AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಾಡಿಗೆಗೆ ನೀಡುತ್ತಿದ್ದ ವೈಟ್ ಬೋರ್ಡ್ ಜಾಗ್ವಾರ್, ಬಿಎಂಡಬ್ಲೂ, ರೇಂಜ್ ರೋವರ್ ಕಾರುಗಳು ಸೀಜ್!*

1 min read

*ಬಾಡಿಗೆಗೆ ನೀಡುತ್ತಿದ್ದ ವೈಟ್ ಬೋರ್ಡ್ ಜಾಗ್ವಾರ್, ಬಿಎಂಡಬ್ಲೂ, ರೇಂಜ್ ರೋವರ್ ಕಾರುಗಳು ಸೀಜ್!*

ಬೆಂಗಳೂರು ನಗರದಲ್ಲಿ ಇಂದು ಸಾರಿಗೆ ಇಲಾಖೆ ಬೃಹತ್​ ಕಾರ್ಯಾಚರಣೆ ಮಾಡುವ ಮೂಲಕ, ಜಾಗ್ವಾರ್, ಬಿಎಂಡಬ್ಲೂ, ರೇಂಜ್ ರೋವರ್, ಸೇರಿದಂತೆ ಕೋಟ್ಯಂತರ ರೂ. ಬೆಲೆಬಾಳುವ 25 ಐಷಾರಾಮಿ ಕಾರುಗಳನ್ನು
ಆರ್​.ಟಿ.ಓ. ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಜೊತೆಗೆ 50 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

ಯಶವಂತಪುರ, ರಾಜಾಜಿ ನಗರ, ಮತ್ತಿಕೆರೆ, ಪೀಣ್ಯ, ಮಲ್ಲೇಶ್ವರಂ ಸೇರಿದಂತೆ ಅಕ್ಕಪಕ್ಕದ ಏರಿಯಾಗಳಲ್ಲಿ ಪ್ರತಿ ತಂಡದಲ್ಲೂ ಸಾರಿಗೆ ಇಲಾಖೆಯ ಇನ್ಸ್‌ಪೆಕ್ಟರ್​​​ ಒಳಗೊಂಡಂತೆ ಒಟ್ಟು 9 ತಂಡಗಳಿಂದ ಕಾರ್ಯಾಚರಣೆ ಮಾಡಲಾಗಿದೆ.
ಟ್ರಾವೆಲ್ಸ್ ಮಾಲೀಕರು ಔಡಿ, ಬಿಎಂಡಬ್ಲೂ, ಬೆನ್ಜ್, ವೋಲ್ವೋ ಸೇರಿದಂತೆ ಸಾಕಷ್ಟು ಐಷಾರಾಮಿ ವೈಟ್ ಬೋರ್ಡ್ ಕಾರುಗಳನ್ನು ಸೆಲೆಬ್ರಿಟಿಗಳಿಗೆ ಯೆಲ್ಲೋ ಬೋರ್ಡ್ ರೀತಿಯಲ್ಲಿ ಬಾಡಿಗೆಗೆ ನೀಡುತ್ತಿದ್ದಾರೆ. ನಿಯಮದ ಪ್ರಕಾರ ವೈಟ್ ಬೋರ್ಡ್ ಕಾರು ಇರುವುದು ಸ್ವಂತ ಬಳಕೆಗೆ. ಆದರೆ, ವೈಟ್ ಬೋರ್ಡ್ ಐಷಾರಾಮಿ ಕಾರುಗಳನ್ನು ದೊಡ್ಡ ಸಿನಿಮಾ ನಟರು ಸೇರಿದಂತೆ ಸೆಲೆಬ್ರಿಟಿಗಳಿಗೆ ಬಾಡಿಗೆ ನೀಡಲು ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಹಾಗಾಗಿ ಇಂದು ಆ ಕಾರುಗಳನ್ನು ಸೀಜ್ ಮಾಡಲಾಗಿದೆ.

About Author

Leave a Reply

Your email address will not be published. Required fields are marked *