“ಅಕ್ರಮ ಕೊಟ್ಟಿಗೆ..!!??..ಎರಡು ಗುಂಪುಗಳ ಕುತ್ತಿಗೆಗೆ..!!??.. ಹೊಡಿ.👊👊.ಬಡಿ.👋👋.ಕಡಿ.🪓🪓.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡು ಹೋಬಳಿಯ,ಹೊಸಮನೆ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ವ್ಯಕ್ತಿಯೋರ್ವರು ಅಕ್ರಮವಾಗಿ ಕೊಟ್ಟಿಗೆ ನಿರ್ಮಿಸಿದ್ದಾರೆಂಬ ಕಾರಣಕ್ಕೆ ಜುಲೈ 20ರಂದು ಎರಡು ಗುಂಪುಗಳ ನಡುವೆ ಮಾರಾಮಾರಿ ಗಲಭೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೊಟ್ಟಿಗೆ ಧ್ವಂಸ ಮಾಡಿರುವ ವಿಡಿಯೋ.
ಹೊಸಮನೆ ಗ್ರಾಮದ ರಾಜು ಎಂಬುವರು ಸುಧಾ ಎಂಬುವವರ ವಾಸದ ಮನೆ ಮುಂದೆ ತಿರುಗಾಡಲು ದಾರಿ ಬಿಡದೇ ರಸ್ತೆಯಲ್ಲಿಯೇ ಅನಧಿಕೃತವಾಗಿ ಕಳೆದ 1ವರ್ಷದ ಹಿಂದೆ ಕೊಟ್ಟಿಗೆ ನಿರ್ಮಿಸಿದ್ದರು.ಈ ಕಾರಣಕ್ಕೆ ಗ್ರಾಮದ ಸುಧಾ ಎಂಬುವವರು ಸ್ಥಳೀಯ ಗ್ರಾಮಪಂಚಾಯಿತಿಗೆ ದೂರು ನೀಡಿದ್ದರು.ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆ ಜಾಗ ಗ್ರಾಮಠಾಣಕ್ಕೆ ಬರುತ್ತದೆ,ಕೊಟ್ಟಿಗೆ ತೆರವುಗೊಳಿಸಬೇಕೆಂದು ಅನೇಕ ಬಾರಿ ರಾಜು ಅವರಿಗೆ ನೋಟೀಸು ನೀಡಿದ್ದರು.ಆದರೆ ಕೊಟ್ಟಿಗೆ ತೆರವುಗೊಳಿಸದ ಕಾರಣ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಕೊಟ್ಟಿಗೆ ತೆರವುಗೊಳಿಸಿದ್ದರು.ನಂತರ ರಾಜು ಮತ್ತೆ ಅದೇ ಜಾಗಕ್ಕೆ ಕೊಟ್ಟಿಗೆ ನಿರ್ಮಿಸಿಕೊಂಡಿದ್ದ ಕಾರಣ ಕಳೆದ ಶನಿವಾರ ರಾಜು ಹಾಗೂ ಸುಧಾ ಎಂಬುವರ ಗುಂಪಿನ ನಡುವೆ ಗಂಭೀರವಾದ ಗಲಭೆ ನಡೆದಿದೆ.
ಮಾರಾಮಾರಿ ನಡೆಯುತ್ತಿರುವ ವಿಡಿಯೋ.
ಅಲ್ಲದೇ ಕೊಟ್ಟಿಗೆಯನ್ನು ಒಡೆದು ದ್ವಂಸ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪುಗಳ ರಾಜು,ಸೃಜಯ್,ಸುಮನ್,ಸುಬ್ಬಯ್ಯ, ನೇಮಿಚಂದ್ರ,ಚೇತನ್,ಸುಧಾ,ಯು.ಬಿ.ಮಂಜಯ್ಯ,ಸತೀಶ್,ನಾಗರಾಜು,ಮಂಜುನಾಥ್,ಸುಧೀರ್,ಅಭಿ ಮತ್ತು ಇನ್ನಿತರರ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
✍️ಬರಹ ಕೃಪೆ.✍️
ಸಿದ್ದಿಕ್ ಚಕ್ಕಮಕ್ಕಿ.
7847891857.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
7847891857.