ಡಿ.23ರಂದು ಬೆಳೆಗಾರರ ಬೃಹತ್ ಸಮಾವೇಶ
1 min readಡಿ.23ರಂದು ಬೆಳೆಗಾರರ ಬೃಹತ್ ಸಮಾವೇಶ
ಕರ್ನಾಟಕ ಬೆಳೆಗಾರರ ಸಂಘದ ವತಿಯಿಂದ ಬೆಳೆಗಾರರ ಬೃಹತ್ ಸಮಾವೇಶ ಹಾಗೂ ವಾರ್ಷಿಕ ಮಹಾ ಸಭೆಯನ್ನು ಸಕಲೇಶಪುರದಲ್ಲಿ ಡಿಸೆಂಬರ್ 23 ರ ಸೋಮವಾರ 10-30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕೆಜಿಎಫ್ ಅದ್ಯಕ್ಷ ಡಾ.ಹೆಚ್.ಕೆ.ಮೋಹನ್ ಕುಮಾರ್ ಹೇಳಿದರು.
ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾವರು ಡಿಸೆಂಬರ್ 23 ರ ಸೋಮವಾರದಂದು ಬೆಳಗ್ಗೆ 10:30 ಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ವತಿಯಿಂದ ಬೆಳೆಗಾರರ ಬೃಹತ್ ಸಮಾವೇಶ ಮತ್ತು ವಾರ್ಷಿಕ ಮಹಾಸಭೆಯನ್ನು ಸಕಲೇಶಪುರದ ಎ.ಪಿ.ಎಂ.ಸಿ ಮೈದಾನದ ಆವರಣದಲ್ಲಿ ನಡೆಸಲಾಗುವುದು ಎಂದರು
ಈ ಸಮಾವೇಶಕ್ಕೆ ಕೇಂದ್ರ ಸರ್ಕಾರದ ವಾಣಿಜ್ಯ ಸಚಿವರಾದ ಶ್ರೀ ಪಿಯೂಪ್ ಗೋಯಲ್‌ರವರು, ಕೇಂದ್ರ ಉಕ್ಕು ಮತ್ತು ಬಾರಿ ಕೈಗಾರಿಕಾ ಸಚಿವರಾದ
ಹೆಚ್.ಡಿ.ಕುಮಾರಸ್ವಾಮಿಯವರು,
ಕೇಂದ್ರ ರೈಲ್ವೆ ಸಚಿವಾಲಯದ ರಾಜ್ಯ ಸಚಿವರಾದ ಸೋಮಣ್ಣನವರು, ಗುರುವಾರ ಪತ್ರಿಕಾ ಹಾಗೂ ರಾಜ್ಯ ಸರ್ಕಾರದ ಕಂದಾಯ ಸಚಿವರಾದ ಕೃಷ್ಣಬೈರೇಗೌಡರವರು,
ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರು,
ಸಹಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎನ್. ರಾಜಣ್ಣನವರು, ಪ್ರತಿಪಕ್ಷ ನಾಯಕರಾದ ಆರ್. ಆಶೋಕ್‌ರವರು, ಸ್ಥಳೀಯ ಶಾಸಕರಾದ ಸಿಮೆಂಟ್ ಮಂಜುನಾಥ್ ರವರು, ಹಾಸನ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೇಯಸ್‌ಪಟೇಲ್‌ರವರು, ಚಿಕ್ಕಮಗಳೂರು ಲೋಕಸಭಾ
ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರು, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ರವರು ಹಾಗೂ ಕಾಫಿ ಬೆಳೆಯುವ ಪ್ರದೇಶಗಳ ಮಾನ್ಯ ಕೆ ಶಾಸಕರುಗಳು, ಮಾನ್ಯ ವಿಧಾನ ಕೆ ಪರಿಷತ್ ಸದಸ್ಯರುಗಳು, ಮಾನ್ಯ ಮಾಜಿ ಶಾಸಕರು, ಮಾನ್ಯ ಮಾಜಿ ವಿಧಾನ ಪರಿಷತ್ ಸದಸ್ಯರುಗಳು, ಹಾಗೂ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲಿ ಕೃಷಿ ವಸ್ತು ಪ್ರದರ್ಶನ ಹೆಚ್ಚಿನ ಸಂಖ್ಯೆಯಲ್ಲಿರಲಿದೆ. ಈ
ಸಮಾವೇಶದಲ್ಲಿ ಕಾಫಿ ಬೆಳೆಗಾರರ ಹಲವಾರು ವಿಚಾರಗಳು ಮಂಡನೆ ಆಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು, ಮಹಿಳಾ ಬೆಳೆಗಾರರು ಮತ್ತು ಪತ್ರಿಕಾ ಮಾಧ್ಯಮದವರು ಈ ಸಮಾವೇಶಕ್ಕೆ ಭಾಗವಹಿಸಬೇಕಾಗಿ ಮಾಧ್ಯಮ ಗೋಷ್ಟಿಯ ಮೂಲಕ ಆಹ್ವಾನಿಸಿದರು, ಈ ಸಂದರ್ಭದಲ್ಲಿ ಜಿ ಎಪ್ ಪ್ರಧಾನ ಕಾರ್ಯದರ್ಶಿ ಬಿ ಕೃಷ್ಣಪ್ಪ, ಎಚ್ ಡಿ ಪಿ. ಎ ಅಧ್ಯಕ್ಷರಾದ ಪರಮೇಶ್, ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, ಕೆ ಜಿ ಎಪ್ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್, ಕೆ ಜಿ ಎಪ್ ಸಂಘಟನಾ ಕಾರ್ಯದರ್ಶಿ ಎ ಎನ್ ನಾಗರಾಜ್, ಎಂ ಎಚ್ ಪ್ರಕಾಶ್, ಯತೀಶ್ ಉಪಸ್ಥಿತರಿದ್ದರು..