लाइव कैलेंडर

February 2025
M T W T F S S
 12
3456789
10111213141516
17181920212223
2425262728  
06/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಚಿಕ್ಕಮಗಳೂರು-ಮಾದಲಾಂಬಿಕೆ ತಂಡದಿoದ ಹೊಸ್ತಿಲಹುಣ್ಣಿಮೆ-ದಿಟ್ಟತನದ ನಿರ್ಧಾರ ಮಹಿಳೆಯರದ್ದಾಗಲಿ:ಸುಮಿತ್ರಾ ಕರೆ*

ಸಮಾಜಕ್ಕೆ ಒಳಿತಾಗುವ ದಿಟ್ಟತನದ ನಿರ್ಧಾರ ಕೈಗೊಳ್ಳುವ ಮನೋಸ್ಥೈರ್ಯ ಮಹಿಳೆಯರ ದ್ದಾಗಬೇಕೆಂದು ಕಡೂರು ಜ್ಞಾನಜ್ಯೋತಿ ಪ್ರೌಢಶಾಲಾ ಶಿಕ್ಷಕಿ ಸುಮಿತ್ರಾಸುರೇಶ್ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಕಲ್ಯಾಣನಗರದ ಶರಣೆ ಮಾದಲಾಂಬಿಕೆ ಗುoಪಿನ ‘ಹೊಸ್ತಿಲಹುಣ್ಣಿಮೆ’ ಕಾರ್ಯಕ್ರಮ ಉದ್ಘಾಟಿಸಿ ನಿನ್ನೆ ಅವರು ಮಾತನಾಡಿದರು.

ಮಹಿಳಾ ಸಂಕುಲಕ್ಕೆ ಅಕ್ಕಮಹಾದೇವಿ ಆದರ್ಶ.12ನೆಯ ಶತಮಾನದಲ್ಲೆ ವಿಚಾರ ಪ್ರತಿಪಾದಿಸಿ ಸಮಾಜಕ್ಕೆ ಒಗ್ಗದ ನಿರ್ಧಾರವನ್ನು ದಿಟ್ಟತನದಿಂದ ಕೈಗೊಂಡ ಇತಿಹಾಸ ಕಣ್ಮುಂದೆ ಇದೆ. ಇಂದಿನ ಮಹಿಳೆಯರು ಘನತೆ ಗೌರವದೊಂದಿಗೆ ನಮ್ಮತನವನ್ನೂ ಉಳಿಸಿಕೊಂಡು ದಿಟ್ಟನಿರ್ಧಾರ ಕೈಗೊಳ್ಳುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು.ಆದರೆ ನಮ್ಮ ನಿರ್ಧಾರ ಕುಟುಂಬ ಹಾಗೂ ಸಮಾಜದ ಹಿತಕ್ಕೆ ಪೂರಕವಾಗಿದ್ದರೆ ಮಾನ್ಯವಾಗುತ್ತದೆ ಎಂದರು.

ಭಾರತೀಯ ಪರಂಪರೆಯಲ್ಲಿ ಅನೇಕ ಪತಿವ್ರತಿಯರು, ವೀರವನಿತೆಯರು, ಸಾಹಿತಿ ಕವಯತ್ರಿಯರು, ಸಾಧಕಿಯರು ಬಂದು ಹೋಗಿದ್ದಾರೆ. ಮಹಿಳೆg ಮನೆಮಟ್ಟಿನ ಕೆಲಸಕ್ಕೆ ಸೀಮಿತವಾಗದೆ ಎಲ್ಲ ರಂಗಗಳಲ್ಲೂ ಛಾಪು ಮೂಡಿಸಿರುವುದು ಕಂಡಿದ್ದೇವೆ. ಸೈನ್ಯ, ಯುದ್ಧರಂಗದಲ್ಲೂ ಹೆಣ್ಣುಮಕ್ಕಳು ಪಾಲ್ಗೊಳ್ಳುವ ಕಾಲಘಟ್ಟದಲ್ಲಿದ್ದೇವೆ.

