ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಉತ್ಸವ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗದಿರಲಿ: ಹೊರಟ್ಟಿ ರಘು
1 min readಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಉತ್ಸವ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗದಿರಲಿ: ಹೊರಟ್ಟಿ ರಘು
ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕೊಟ್ಟಿಗೆಹಾರ, ಬಣಕಲ್ ಶಾಲೆಗಳಿಗೆ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಸಂಭ್ರಮದ ಸ್ವಾಗತ ಕೋರಲಾಯಿತು.
ಕನ್ನಡ ಪರ ಹೋರಾಟಗಾರ ಹೊರಟ್ಟಿ ರಘು ಮಕ್ಕಳಿಗೆ ಸಿಹಿ ಹಂಚಿ ಮಾತನಾಡಿ, ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಯುವುದು ಸಂತಸ ತಂದಿದೆ. ಭಾಷೆಯ ಮೇಲಿರುವ ಆಗಾಧ ಪ್ರೀತಿ, ಸಾಹಿತ್ಯ, ಕಲೆ, ಸಂಸ್ಕಾರ ನಾಡಿನಲ್ಲಿ ಸದಾ ನಿತ್ಯೋತ್ಸವಾಗಬೇಕು. ಬರೀ ಸಮ್ಮೇಳನದಲ್ಲಿ ಮಾತ್ರ ಕನ್ನಡ ಭಾಷೆಗೆ ಒಲುಮೆಯಾಗದೇ ಪ್ರತಿ ಶಾಲೆಗಳಲ್ಲೂ ಕನ್ನಡ ಭಾಷೆಗೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳಿಗೆ ಕನ್ನಡ ಭಾಷೆಯ ಮೇಲೆ ಸದಾಭಿರುಚಿ ನೀಡುವಂತಾಗಬೇಕು ಎಂದು ಅವರು ಹೇಳಿದರು.
ಪ್ರತಿ ಶಾಲೆ, ಸಂಘಸಂಸ್ಥೆಗಳಲ್ಲಿ ಕನ್ನಡ ನಾಮಫಲಕ ಹಾಕುವ ಮೂಲಕ ಭಾಷಾಭಿಮಾನ ಬೆಳೆಸಬೇಕು. ಸಕ್ಕರೆನಾಡು ಮಂಡ್ಯದಲ್ಲಿ ನಡೆಯುವ ಉತ್ಸವ ಪ್ರತಿ ಜಿಲ್ಲೆಗಳಲ್ಲಿ ಅಖಿಲ ಭಾರತ ಕನ್ನಡ ಉತ್ಸವದ ಸಂಭ್ರಮವನ್ನು ವಿವಿಧ ರೀತಿಯಲ್ಲಿ ಸಂಭ್ರಮಿಸುವ ಮೂಲಕ ಸ್ವಾಗತ ಕೋರುವಂತಾಗಬೇಕು’ಎಂದರು.
ಕನ್ನಡ ಪರ ಸಂಘಟನೆಯಿಂದ ಬಣಕಲ್ ನಜರೆತ್ ಶಾಲೆ, ರಿವರ್ ವ್ಯೂವ್ ಕೊಟ್ಟಿಗೆಹಾರ ಏಕಲವ್ಯ ಮಾದರಿ ವಸತಿ ಆಂಗ್ಲ ಶಾಲೆಗಳಲ್ಲಿ ಸಿಹಿ ಹಂಚುವ ಮೂಲಕ ಕನ್ನಡ ಸಂಭ್ರಮವನ್ನು ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮ್ಮೇಳನಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ನಜರೆತ್ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೊ,ಲವಕುಮಾರ್, ಪೀಟರ್ ಪ್ರಾನ್ಸಿಸ್ ಪಿಂಟೊ, ಏಕಲವ್ಯ ಶಾಲೆಯ ಪ್ರಾಂಶುಪಾಲರಾದ ಸತೀಶ್ ಜೈಸ್ವಾಲ್ ,ಸಿಬ್ಬಂದಿ ಸುಮಿತ್ರ ಮತ್ತಿತರರು ಇದ್ದರು.