“ಒಂಟಿ ಸಲಗ ದಾಳಿ : ಕಾರ್ಮಿಕ ಆಸ್ಪತ್ರೆಗೆ ದಾಖಲು.”
1 min read
ಒಂಟಿ ಸಲಗ ದಾಳಿ ಮಾಡಿದ ಪರಿಣಾಮ ಮೂವರು ಕಾರ್ಮಿಕರು ಗಾಯಗೊಂಡ ಘಟನೆ ಹಾಸನ ಜಿಲ್ಲೆಯ, ಬೇಲೂರು ತಾಲ್ಲೂಕಿನ,ಅರೇಹಳ್ಳಿಯ ಬಾಳಗುಲಿಯಲ್ಲಿ ಶನಿವಾರ ಬೆಳಗ್ಗೆ 9:00 ಗಂಟೆ ಸಮಯದಲ್ಲಿ ನಡೆದಿದೆ.
ಅರೇಹಳ್ಳಿಯ ನಂಜಪ್ಪ ಸ್ಟೋರ್ ಮಾಲೀಕ ಮಾದೇಗೌಡ ಶುಕ್ರವಾರ ಮುಂಜಾನೆ ಮೃತಪಟ್ಟ ಹಿನ್ನಲೆ ಶನಿವಾರ ಅಂತ್ಯಸಂಸ್ಕಾರವನ್ನು ಬಾಳಗುಲಿಯ ತೋಟದಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದರು.
ಹಾಗಾಗಿ ಸೌದೆ ಮಾಡಲು ಮಲಸಾವರದ ಗಣೇಶ್ ಹಾಗೂ ಹಳೇ ಸಂತೆಮಾಳದ ನಿವಾಸಿ ಧರ್ಮೋಧರ ಬಾಳಗುಲಿಗೆ ತೆರಳಿ ಸೌದೆಯನ್ನು ಯಂತ್ರದ ಮೂಲಕ ತುಂಡರಿಸುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ.
ಇಬ್ಬರ ಮೇಲೆ ದಾಳಿ ಮಾಡಿದ ಬಳಿಕ ಅನತಿ ದೂರದಲ್ಲಿರುವ ಹಮೀದ್‌ರವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಉಲ್ಲಾಸ ನಗರದ ಕಾರ್ಮಿಕ ಮಹಿಳೆ ಪರಮೇಶ್ವರಿಯ ಮೇಲೆಯೂ ಸಹ ದಾಳಿ ನಡೆಸಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಬೇಲೂರು,ಸಕಲೇಶಪುರ ಆನೆ ಕಾರ್ಯಪಡೆ ಸಿಬ್ಬಂದಿಗಳು ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.