ಹಿಂದಿನಿoದಲೂ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವಕಾಶವಿತ್ತು. ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಸ್ವಲ್ಪಮಟ್ಟಿನ ಆತಂಕ ಭಯದ ವಾತಾವರಣ ಮೂಡಿ ಹೆಣ್ಣುಮಕ್ಕಳನ್ನು ದೂರದ ಪ್ರದೇಶದಲ್ಲಿ ಶಿಕ್ಷಣಕ್ಕೆ ಕಳುಹಿಸುವುದನ್ನು ಕಡಿಮೆ ಮಾಡಿದ್ದು ಇತಿಹಾಸ.12ನೆಯ ಶತಮಾನದಲ್ಲಿ ಮಹಿಳೆಯರಿಗೆ ಇಷ್ಟೊಂದು ಅವಕಾಶಗಳಿರಲಿಲ್ಲ.ಆದರೂ ಮಹಾದೇವಿ ಅಕ್ಕ ದಿಟ್ಟತನದ ನಿಲುವುಗಳಿಂದ ನೆನಪಿನಲ್ಲಿ ಉಳಿದಿದ್ದಾರೆ ಎಂದರು.

ಶಿಕಾರಿಪುರ ತಾಲ್ಲೂಕಿನ ಉಡುತಡಿ ಪುಟ್ಟಗ್ರಾಮದ ನಿರ್ಮಲಶೆಟ್ಟಿ ಮತ್ತು ಸುಮತಿ ಸಂಪ್ರದಾಯಸ್ಥ ಶಿವಶರಣ ದಂಪತಿಗಳಿಗೆ ಬಹುಕಾಲ ಮಕ್ಕಳಿರಲಿಲ್ಲ. ಅವರು ಭಕ್ತಿಯಿಂದ ಶಿವಪಾರ್ವತಿಯರನ್ನು ಪೂಜೆಸಿ ಹೆಣ್ಣುಮಗು ಬೇಕೆಂಬದು ಸಂಕಲ್ಪಿಸಿದಾಗ ನವಮಾಸಗಳಲ್ಲಿ ದೇವರ ವರಪ್ರಸಾದದಿಂದ ಜನಿಸಿದ ಮಗು ಮಹಾದೇವಿ. ಶಾಂತ- ಗoಭೀರ ಸ್ವಭಾವದ ಬಾಲಕಿ ಮನೆಯ ಸುಸಂಸ್ಕೃತ ವಾತಾವರಣದಲ್ಲಿ ಬೆಳೆಯುತ್ತಾಳೆ. ವಯೋಸಹಜ ಚಂಚಲತೆ-ಛಾ0ಚಲ್ಯತೆಯಿ0ದ ವಿಮುಖಳಾಗಿ ಶಿವಭಕ್ತಳಾಗಿ ಬೆಳೆಯುತ್ತಾಳೆ. ಶಿವನನ್ನೆ ಸರ್ವಸ್ವವೆಂದು ಪರಿಭಾವಿಸುತ್ತಾಳೆ.ಮಗಳ ಮದುವೆಗೆ ಪೋಷಕರು ಸಿದ್ಧತೆ ನಡೆಸುತ್ತಾರೆ. ಸದ್ಯೋವಧುವಾಗಿ ಸಾಂಪ್ರದಾಯಕ ಸಂಸಾರ ನಡೆಸುವ ಸಲಹೆ
ನೀಡುತ್ತಾರೆ. ಆದರೆ ಬ್ರಹ್ಮವಾಹಿನಿಯಾಗಿ ಬ್ರಹ್ಮಚಾರಿಣಿ ಬದುಕಿನ ಆಯ್ಕೆ ಮಹಾದೇವಿಯದ್ದಾಗಿತ್ತು. ಅಲ್ಲಿಯ ರಾಜ ಕೌಶಿಕ ಮಹಾದೇವಿಯನ್ನು ನೋಡಿ ಇಷ್ಟಪಟ್ಟಾಗ ನಿಬಂಧನೆಗೊಳಪಟ್ಟು ಅನಿವಾರ‍್ಯವಾಗಿ ವಿವಾಹವಾಗುತ್ತಾಳೆ. ರಾಜ ನಿಬಂಧನೆ ಮುರಿದಾಗ ಎಲ್ಲವನ್ನೂ ತೊರೆದು ಕೇಶವನ್ನೆ ವಸ್ತ್ರವಾಗಿಸಿಕೊಂಡು ಅನುಭವಮಂಟಪ ಸೇರಿ ಅನುಭಾವದ ಚಿಂತನೆ ವಚನ ರಚನೆಯಲ್ಲಿ ತೊಡಗಿ ದಿಟ್ಟತನ ಮೆರೆಯುತ್ತಾಳೆ. ಅಕ್ಕನ ಬದುಕು, ದಿಟ್ಟನಿರ್ಧಾರಗಳು, ಸಮಾಜಮುಖಿ ಚಿಂತನೆಗಳು ನಮಗಿಂದು ಆದರ್ಶವಾಗಬೇಕೆಂದು ಸುಮಿತ್ರಾ ಕರೆ ನೀಡಿದರು.

