AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

1ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ ಬ್ಯಾಗ್, ಪೆನ್ನು, ಪೆನ್ಸಿಲ್ ಮತ್ತು ನೋಟ್ ಬುಕ್ ವಿತರಿಸಿದ್ದು, ಅಂಗನವಾಡಿ ಮಕ್ಕಳಿಗೆ ಸ್ಲೇಟು ಬಳಪ ಕೊಡಲಾಯಿತು.

1 min read

ದಿನಾಂಕ 13-07-2026 ರಂದು ಡಾ. ಕೆ ಮಧುಕರ್ ಶೆಟ್ಟಿ ಐ ಪಿ ಎಸ್ ಸಮಾಜ ಸೇವಾ ಸಂಘ (ರಿ) ಗುಪ್ತಶೆಟ್ಟಿ ಹಳ್ಳಿ ಅಲ್ದೂರು ಹೋಬಳಿ ಚಿಕ್ಕಮಗಳೂರು ತಾಲೂಕು ಚಿಕ್ಕಮಗಳೂರು ಜಿಲ್ಲೆ.ಇಂದು ಬೆಳಗ್ಗೆ ಬಣಕಲ್ ಹೋಬಳಿಯ ತಳವಾರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 11:00ಗಂಟೆಗೆ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಶಾಲೆಗೆ ಭೇಟಿಕೊಟ್ಟು ಶಾಲೆಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ 𝚂𝙳𝙼𝙲 ಅಧ್ಯಕ್ಷರು ಸುರೇಶ ಕಬ್ಬಿನಗದ್ದೆ, ಉಪಾಧ್ಯಕ್ಷರಾದ ಸರಿತಾ,ಮುಖ್ಯ ಶಿಕ್ಷಕರು ಶೈಲಾರಾದ್ಯ , ಅಂಗನವಾಡಿ ಶಿಕ್ಷಕಿ ಗಾಯತ್ರಿ, ಅರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಡಾ. ಕೀರ್ತಿ ಹಾಗೂ ಶಿಲ್ಪಾ ಟಿ,ಗ್ರಾಮಸ್ಥರು ಮತ್ತು ಪೋಷಕರು ಭಾಗವಹಿಸಿದರು. 1ರಿಂದ 5ನೇ ತರಗತಿ ಮಕ್ಕಳಿಗೆ ಶಾಲೆ ಬ್ಯಾಗ್, ಪೆನ್ನು, ಪೆನ್ಸಿಲ್ ಮತ್ತು ನೋಟ್ ಬುಕ್ ವಿತರಿಸಿದ್ದು, ಅಂಗನವಾಡಿ ಮಕ್ಕಳಿಗೆ ಸ್ಲೇಟು ಬಳಪ ಕೊಡಲಾಯಿತು. ಈ ಕಾರ್ಯಕ್ರಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬೈರಿಗದ್ದೆ ರಮೇಶ್ ರವರ ನೇತೃತ್ವದಲ್ಲಿ ನಡೆಸಲಾಯಿತು. ಕೋಶಾಧಿಕಾರಿ ಮಣಿಕಂಠ ಬಿ ಆರ್ ಹಾಗೂ ಸದಸ್ಯರಾದ ಕಿರಣ್ ಬಿ ಆರ್, ನಿಖಿಲ್ ಬಿ ಸಿ,ಕಿಶೋರ್ ಬಿ ಆರ್, ಅನಿಲ್, ಪುಟ್ಟಯ್ಯ, ನಾರಾಯಣ, ಮತ್ತು ಗ್ರಾಮಸ್ಥರಾದ ದರ್ಮೇಶ್, ಸುನಿತಾ, ಸಲಿತಾ, ಕೀರ್ತಿ, ಶ್ರೀನಿವಾಸ, ನಾಗೇಶ್ ಗೌಡ್ರು,ಪೂರ್ಣೇಶ್ ಹೆಬ್ಬರಿಗೆ ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

You may have missed