ಅಗ್ನಿಯಿಂದಾಗುವ ಅನಾಹುತಗಳ ಬಗ್ಗೆ….
1 min readಕರ್ನಾಟಕ ಸರ್ಕಾರ, ಅಗ್ನಿಶಾಮಕ ಮತ್ತು
ತುರ್ತುಸೇವೆಗಳು, ಅಗ್ನಿಶಾಮಕ ಠಾಣೆ ಮೂಡಿಗೆರೆ ಹಾಗೂ ನಳಂದ ಆಂಗ್ಲ ಮಾಧ್ಯಮ ಶಾಲೆ ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಗ್ನಿಯಿಂದಾಗುವ ಅನಾಹುತಗಳ ಬಗ್ಗೆ ಹಾಗೂ
ಅದನ್ನು ನಿವಾರಿಸುವ ವಿಷಯಗಳ ಬಗ್ಗೆ ಶ್ರೀಯುತ ಹೆಚ್ ಕೆ ದೇವೇಂದ್ರಪ್ಪ ಠಾಣಧಿಕಾರಿಗಳು ಅಗ್ನಿಶಾಮಕ ಠಾಣೆ ಮೂಡಿಗೆರೆ ಇವರು ಎಲ್ಲೆಲ್ಲಿ, ಹೇಗೆ, ಯಾವ ಯಾವ ತರಹದ ಬೆಂಕಿ ಅವಘಡಗಳು ಸಂಭವಿಸುತ್ತವೆ, ಅವುಗಳನ್ನ ಹೇಗೆ ನೀವಾರಿಸಬೇಕು ಹಾಗೂ ಮುನ್ಸೂಚನಾ ಕ್ರಮಗಳೇನು, ನೀರಿನಲ್ಲಿ ಮುಳುಗಿದವರನ್ನ ಹೇಗೆ ರಕ್ಷಣೆ ಮಾಡಬೆಕು, ಎಂಬ ಹಲವಾರು ವಿಷಯಗಳ ಬಗ್ಗೆ ವಿಚಾರ ಮಂಡನೆಯನ್ನ ಮಾಡುವುದರೊಂದಿಗೆ ಪ್ರದರ್ಶನವನ್ನ ಮಾಡುವ ಮೂಲಕ ಅಗ್ನಿಶಾಮಕದ ಬಗ್ಗೆ ಅರಿವನ್ನ ಮೂಡಿಸಿದರು,
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರಾದ ಶ್ರೀಯುತ ಗಣೇಶ್ ಸರ್, ಶ್ರೀಮತಿ ಪ್ರೇಮಾ ಗಾಯುತ್ರಿ ಮೇಡಂ, ಮುಖ್ಯ ಶಿಕ್ಷಕರಾದ ಶ್ರೀಮತಿ ಡಾಲಿ ಮೇಡಂ, ಅಗ್ನಿಶಾಮಕ ಸಿಬ್ಬಂದಿ ವರ್ಗದವರು ಶಾಲಾ ಶಿಕ್ಷಕ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು