“ಜೀವಜಲದಲ್ಲಿ ಮುಳುಗಿದ ಎರಡು ಜೀವಗಳು.”
1 min readಶೃಂಗೇರಿ ಖಾಸಗಿ ಕಾಲೇಜಿನ ಅಂತಿಮ ಬಿ.ಕಾಂ ವಿದ್ಯಾರ್ಥಿಗಳು ನೆಮ್ಮಾರು ಸಮೀಪದ ತುಂಗಾ ನದಿಯ ತೂಗುಸೇತುವೆ ಬಳಿ ಈಜಲು ಹೋದ ಸಂದರ್ಭದಲ್ಲಿ ಮುಳುಗಿ ನೀರುಪಾಲಾದ ಘಟನೆ ನಡೆದಿದೆ.
ಮೃತರನ್ನು ಹರಿಹರಪುರದ ರಕ್ಷಿತ್ ಮತ್ತು ಶೃಂಗೇರಿ ಸಮೀಪದ ಸುಂಕದಮಕ್ಕಿಯ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಈಜುಬಾರದ ರಕ್ಷಿತ್ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡು ರಕ್ಷಿಸಲೆಂದು ಹೋದ ಪ್ರಜ್ವಲ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.
ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.