿ.ಟಿ.ಸಿ.ಎಲ್ ಹೊರಗುತ್ತಿಗೆ ನೌಕರರ ಒಕ್ಕೂಟ
ಸರ್ವಧರ್ಮ ಸೇವಾ ಸಂಸ್ಥೆ(ರಿ)