day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj “ಹಳೇ ಮೂಡಿಗೆರೆ ಗ್ರಾ.ಪಂ.ಎದುರು ನಿವೇಶನಕ್ಕೆ ಪ್ರತಿಭಟನೆ : ಮಾಜಿ ಶಾಸಕ ಎಂ.ಪಿ.ಕೆ ಸಾಥ್.” – AVIN TV

लाइव कैलेंडर

September 2024
M T W T F S S
 1
2345678
9101112131415
16171819202122
23242526272829
30  

AVIN TV

Latest Online Breaking News

“ಹಳೇ ಮೂಡಿಗೆರೆ ಗ್ರಾ.ಪಂ.ಎದುರು ನಿವೇಶನಕ್ಕೆ ಪ್ರತಿಭಟನೆ : ಮಾಜಿ ಶಾಸಕ ಎಂ.ಪಿ.ಕೆ ಸಾಥ್.”

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಅನಾದಿಕಾಲದಿಂದಲೂ ಕಾಫಿ ತೋಟದ ಕೂಲಿ ಲೈನ್‍ಗಳಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತ ಕುಟುಂಬಗಳಿಗೆ ಕೂಡಲೇ ನಿವೇಶನ ಒದಗಿಸಬೇಕು ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಒತ್ತಾಯಿಸಿದರು.

ಅವರು ದಿನಾಂಕ 21/08/2024ರ ಬುಧವಾರ ಮೂಡಿಗೆರೆ ಸಮೀಪದ ಹಳೇಮೂಡಿಗೆರೆ ಗ್ರಾ.ಪಂ.ಕಾರ್ಯಾಲಯದ ಎದುರು ವಸತಿ ಮತ್ತು ನಿವೇಶನ ರಹಿತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ 2018ರಲ್ಲಿ ಸ.ನಂ.07ರಲ್ಲಿ ನಿವೇಶನಕ್ಕೆಂದು ಕಾಯ್ದಿರಿಸಿದ್ದ ಜಾಗದಲ್ಲಿ ಗುಡಿಸಲು ನಿರ್ಮಿಸಿ 1 ತಿಂಗಳು ನಿರಂತರವಾಗಿ ಹೋರಾಟ ನಡೆಸಿದ್ದರ ಫಲವಾಗಿ ತಾಲ್ಲೂಕು ಆಡಳಿತ ನಿವೇಶನ ರಹಿತರಿಗೆ 7.30 ಎಕರೆ ಜಾಗ ಮಂಜೂರು ಮಾಡಿದೆ.ಇದರಲ್ಲಿ ತಲಾ ಒಂದು ಎಕರೆ ಅಂಬೇಡ್ಕರ್ ಭವನಕ್ಕೆ,ಹಾಸ್ಟೆಲ್ ಕಟ್ಟಡಕ್ಕೆ ಮತ್ತು ಪೋಲಿಸ್ ವಸತಿ ಗೃಹಕ್ಕೆ ಹೀಗೆ ಒಟ್ಟು 3 ಎಕರೆ ಜಾಗ ಮೀಸಲಿರಿಸಲಾಗಿತ್ತು.ಉಳಿದ 4.30 ಎಕರೆ ಜಾಗವನ್ನು ನಿವೇಶನರಹಿತರ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಈ ಜಾಗದಲ್ಲಿ ಒಟ್ಟು 32ಕುಟುಂಬಗಳು 6 ವರ್ಷದಿಂದ ಗುಡಿಸಲು ಕಟ್ಟಿ ವಾಸಿಸುತ್ತಿದ್ದಾರೆ.ಪೂರ್ತಿ ಜಾಗ ಸಮತಟ್ಟು ಮಾಡಲಾಗಿದೆ.ಮತ್ತು ಬಡಾವಣೆಗೆ ಗ್ರಾ.ಪಂ.ನಿಂದ ಕುಡಿಯುವ ನೀರಿನ ವ್ಯವಸ್ತೆ ಮಾಡಲಾಗಿದೆ.ಆದರೆ ಇದುವರೆಗೂ ಫಲಾನುಭವಿಗಳ ಪಟ್ಟಿ ತಯಾರಿಸಿ ನಿವೇಶನ ಹಂಚಿಕೆ ಮಾಡಿಲ್ಲ.