ತಂಡದ ಮುಖಂಡೆ ಮಧುಮತಿ ಶಿವಕುಮಾರ್ ಪ್ರಾಸ್ತಾವಿಸಿ, ಹೆಣ್ಣು ಸಂಸಾರದ ಕಣ್ಣು. ಶಾಂತರೂಪದ ಸಾಧ್ವಿ ಹೆಣ್ಣಿನ ಬಗ್ಗೆ ಬಹಳಷ್ಟು ಬರಹಗಳು ಬಂದಿವೆ. ಮನೆ-ಮಕ್ಕಳನ್ನು ಸಂಬಾಳಿಸುವ ಜೊತೆಗೆ ಸಂಘಟಿತರಾಗಿ ಒಂದಷ್ಟು ವಿಚಾರಗಳ ಬಗ್ಗೆ ಚಿಂತನ-ಮoಥನ ನಡೆಸುವ ವೇದಿಕೆಯಿದು. ನಮ್ಮ ಪ್ರತಿಭೆಯ ಅನಾವರಣಕ್ಕೂ ಅವಕಾಶವಿದೆ. ಒತ್ತಡದ ಬದುಕಿನಲ್ಲಿ ಇಲ್ಲಿ ಸ್ವಲ್ಪ ಮನರಂಜನೆಯನ್ನೂ ಪಡೆಯುತ್ತೇವೆ. ಎರಡು ಅವಧಿಯಲ್ಲಿ ಮಾದಲಾಂಬಿಕೆ ತಂಡದ ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುವ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ.ಸಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಮುದಾಯದ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಇಲ್ಲಿ ಅವಕಾಶ ನೀಡುವುದರೊಂದಿಗೆ ಒಂದಷ್ಟು ಒಳ್ಳೆಯ ಸಂಗತಿಗಳನ್ನು ತಿಳಿದುಕೊಳ್ಳುವ ಪ್ರಯತ್ನ ಕಳೆದ 15 ವರ್ಷಗಳಿಂದ ನಡೆದುಕೊoಡು ಬಂದಿದೆ. ಮುಂಬರುವ ದಿನಗಳಲ್ಲೂ ಉತ್ತಮ ಕಾರ್ಯನಿರ್ವಹಿಸುವಂತಾಗಲು ಎಲ್ಲರ ಸಹಕಾರ ಅಗತ್ಯ ಎಂದರು.

ಮಮತಾಲಲಿತ್‌ಕುಮಾರ ಸ್ವಾಗತಿಸಿ, ಪ್ರೇಮಾಯೋಗೀಶ್ ನಿರೂಪಿಸಿ,ಯಮುನಾಚಂದ್ರಶೇಖರ್ ವಂದಿಸಿದರು. ಹಂಸಾಕಾರ್ತಿಕ್ ಮತ್ತು ಶೃತಿಗೌರಿಶಂಕರ್ ಪ್ರಾರ್ಥಿಸಿದ್ದು, ಸವಿತಾಪರಮೇಶ್ ಅತಿಥಿಗಳನ್ನು ಪರಿಚಯಿಸಿದರು.

ಕಾರ್ಯದರ್ಶಿ ರೇಖಾಉಮಾಶಂಕರ್, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕರ‍್ಯದರ್ಶಿ ನಾಗಮಣಿಕುಮಾರ್ ಮತ್ತಿತರರು ವೇದಿಕೆ ಯಲ್ಲಿದ್ದರು. ವಿವಿಧ ಸ್ಪರ್ಧಾವಿಜೇತರಿಗೆ ಕವಿತಾ ಮತ್ತು ಮಧುಮತಿ ಬಹುಮಾನ ವಿತರಿಸಿದರು. ಹೇಮಲತಾ, ಸುಧಾ ತಂಡದಿoದ ನೃತ್ಯಗಳೂ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
•••••••••••••••••••••••••••••

About Author

Leave a Reply

Your email address will not be published. Required fields are marked *