“ಅದ್ಧೂರಿ ಮತ ಪ್ರಚಾರಕ್ಕೆ ಆಗಮಿಸಲಿರುವ ರಾಜ್ಯದ ನಾಯಕರು.”
1 min read
ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದೆ. ಬಹಿರಂಗ ಪ್ರಚಾರಕ್ಕೆ ಮೂರ್ನಾಲ್ಕು ದಿನ ಬಾಕಿ ಇರುವಂತೆ ಪ್ರಚಾರದ ಭರಾಟೆ ಹೆಚ್ಚಾಗುತ್ತಿದೆ. ಒಂದೆಡೆ ಕಾರ್ಯಕರ್ತರು ಮನೆಮನೆ ಪ್ರಚಾರದಲ್ಲಿ ತೊಡಗಿದ್ದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರು ಬಹಿರಂಗ ಸಭೆ, ರೋಡ್ ಶೋ ಮೂಲಕ ಜನರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.
ದಿನಾಂಕ 05/05/2023ರ ಶುಕ್ರವಾರದಂದು ಮೂಡಿಗೆರೆಯಲ್ಲಿ ಜೆ.ಡಿ.ಎಸ್. ಅಭ್ಯರ್ಥಿ ಎಂ.ಪಿ. ಕುಮಾರಸ್ವಾಮಿ ಪರವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಪ್ರಚಾರ ನಡೆಸಲಿದ್ದಾರೆ. ಮೂಡಿಗೆರೆ ಕೋರ್ಟ್ ಎದುರು ಇರುವ ರಾಜೀವ್ ಕ್ರೀಡಾಂಗಣದಲ್ಲಿ ದೇವೇಗೌಡರು ದಿನಾಂಕ 05/05/2023ರ ಶುಕ್ರವಾರದಂದು ಮಧ್ಯಾಹ್ನ 1:೦೦ ಗಂಟೆಗೆ ಆಗಮಿಸಲಿದ್ದು ಬಹಿರಂಗ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಸಭೆಗೆ ಜೆ.ಡಿ.ಎಸ್. ಭರ್ಜರಿ ತಯಾರಿ ಮತ್ತು ಪ್ರಚಾರ ನಡೆಸುತ್ತಿದ್ದ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಇತ್ತ ಕಾಂಗ್ರೇಸ್ ಅಭ್ಯರ್ಥಿ ನಯನ ಮೋಟಮ್ಮ ಪರವಾಗಿ ಪ್ರಚಾರ ನಡೆಸಲು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮಿಸುತ್ತಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ದಿನಾಂಕ 05/05/2023ರ ಶುಕ್ರವಾರ ದಂದು ಮಧ್ಯಾಹ್ನ 2:30 ಗಂಟೆಗೆ ಹೊಯ್ಸಳ ಕ್ರೀಡಾಂಗಣದಲ್ಲಿ ಕಾಂಗ್ರೇಸ್ ಪಕ್ಷ ಆಯೋಜಿಸಿರುವ ಬಹಿರಂಗ ಚುನಾವಣಾ ಸಭೆಯಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಭಾಗವಹಿಸಲಿದ್ದಾರೆ.
ಕಾಂಗ್ರೇಸ್ ಪಕ್ಷ ಡಿ.ಕೆ. ಶಿವಕುಮಾರ್ ಸಭೆಯ ಮೂಲಕ ತನ್ನ ಶಕ್ತಿಪ್ರದರ್ಶನ ಮಾಡಲು ತಯಾರಿ ನಡೆಸುತ್ತಿದೆ.
ಇನ್ನೂ ಹೋರಾಟದ ಪಕ್ಷ ಎಂದು ದೇಶದಲ್ಲೇ ಗುರುತಿಸಿಕೊಂಡಿರುವ ಸಿ.ಪಿ.ಐ ಪಕ್ಷವೇನು ರಾಷ್ಟ್ರೀಯ ಪಕ್ಷಗಳಿಗಿಂತ ಕಮ್ಮಿಯಿಲ್ಲ ಎಂಬಂತೆ ಅವರು ಕೂಡ ಪೈಪೋಟಿಗಿಳಿದಿದ್ದಾರೆ.
ದಿನಾಂಕ 05/05/2023ರ ಶುಕ್ರವಾರದಂದು ಬಹಿರಂಗ ಸಭೆ ಮತ್ತು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಸಿ.ಪಿ.ಐ ಪಕ್ಷದ ಕೇರಳ ರಾಜ್ಯಸಭಾ ಸದಸ್ಯರಾದ ಸಂತೋಷ್ ಕುಮಾರ್ ಮತ್ತು ಸಾಹಿತಿಗಳು ಹಾಗೂ ಸಿ.ಪಿ.ಐ ಪಕ್ಷದ ಮುಖಂಡರಾದ ಸಿದ್ಧನ ಗೌಡ ಪಾಟೀಲ್ ಅವರು ದಿನಾಂಕ 05/05/2023ರ ಶುಕ್ರವಾರದಂದು ಮಧ್ಯಾಹ್ನ 3:೦೦ ಗಂಟೆಗೆ ಆಗಮಿಸಲಿದ್ದು ಸಿ.ಪಿ.ಐ ಪಕ್ಷದ ಅಭ್ಯರ್ಥಿ ರಮೇಶ್ ಕೆಳಗೂರು ಅವರ ಪರವಾಗಿ ಮತಬೇಟೆಯಾಡಲಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

