ಭಾರತ ಎಂದರೆ ವಿವೇಕಾನಂದ;ವಿಕೃತಾನಂದವಲ್ಲ!
1 min read![](https://avintv.com/wp-content/uploads/2025/01/Screenshot_20250112_153627-1024x1267.jpg)
ಭಾರತ ಎಂದರೆ ವಿವೇಕಾನಂದ;ವಿಕೃತಾನಂದವಲ್ಲ!
******************
ಜನವರಿ 12,ಸ್ವಾಮಿವಿವೇಕಾನಂದರ ಜನ್ಮ ದಿನ. ಸಾ. ಶ. 1863ರಲ್ಲಿಇವರು ಹುಟ್ಟಿದ್ದು. ಸುಮಾರು 160 ವರ್ಷಗಳು ಕಳೆದು ಹೋದದ್ದನ್ನು ಹಿಂತಿರುಗಿ ನೋಡಿದರೆ, ವಿವೇಕಾನಂದ ರಿಂದ ಭಾರತ ಇನ್ನೂ ಏನೂ ಕಲಿಯಲಿಲ್ಲ.
ಇಪ್ಪತ್ತೈದು ವರುಷ ಎಲ್ಲ ದೇವರುಗಳನ್ನು ಕಟ್ಟಿ ಅರಬ್ಬೀ ಸಮುದ್ರಕ್ಕೆಹಾಕಿ ಭಾರತಾಂಬೆಯ ಪೂಜಿಸಿ ಎಂದು ಹೇಳಿದ ಕ್ರಾಂತಿಕಾರಿ ಯುದ್ಧದ ಹೌದು. ಎಡಪಂಥೀಯರು ಒಪ್ಪಿಕೊಳ್ಳುವಂತಹ ವ್ಯಕ್ತಿತ್ವ ವಿವೇಕಾನಂದರದು.
ಜಗತ್ತಿನ ಮೂಲ ಅರಿಯಲು ಉಪನಿಷತ್ ಅನ್ನು ಅಧ್ಯಯನ ಮಾಡಿ ಭಾರತದ ಪರಂಪರೆ ಅರಿತು ಘನತೆ ಯನ್ನು ಹೆಚ್ಚಿಸಿ ಎಂದು ಬಲಪಂಥೀಯರನ್ನುಹುಬ್ಬೇರುವಂತೆಮಾಡಿದವರುವಿವೇಕಾನಂದರು. ಜಗದ್ಗುರುವಾಗದೇ, ಪೂಜಾ ಪರಂಪರೆಯನ್ನು ಹುಟ್ಟು ಹಾಕದೆ ಸಮನ್ವಯದ ದಾರಿಯನ್ನು ತೋರಿಸಿಕೊಟ್ಟರು. ಯಾರು ಮತ್ತೊಬ್ಬನಿಗಾಗಿ ಬದುಕು ತ್ತಾರೋ ಅವರ ಬದುಕು ತೋರಿಸಿಕೊಟ್ಟ ಮಹಾನ್ ಮಾನವತಾವಾದಿ ಸ್ವಾಮಿ ವಿವೇಕಾನಂದರು.
ಇದಕ್ಕೆ ಪೂರಕವಾಗಿ ವಿವೇಕಾನಂದರು ಇನ್ನೊಂದು ಮಾತು ಹೇಳುತ್ತಾರೆ. ಹಸಿದ ಹೊಟ್ಟೆಗೆ ಅನ್ನ ನೀಡದ, ವಿಧವೆಯರ ಕಣ್ಣೀರು ವರ್ಷದ ಧರ್ಮ ಮತ್ತು ದೇವರುಗಳಲ್ಲಿ ನನಗೆ ನಂಬಿಕೆ ಇಲ್ಲ ಎನ್ನುತ್ತಾರೆ. ಭಾರತವನ್ನು ತಿಳಿಯಬೇಕಾದರೆ, ವಿವೇಕಾನಂದರನ್ನು ತಿಳಿಯಿರಿ. ರವೀಂದ್ರನಾಥ ಟ್ಯಾಗೋರ್ ರ ಈ ಮಾತು ಪ್ರಸಿದ್ಧವಾಗಿದೆ.
ಉತ್ಸಾಹಭರಿತ ಯುವಕರಿಂದ ಜಗತ್ತನ್ನೇ ಬದಲಿಸುವ ಭರವಸೆ ಹೊಂದಿದ್ದ ಅವರು ಯುವಕರಿಗೆ ಹೇಳುತ್ತಾರೆ.
“ನಿನ್ನ ಮೇಲೆ ನಿನಗೆ ನಂಬಿಕೆ ಇಲ್ಲದಿದ್ದರೆ, ಮೂವತ್ಮೂರು ಕೋಟಿ ದೇವತೆಗಳ ಮೇಲೆ ನಂಬಿಕೆ ಇಟ್ಟರೂ ಪ್ರಯೋಜನ ವಿಲ್ಲ”!
ಭಾರತದಲ್ಲಿ ಜಾತಿ-ಧರ್ಮ ಮೀರಿದ ವ್ಯಕ್ತಿತ್ವ ಸ್ವಾಮಿ ವಿವೇಕಾನಂದರದು. ಭಾರತ ಇಂದು ವಿವೇಕಾನಂದದ ಜಾಗದಲ್ಲಿ ವಿಕೃತಾನಂದ ಮೆರೆಯುತ್ತಿರುವುದು ವಿಪರ್ಯಾಸ.
ಇಂದು ವಿವೇಕಾನಂದ ಜಯಂತಿ. ನಿಮ್ಮೊಂದಿಗೆ ಒಂದಷ್ಟು ಸಕಾಲಿಕ ಮಾತು.
*******************
-ಕುಂದೂರು ಅಶೋಕ್