ಕಳೆದ 15 ವರ್ಷದಿಂದ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ ಅದೇ ಸ್ಥಳದಲ್ಲಿ ಟೆಂಟ್ ನಿರ್ಮಿಸಿ ವಾಸಮಾಡುತ್ತಿರುವವರನ್ನು ಕಡೆಗಣಿಸಿ ಈಗ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಳೇಮೂಡಿಗೆರೆ ಗ್ರಾ.ಪಂ.ಆಡಳಿತ ಹೊರಟಿದೆ.ಇದರಿಂದ ನೈಜ ಫಲಾನುಭವಿಗಳಿಗೆ ಅನ್ಯಾಯ ಎಸಗಿದಂತಾಗುತ್ತದೆ ಎಂದು ದೂರಿದ ಅವರು ಲಾಟರಿ ಮೂಲಕ ಆಯ್ಕೆ ಮಾಡುವ ನಿರ್ಧಾರವನ್ನು ಗ್ರಾ.ಪಂ. ಕೈಬಿಡಬೇಕು.ನೈಜ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಬೇಕು.ಒಂದು ವಾರದೊಳಗೆ ನೈಜ ಫಲಾನುಭವಿಗಳಿಗೆ ನಿವೇಶನ ನೀಡದಿದ್ದಲ್ಲಿ ಆಗಸ್ಟ್ 30ರಂದು ನಡೆಯುವ ಹಳೇಮೂಡಿಗೆರೆ ಗ್ರಾ.ಪಂ.ನ ಗ್ರಾಮಸಭೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ತಾಲ್ಲೂಕಿನ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೂಲಿ ಲೈನ್ ನಲ್ಲಿ ವಾಸಿಸುವ ವಸತಿ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು ಅವರಿಗೆ ನಿವೇಶನ ಒದಗಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಡೀಮ್ಡ್ ಫಾರೆಸ್ಟ್ ಜಾಗವನ್ನು ಜಂಟಿ ಸರ್ವೆ ನಡೆಸಿ ಸುಪ್ರೀಮ್ ಕೋರ್ಟಿಗೆ 2017ರಲ್ಲಿ ಅಫಿಡವಿಟ್ ಸಲ್ಲಿಸಲಾಗಿತ್ತು.ಆ ಜಾಗ ಈಗ ಕಂದಾಯ ಇಲಾಖೆಗೆ ಬಂದಿದೆ. ಡೀಮ್ಡ್ ಜಾಗವನ್ನು ನಿವೇಶನ ಮಾಡಿ ಎಲ್ಲಾ ಗ್ರಾ.ಪಂ.ವ್ಯಾಪ್ತಿಯ ವಸತಿರಹಿತರಿಗೆ ನಿವೇಶನ ಒದಗಿಸಬೇಕು.ಇದರಲ್ಲಿ ಅಧಿಕಾರಿಗಳು ತಾರತಮ್ಯ ಮಾಡಬಾರದು ಎಂದು ತಾಕೀತು ನೀಡಿದರು.

ಪ್ರತಿಭಟನೆಯಲ್ಲಿ ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ಶಿವಪ್ಪ,ಕಾರ್ಯದರ್ಶಿ ಲಕ್ಷ್ಮಿ,ಜಾನಕಿ,ಶಾರದಾ,ಲಲಿತ, ಮಹಮ್ಮದ್ ಜುಬೇರ್,ರಾಮು,ಯಶೋಧ,ಶೇಖರ್, ಮಂಜುಳಾ,ವಿಠಲ,ಗೋಪಿ,ವನಜಾ,ಹರೀಶ್,ಭಾಷಾ, ಜೋಹರ,ಧರಣಪ್ಪ,ಹಸೈನಾರ್ ಮತ್ತಿತರರಿದ್ದರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *