लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಹೇಮಾವತಿ ನದಿ ಅಭಿವೃದ್ದಿ ಪ್ರಾಧಿಕಾರ ರಚಿಸಲು* *ಉಪ ಮುಖ್ಯಮಂತ್ರಿ*
*ಡಿಕೆಶಿ’ಗೆ ಮನವಿ ಸಲ್ಲಿಸಿದ ಮೂಡಿಗೆರೆ ಬಾಳೂರುಬಾಲಕೃಷ್ಣ*

ರಾಜ್ಯದ ಆರು ಜಿಲ್ಲೆಗಳ ರೈತಾಪಿ ಜನರು ಮತ್ತು ಸಾರ್ವಜನಿಕರ ಪಾಲಿಗೆ ಜೀವನದಿಯಾಗಿರುವ ಹೇಮಾವತಿ ನದಿ ಉಗಮ ಸ್ಥಳ ಮತ್ತು ನದಿ ಕೊಳ್ಳದ ಸಮಗ್ರ ಅಭಿವೃದ್ದಿಗಾಗಿ ಹೇಮಾವತಿ ನದಿ ಅಭಿವೃದ್ದಿ ಪ್ರಾಧಿಕಾರ ವನ್ನು ರಚಿಸುವಂತೆ ಒತ್ತಾಯಿಸಿ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ (ರಿ) ಸಮಿತಿಯ ಅಧ್ಯಕ್ಷ ಮೂಡಿಗೆರೆ ಬಿ.ಆರ್.ಬಾಲಕೃಷ್ಣ ಹಾಗೂ ರಾಜ್ಯ ಗೃಹಮಂಡಳಿ ಮಾಜಿ ಅದ್ಯಕ್ಷರಾದ ಹಾಲಪ್ಪಗೌಡ ಅವರು
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ
ಒತ್ತಾಯಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಹಿರಿಯ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಅವರ
ಪುಣ್ಯತಿಥಿ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜ್ಯದ ಉಪಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ನವದೆಹಲಿಯ ಪ್ರತಿನಿಧಿ
ಟಿ.ಬಿ.ಜಯಚಂದ್ರ ಹಾಗೂ ರಾಜ್ಯದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಒತ್ತಾಯಿಸಿ ಮನವಿ ಸಲ್ಲಿಸಿದ ಬಿ.ಆರ್.ಬಾಲಕೃಷ್ಣ.
ಹಾಗೂ ಗೃಹಮಂಡಳಿ ಮಾಜಿ ಅದ್ಯಕ್ಷರಾದ ಹಾಲಪ್ಪಗೌಡ ಅವರ ನೇತೃತ್ವದ ಹೇಮಾವತಿ
ನದಿ ಉಗಮ ಹಿತರಕ್ಷಣಾ ಒಕ್ಕೂಟ (ರಿ) ಸಮಿತಿಯ ಸದಸ್ಯರು ಹೇಮಾವತಿ
ನದಿಯು ಪಶ್ಚಿಮ ಘಟ್ಟದ ಚಿಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟಿ, ಮೂಡಿಗೆರೆ ಮುಖಾಂತರ ಹಾಸನ ಜಿಲ್ಲೆ ಪ್ರವೇಶಿಸಿ, ಹಾಸನ ಜಿಲ್ಲೆಯಲ್ಲಿ ಹರಿದು ಹಸಿರುಮಯ ಮಾಡಿ ನಂತರ ಮಂಡ್ಯ ಜಿಲ್ಲೆಯನ್ನ ಪ್ರವೇಶಿಸಿ ಕೆ.ಆರ್.ಪೇಟೆಯ ಅಂಬಿಗರಹಳ್ಳಿಯ ಬಳಿ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯೊಂದಿಗೆ ವಿಲೀನವಾಗುತ್ತದೆ.

