“ಅತ್ತೆ ಬೇಗ ಸಾಯಬೇಕು” ಎಂದು ನೋಟ್ ಮೇಲೆ ಬರೆದು ಹುಂಡಿಗೆ ಹಾಕಿದ ಸೊಸೆ!*
1 min read*“ಅತ್ತೆ ಬೇಗ ಸಾಯಬೇಕು” ಎಂದು ನೋಟ್ ಮೇಲೆ ಬರೆದು ಹುಂಡಿಗೆ ಹಾಕಿದ ಸೊಸೆ!*
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಯಲ್ಲಿ ವಿಚಿತ್ರ ಹರಕೆಯ ನೋಟ್ ಪತ್ತೆಯಾಗಿದೆ. 20 ರೂಪಾಯಿ ನೋಟಿನ ಮೇಲೆ ಇಷ್ಟಾರ್ಥವನ್ನು ಬರೆದು ಹುಂಡಿಯಲ್ಲಿ ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೋಟಿನ ಭಾವಚಿತ್ರ ವೈರಲ್ ಆಗಿದೆ.
ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿ ಎಣಿಕೆ ಮಾಡುವ ವೇಳೆ ವಿಚಿತ್ರ ಹರಕೆಯ ನೋಟ್ ಪತ್ತೆಯಾಗಿದೆ. ಅತ್ತೆ ಸಾಯಬೇಕೆಂದು ಬರೆದಿರುವ 20 ರೂ. ಮುಖಬೆಲೆಯ ನೋಟ್ ಪತ್ತೆಯಾಗಿದೆ. “ತಾಯಿ, ನಮ್ಮ ಅತ್ತೆ ಬೇಗ ಸಾಯಬೇಕು” ಅಂತ 20 ರೂ. ಮುಖಬೆಲೆಯ ನೋಟ್ ಮೇಲೆ ಬರೆದು ಹುಂಡಿಯಲ್ಲಿ ಹಾಕಲಾಗಿದೆ.
ಹುಂಡಿ ಎಣಿಕೆ ಕಾರ್ಯ ವೇಳೆ ನೋಟ್ ಪತ್ತೆಯಾಗಿದೆ. ನೋಟ್ನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅತ್ತೆ ಸಾಯಲೆಂದು ಸೊಸೆ ಈ ರೀತಿಯಾಗಿ ಬರೆದು ಹಾಕಿದ್ದಾಳೆ ಎಂದು ಊಹಿಸಲಾಗಿದೆ. ಹುಂಡಿಯಲ್ಲಿ 60 ಲಕ್ಷ ನಗದು, ಒಂದು ಕೆಜಿ ಬೆಳ್ಳಿ, 200 ಗ್ರಾಂ ಚಿನ್ನಾಭರಣ ಹುಂಡಿಯಲ್ಲಿ ಹಾಕಲಾಗಿತ್ತು.