ಕೆಜೆವಿಎಸ್ ಕೊಡಮಾಡುವ ಅನಿತಾ ಕೌಲ್ ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ಐದು ಜನ ಭಾಜನ*
1 min read*ಕೆಜೆವಿಎಸ್ ಕೊಡಮಾಡುವ ಅನಿತಾ ಕೌಲ್ ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ಐದು ಜನ ಭಾಜನ*
ಚಿಕ್ಕಮಗಳೂರು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ರಾಜ್ಯ ಘಟಕ ಬೆಂಗಳೂರು ಇವರು,
ಐ ಏ ಎಸ್ ದಕ್ಷ ಅಧಿಕಾರಿಣಿ ಅನಿತಾ ಕೌಲ್ ಸ್ಮರಣಾರ್ಥ, ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದವರನ್ನು ಗುರುತಿಸಿ,ಕೊಡ ಮಾಡುವ 2024ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ /ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯನ್ನು ಒಳಗೊಂಡಂತೆ 40 ಜನರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಈ ನಲವತ್ತು ಜನರಲ್ಲಿ
ಚಿಕ್ಕಮಗಳೂರು ಜಿಲ್ಲೆಯ ಐದು ಜನ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದೆ.
ಬಿ. ಪಿ. ಕುಮಾರಸ್ವಾಮಿ, ಸಹ ಶಿಕ್ಷಕ, ಎಂ.ಏನ್. ಲಕ್ಷ್ಮಣಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ, ಎಂ.ಸಿ ಹಳ್ಳಿ ತರೀಕೆರೆ ತಾಲ್ಲೂಕು.
ಕೆ.ಹೆಚ್. ಗೀತಾ. ಸಹ ಶಿಕ್ಷಕಿ. ಸ. ಕಿ. ಪ್ರಾ. ಶಾಲೆ
ಯಲಗುಡಿಗೆ. ಚಿಕ್ಕಮಗಳೂರು ತಾಲೂಕು.
ಬಿ. ಜೆ. ಅಶೋಕ್, ಸಹ ಶಿಕ್ಷಕ, ಅಂಬೇಡ್ಕರ್ ವಸತಿ ಪ್ರೌಡ ಶಾಲೆ.ಚೌಳಹಿರಿಯೂರು. ಕಡೂರು ತಾಲೂಕು .
ಜಿ.ಎಂ. ಕುಮಾರಸ್ವಾಮಿ. ಮುಖ್ಯ ಶಿಕ್ಷಕರು, ಸ.ಹಿ. ಪ್ರಾ.ಶಾಲೆ. ಜಿ.ಕೆ.ಹಳ್ಳಿ. ಕಡೂರು ತಾಲೂಕು .
ಅಸ್ಗರ್ ಆಲಿಖಾನ್,ಸಹ ಶಿಕ್ಷಕ.ಸ. ಉರ್ದು ಕಿ.ಪ್ರಾ.ಶಾಲೆ. ಬೀಳಗೊಳ. ಮೂಡಿಗೆರೆ ಇವರುಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ದಿನಾಂಕ 12.01. 2025 ಭಾನುವಾರ, ಬೆಂಗಳೂರಿನ ಬಸವನಗುಡಿಯಲ್ಲಿರುವ ಬಿ ಎಂ ಎಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ, ಕೆಜೆವಿಎಸ್ ರಾಜ್ಯಾಧ್ಯಕ್ಷರು ಹಾಗೂ ಖ್ಯಾತ ಮನೋವೈದ್ಯರಾದ ಡಾ. ಸಿ. ಆರ್. ಚಂದ್ರಶೇಖರ್ ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್. ಕೆ. ಅತಿಕ್ , ಕೆಜೆವಿಎಸ್ ರಾಜ್ಯ ಕಾರ್ಯದರ್ಶಿ ಈ ಬಸವರಾಜ್ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದು, ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ. ಎಂ. ಮಂಜುನಾಥಸ್ವಾಮಿ ತಿಳಿಸಿದ್ದಾರೆ.