ಕಾವೇರಿ ನದಿಯ ಉಪ ನದಿಗಳಲ್ಲಿಯೇ ಅತೀ ಹೆಚ್ಚು ಕಿ.ಮಿ ಉದ್ದ ಹರಿಯುವ ಹೇಮಾವತಿ ನದಿಯಿಂದ ಲಕ್ಷಾಂತರ ಎಕರೆ ಭೂಮಿ ಹಾಸನ, ಮಂಡ್ಯ, ಕೊಡಗು, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಅಚ್ಚುಕಟ್ಟಾಗಿದೆ. ಆರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳೊಂದಿಗೆ ಈಗ ಬೆಂಗಳೂರು ನಗರಕ್ಕೂ
ಕುಡಿಯುವ ನೀರಿಗೆ ಪ್ರಮುಖ ಆಸರೆಯಾಗಿದೆಯಲ್ಲದೆ ಗೊರೂರು ಡ್ಯಾಂ’ನಿಂದ
ಎಡದಂಡೆ ಮತ್ತು ಬಲದಂಡೆ ಕಾಲುವೆಯಲ್ಲಿ ಹರಿಯುವ ಹೇಮಾವತಿ ನೀರು
ಹಾಸನ,ಮಂಡ್ಯ ತುಮಕೂರು ಜಿಲ್ಲೆಗಳ ರೈತರಿಗೆ ಜೀವನದಿ ಯಾಗಿದೆ. ಆದರೆ ಇಷ್ಟೆಲ್ಲಾ ಅನುಕೂಲಕರವಾಗಿರುವ ಹೇಮಾವತಿ ನದಿ ಹುಟ್ಟುವ ಸ್ಥಳ ಮತ್ತು ಅದರ ಪಾತ್ರದ ಪುಣ್ಯ ಸ್ಥಳಗಳ ಅಭಿವೃದ್ದಿಗೆ ರಾಜ್ಯ ಸರ್ಕಾರವು ಸೂಕ್ತ ಕ್ರಮ ವಹಿಸದಿರುವದು ದುಃಖದ ವಿಚಾರವಾಗಿದೆ.
ಕಾವೇರಿ ನದಿಕೊಳ್ಳದ ಸಮಗ್ರ ಅಭಿವೃದ್ದಿಗೆ ಪ್ರಾಧಿಕಾರ ರಚಿಸಿರುವಂತೆ
ಹೇಮಾವತಿ ನದಿಕೊಳ್ಳದ ಅಭಿವೃದ್ದಿಗೆ ಈವರೆವಿಗೂ ಯಾವುದೇ ಅಭಿವೃದ್ದಿ ಪ್ರಾಧಿಕಾರವನ್ನು ರಾಜ್ಯ ಸರ್ಕಾರವು ರಚಿಸಿಲ್ಲ. ಲಕ್ಷಾಂತರ ಜನರ ಬಾಯಾರಿಕೆ ಮತ್ತು ದಿನನಿತ್ಯದ ನೀರಿನ ಅವಶ್ಯಕತೆಯನ್ನು ನೀಗಿಸು ತ್ತಿರುವ ಹೇಮಾವತಿ ನದಿ ಕೊಳ್ಳದ ಸಮಗ್ರ ಅಭಿವೃದ್ದಿಗಾಗಿ
ಮತ್ತು ಹೇಮಾವತಿ ನದಿ ಮೂಲ ಸ್ಥಳವಾದ ಜಾವಳಿ ಗ್ರಾಮವನ್ನು ತಲಕಾವೇರಿಯ ರೀತಿ ಸಮಗ್ರವಾಗಿ ಅಭಿವೃದ್ದಿಗೊಳಿಸಿ ಪ್ರವಾಸಿ ಮತ್ತು ಯಾತ್ರಾಸ್ಥಳವಾಗಿ ರೂಪಿಸಬೇಕೆಂದು ಬಾಲಕೃಷ್ಣ ಹಾಗೂ ಹಾಲಪ್ಪ ಅವರು
ಒತ್ತಾಯಿಸಿದ್ದಾರೆ.

ಈ ಸಂಬಂಧ ಜಲಸಂಪನ್ಮೂಲ ಮಂತ್ರಿಗಳು ಹಾಗೂ ರಾಜ್ಯದ
ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಹಾಗೂ ರಾಜ್ಯ ಸರ್ಕಾರದ
ನವದೆಹಲಿಯ ಪ್ರತಿನಿಧಿ ಟಿ.ಬಿ.ಜಯಚಂದ್ರ ಮತ್ತು ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿ ನದಿಕೊಳ್ಳದ
ಅಭಿವೃದ್ದಿಗೆ ಶಾಶ್ವತವಾದ ಯೋಜನೆ ರೂಪಿಸುವಂತೆ ಮನವಿ ಮಾಡಿದರು.
ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಹೇಮಾವತಿ ನದಿ
ನೀರನ್ನು ಬಳಸುತ್ತಿರುವ ಹಾಸನ ಮಂಡ್ಯ ಮತ್ತು ತುಮಕೂರು
ಜಿಲ್ಲೆಯ ಜನಪ್ರತಿನಿಧಿಗಳು ಒಂದಾಗಿ ಒಕ್ಕೊರಲಿನಿಂದ ಹೇಮಾವತಿ ನದಿಮೂಲ ಸಂರಕ್ಷಣೆ ಮತ್ತು ನದಿಕೊಳ್ಳದ ಅಭಿವೃದಿಗೆ ನಿರ್ಣಯವನ್ನು ಅಂಗೀಕರಿಸಲು ಒತ್ತಾಯ ಮಾಡಬೇಕೆಂದು ಈ
ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ
ರಾಜ್ಯಾಧ್ಯಕ್ಷ ಡಾ: ಮಹೇಶ್‌ ಜೋಶಿ ಮತ್ತು ಚಿಕ್ಕಮಗಳೂರಿನವರೇ
ಆಗಿರುವ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಈ
ಸಂಬಂಧ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರಕ್ಕೆ ಕ್ರಮ
ವಹಿಸಬೇಕೆಂದು ಮನವಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *