ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ. ಮೂಡಿಗೆರೆ ಕಸಾಪ ವತಿಯಿಂದ.
1 min readಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ. ಮೂಡಿಗೆರೆ ಕಸಾಪ ವತಿಯಿಂದ.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಿತ್ತಲೆಗಂಡಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಒಗಟು ಬಿಡಿಸುವುದು, ಜಾನಪದ ಗೀತೆ ಸ್ಪರ್ಧೆ, ಹಾಗೂ ಅಂದವಾದ ಬರಹ ಸ್ಪರ್ದೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀ. ಡಿ.ಕೆ. ಲಕ್ಷ್ಮಣ್ ಗೌಡ ಅವರು ವಹಿಸಿದ್ದರು. ಹಳೇಕೋಟೆ ವಿಶ್ವಾಮಿತ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಪ್ರಸಾದ್ ಅವರು ಮಕ್ಕಳಿಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಯುವ ಮುಖಂಡರಾದ ಪ್ರದೀನ್ ರವರು, ನಿಕಟಪೂರ್ವ ಅಧ್ಯಕ್ಷರಾದ ಹೆಚ್.ಎಂ ಶಾಂತ್ ಕುಮಾರ್ ಅವರು, ಎಸ್.ಡಿ.ಎಂಸಿ ಅಧ್ಯಕ್ಷರಾದ ಶ್ರೀ.ಕೆ.ಎಲ್ ಪ್ರವೀಣ್ ರವರು, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಕ್ಕಿ ಅವಿ ಅವರು, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಶಬಾನ ಅವರು ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾ ಜಗದೀಪ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿಗಳಾದ ಬಕ್ಕಿ ಪ್ರಕಾಶ್ , ಸುಚಿತ್ರ ಪ್ರಸನ್ನ, ಸಹಕಾರ್ಯದರ್ಶಿಗಳಾದ ಇಂಪಾ ಸವಿನ್, ಪವನಾ ವಿಜಯ್ ಸಂಚಾಲಕರಾದ ನಾಗರಾಜ್, ಬೆಟ್ಟಗೆರೆ ಮಂಜುನಾಥ್, ದರ್ಪಣ ಸಂಪಾದಕರಾದ ಪ್ರಸನ್ನ ಗೌಡಳ್ಳಿ , ಹಾಗುಶಾಲೆಯ ಸಹ ಶಿಕ್ಷಕರು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.